ದೇಶಕ್ಕೆ ಇನ್ನೆರಡು ರೆನಾಲ್ಟ್ ಕಾರುಗಳು ಬರಲಿವೆಯಂತೆ!

Posted By:
Renault will launch two more cars India in 2012
ಪ್ರಸಕ್ತ ವರ್ಷ ದೇಶದ ರಸ್ತೆಗೆ ಎರಡು ನೂತನ ಕಾರುಗಳನ್ನು ಪರಿಚಯಿಸಲು ಫ್ರಾನ್ಸಿನ ವಾಹನ ತಯಾರಿಕಾ ಕಂಪನಿ ರೆನಾಲ್ಟ್ ಯೋಜಿಸಿದೆ. ಇದರಲ್ಲಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಡಸ್ಟರ್ ಕೂಡ ಸೇರಿದೆ.

"ಕಂಪನಿಯು ಭಾರತಕ್ಕೆ ವಿವಿಧ ಮಾದರಿಯ ನೂತನ ವಾಹನಗಳನ್ನು ಪರಿಚಯಿಸಲಿದೆ. ರಷ್ಯಾ ಮತ್ತು ಬ್ರೆಝಿಲ್ ನಂತರದ ಮೂರನೇ ಬೃಹತ್ ವಾಹನ ಮಾರುಕಟ್ಟೆಯಾದ ಭಾರತದಲ್ಲಿ ಕಂಪನಿಯು ಹಲವು ವಿಸ್ತರಣಾ ಯೋಜನೆಗಳನ್ನು ಹೊಂದಿದೆ" ಎಂದು ರೆನಾಲ್ಟ್ ಕಂಪನಿಯು ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಕಳೆದ ವರ್ಷ ಕಂಪನಿಯು ರೆನಾಲ್ಟ್ ಕೊಲಿಯೊಸ್ ಮತ್ತು ರೆನಾಲ್ಟ್ ಫ್ಲೂಯೆನ್ಸ್ ಕಾರುಗಳನ್ನು ಅನಾವರಣ ಮಾಡಿತ್ತು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ರೆನಾಲ್ಟ್ ಕಂಪನಿಯು ಪಲ್ಸ್ ಎಂಬ ಕಾರನ್ನು ಹೊರತಂದಿತ್ತು.

ನೂತನ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಡಸ್ಟರ್ ಈ ವರ್ಷದ ದೀಪಾವಳಿಗೆ ಮುನ್ನ ರಸ್ತೆಗಿಳಯುವ ನಿರೀಕ್ಷೆಯಿದೆ. ಇದೇ ವರ್ಷದ ಅಂತ್ಯದೊಳಗೆ ಕಂಪನಿಯು ಮತ್ತೊಂದು ಕಾರನ್ನು ಕೂಡ ಹೊರತರಲಿದೆಯಂತೆ. ಅದರ ಹೆಸರು ಬಹಿರಂಗಗೊಂಡಿಲ್ಲ. ಯುರೋಪ್ ನಿಂದಾಚೆಗೆ ಕಂಪನಿಯ ಮಾರಾಟ ವಹಿವಾಟು ಈಗ ಶೇಕಡ 19.2ರಷ್ಟು ಏರಿಕೆ ಕಂಡಿದೆ ಎಂದು ಕಂಪನಿ ಹೇಳಿದೆ.

English summary
Renault will launch two more cars in India in 2012. Company to be launched sports utility vehicle (SUV) Duster before Diwali this year.
Story first published: Wednesday, January 18, 2012, 10:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark