ಸಚಿನ್ ಅನಾವರಣ ಮಾಡಲಿರುವ ಬಿಎಂಡಬ್ಲ್ಯು ಕಾರು

Posted By: Super
Sachin Tendulkar To Unveil New BMW 3-Series
ಮುಂಬೈ, ಜು 27: ಬಹುನಿರೀಕ್ಷಿತ 2012 ಬಿಎಂಡಬ್ಲ್ಯು 3 ಸೀರಿಸ್ ಕಾರನ್ನು ಸಚಿನ್ ತೆಂಡೂಲ್ಕರ್ ಅನಾವರಣ ಮಾಡಲಿದ್ದಾರೆ. ಈ ಕುರಿತ ಪತ್ರಿಕಾ ಪ್ರಕಟಣೆಯನ್ನು ನಮ್ಮ ವರದಿಗಾರ ಮುಂಬೈನಿಂದ ಈಗಷ್ಟೇ ಕಳುಹಿಸಿಕೊಟ್ಟಿದ್ದಾರೆ. ಅದರ ಟಿಪ್ಪಣಿ ಇಲ್ಲಿದೆ. ನೂತನ ಕಾರಿನ ದರ ಮಾಹಿತಿಗೆ ಕ್ಲಿಕ್ ಮಾಡಿ

ಬಿಎಂಡಬ್ಲ್ಯು ಕಂಪನಿಯ ಅಲ್ಟಿಮೆಟ್ 3 ಅದ್ದೂರಿ ಕಾರೊಂದನ್ನು ಸಚಿನ್ ತೆಂಡೂಲ್ಕರ್ ಅನಾವರಣ ಮಾಡಲಿದ್ದಾರೆ. ಇದು ಸ್ಪೋರ್ಟ್ಸ್ ಲೈನ್ ಮತ್ತು ಲಗ್ಷುರಿ ಆಯ್ಕೆಗಳಲ್ಲಿ ದೊರಕುತ್ತದೆ. ಆರನೇ ತಲೆಮಾರಿನ ನೂತನ 3 ಸೀರಿಸ್ ಕಾರು ಜಗತ್ತಿನ ಯಶಸ್ವಿ ಪ್ರೀಮಿಯಂ ಸೆಡಾನ್ ಕಾರಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ನೂತನ ಬಿಎಂಡಬ್ಲ್ಯು 3 ಸೀರಿಸ್ ಕಾರನ್ನು ಚೆನ್ನೈ ಘಟಕದಲ್ಲಿ ಕಂಪ್ಲಿಟ್ಲಿ ನಾಕ್ಡ್ ಡೌನ್(ಸಿಕೆಡಿ) ಮೂಲಕ ಅಸೆಂಬಲ್ ಮಾಡುವುದಾಗಿ ಕಂಪನಿಯು ಹೇಳಿದೆ. ವಿಶೇಷವೆಂದರೆ ಕಂಪನಿಯು ಪ್ರಸಕ್ತ ತಿಂಗಳಲ್ಲಿಯೇ ನೂತನ ಕಾರಿನ ಡೆಲಿವರಿ ಆರಂಭಿಸಲಿದೆ.

"ಸುಂದರ ವಿನ್ಯಾಸ, ಪ್ಯಾಷನ್ ಮತ್ತು ಸಾಟಿಯಿಲ್ಲದ ತಂತ್ರಜ್ಞಾನದೊಂದಿಗೆ ನೂತನ ಆರನೇ ತಲೆಮಾರಿನ 6 ಸೀರಿಸ್ ಕಾರು ಆಗಮಿಸಿದೆ" ಎಂದು ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷರಾದ ಡಾ. ಆಂಡ್ರೂಸ್ ಸ್ಕಾಫ್ ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ.

English summary
The new BMW 3-Series will be unveiled by Indian cricket great Sachin Tendulkar in Mumbai today. The new 3-series is priced between Rs.28.90 lakhs and Rs.37.90 lakhs. The sixth generation BMW 3-series will be built as a CKD in Chennai and Deliveries are expected to begin this mont itself.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark