ಅಗ್ಗದ ಪುಟ್ಟ ರೆನೊ ಕಾರು ಬರಲಿದೆಯಂತೆ!

Posted By:

ದೇಶದ ಕಾರು ಮಾರುಕಟ್ಟೆಯಲ್ಲಿ ಸಾಕಷ್ಟು ವಿಸ್ತರಣಾ ಯೋಜನೆಗಳನ್ನು ರೆನೊ ಹೊಂದಿದೆ. ಫ್ರಾನ್ಸಿನ ಕಾರು ಕಂಪನಿಯು ಸಣ್ಣಕಾರೊಂದನ್ನು ಪರಿಚಯಿಸಲು ಯೋಜಿಸಿದೆ. ಈ ಕಾರಿನ ದರ 4.5 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ.

ನೂತನ ಸಣ್ಣಕಾರಿನ ಬಗ್ಗೆ ಮಾಹಿತಿ ನೀಡಿದ್ದು ರೆನೊ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮಾರ್ಕ್ ನಾಸೀಫ್. ಕೇರಳದಲ್ಲಿ ನೂತನ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಡಸ್ಟರ್ ಪರಿಚಯಿಸುವ ಸಂದರ್ಭದಲ್ಲಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ನವೆಂಬರಿಗಿಂತ ಮುನ್ನ ಎಂಟ್ರಿ ಲೆವೆಲ್ ಸೆಡಾನ್ ಕಾರು ಪರಿಚಯಿಸುವುದಾಗಿ ರೆನೊ ಈ ಹಿಂದೆ ಹೇಳಿತ್ತು. "ದೀಪಾವಳಿ ವೇಳೆಗೆ ಸಣ್ಣ ಸೆಡಾನ್ ಕಾರನ್ನು ಪರಿಚಯಿಸಲಿದ್ದೇವೆ. ಜೊತೆಗೆ ಸಣ್ಣಕಾರೊಂದನ್ನು ಅಭಿವೃದ್ಧಿಪಡಿಸುತ್ತಿದ್ದೇವೆ" ಎಂದು ನಾಸೀಫ್ ಹೇಳಿದ್ದಾರೆ. ಆದರೆ ಅವರು ಸಣ್ಣಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಪ್ರಸಕ್ತ ವರ್ಷ ಐದು ಹೊಸ ಕಾರುಗಳನ್ನು ಪರಿಚಯಿಸುವುದಾಗಿ ಈ ಹಿಂದೆ ರೆನೊ ಭರವಸೆ ನೀಡಿತ್ತು. ಫೋರ್ಡ್ ಫಿಗೊ, ಹ್ಯುಂಡೈ ಐ10, ಮಾರುತಿ ಸುಜುಕಿ ವ್ಯಾಗನಾರ್, ಎಸ್ಟಾರ್ ಇತ್ಯಾದಿ ಕಾರುಗಳಿಗೆ ಪೈಪೋಟಿ ನೀಡುವಂತಹ ಕಾರೊಂದನ್ನು ಪರಿಚಯಿಸಲು ಕಂಪನಿ ನಿರ್ಧರಿಸಿದೆ.

ಕಂಪನಿಯು ಈಗಾಗಲೇ ರೆನೊ ಪಲ್ಸ್ ಎಂಬ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಕಾರು ಪರಿಚಯಿಸಿದೆ. ರೆನೊ ಪಲ್ಸ್ ಬೇಸ್ ಆವೃತ್ತಿ ದರ ಸುಮಾರು 6 ಲಕ್ಷ ರು. ಆಸುಪಾಸಿನಲ್ಲಿದೆ. 2013ರ ಅಂತ್ಯದೊಳಗೆ ದೇಶದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸುವ ಯೋಜನೆಯನ್ನು ಕಂಪನಿ ಹೊಂದಿದೆ.

English summary
Renault India is looking to launch a new small car in the country. Renault is working on the small car which will be placed in the below Rs 4.5 lakh segment.
Story first published: Tuesday, July 17, 2012, 11:47 [IST]
Please Wait while comments are loading...

Latest Photos