ನೂತನ ವ್ಯಾಗನಾರ್ ಕಾರು: ವಿಶೇಷ ವಿಮರ್ಶೆ

Posted By: Super

ಇತ್ತೀಚೆಗೆ ಜಪಾನ್ ರಸ್ತೆಗೆ ಸುಜುಕಿ ಕಂಪನಿಯು ಹೊಸ ವಿನ್ಯಾಸದ ವ್ಯಾಗನಾರ್ ಕಾರೊಂದನ್ನು ಪರಿಚಯಿಸಿದೆ. ಜಪಾನಿನಲ್ಲಿ ಪರಿಚಯಿಸಿರುವ ನೂತನ ವ್ಯಾಗನಾರ್ ಕಾರು ಮುಂದೊಂದು ದಿನ ದೇಶದ ರಸ್ತೆಗೂ ಆಗಮಿಸುವ ಸಾಧ್ಯತೆಯಿದೆ.

ನೂತನ ವ್ಯಾಗನಾರ್ 660 ಸಿಸಿ ಎಂಜಿನ್ ಹೊಂದಿದ್ದು, ಪ್ರತಿಲೀಟರ್ ಪೆಟ್ರೋಲಿಗೆ 28.8 ಕಿ.ಮೀ. ಮೈಲೇಜ್ ನೀಡುತ್ತದೆ. ಇದು ಅತ್ಯಧಿಕ ಮೈಲೇಜ್ ಕಾರು. ಸದ್ಯ ದೇಶದ ರಸ್ತೆಯಲ್ಲಿರುವ ವ್ಯಾಗನಾರ್ ಕಾರಿಗೆ ಹೋಲಿಸಿದರೆ ನೂತನ ವ್ಯಾಗನಾರ್ ಸಾಕಷ್ಟು ಬದಲಾಗಿದೆ. ಕೆಳಗಿನ ಫೋಟೊ ಫೀಚರ್ ನೋಡಿ.

ನೂತನ ಸುಜುಕಿ ವ್ಯಾಗನಾರ್ ಕಾರು ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಹಾಗಂತ ಇದು ಎಲೆಕ್ಟ್ರಿಕ್ ಕಾರಲ್ಲ. ಕಾರಿನೊಳಗಿರುವ ಏರ್ ಕಂಡಿಷನ್ ಇತ್ಯಾದಿಗಳಿಗೆ ಲೀಥಿಯಂ ಬ್ಯಾಟರಿ ಮೂಲಕ ವಿದ್ಯುತ್ ಒದಗಿಸಲಾಗುತ್ತದೆ.

ಹಳೆಯ ವ್ಯಾಗನಾರ್ ಕಾರಿಗಿಂತ ನೂತನ ವ್ಯಾಗನಾರ್ ತೂಕ ಕಡಿಮೆಯಾಗಿದೆ. ಈ ಕಾರನ್ನು ಹಗುರ ಮತ್ತು ಸದೃಢ ಸ್ಟೀಲ್ ಮೂಲಕ ನಿರ್ಮಿಸಲಾಗಿದೆ. ವ್ಯಾಗನಾರ್ ಕಾರಿನ ಇಂಧನ ದಕ್ಷತೆ ಹೆಚ್ಚಿಸಲು ತೂಕ ಕಡಿಮೆಯಾಗಿರುವುದು ನೆರವಾಗಿದೆ.

ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ದೇಶದ ರಸ್ತೆಗೆ ವ್ಯಾಗನಾರ್ ಪ್ರೊ ಎಂಬ ಸ್ಪೆಷಲ್ ಅಡಿಷನ್ ಕಾರನ್ನು ಪರಿಚಯಿಸಿತ್ತು. ಇದರ ದರ ಹಳೆಯ ವ್ಯಾಗನಾರ್ ಕಾರಿಗಿಂತ 20 ಸಾವಿರ ರು. ಹೆಚ್ಚಿದೆ.

ಮುದ್ದಾದ ಎತ್ತರದ ಹುಡುಗ

ಮುದ್ದಾದ ಎತ್ತರದ ಹುಡುಗ

ಹಳೆಯ ವ್ಯಾಗನಾರಿಗೆ ಹೋಲಿಸಿದರೆ ನೂತನ ಕಾರು ತುಂಬಾ ಕ್ಯೂಟ್ ಆಗಿ ಕಾಣಿಸುತ್ತದೆ. ಹೊಸ ಹೆಡ್ ಲ್ಯಾಂಪ್, ನೂತನ ಗ್ರಿಲ್, ಹೊಸ ಬದಲಾವಣೆಗಳು ಇದರ ಅಂದರ ಹೆಚ್ಚಿಸಿವೆ. ವ್ಯಾಗನಾರ್ ಹಿಂಭಾಗ ಏನಾಗಿದೆ. ಮುಂದಿನ ಚಿತ್ರ ನೋಡಿ.

ವ್ಯಾಗನಾರ್ ಹಿನ್ನೋಟ

ವ್ಯಾಗನಾರ್ ಹಿನ್ನೋಟ

ಹಿಂದಿನಿಂದ ನೋಡಿದರೆ ಹೊಸ ವ್ಯಾಗನಾರ್ ಕಾರಲ್ಲಿ ಅಂತಹ ಮಹತ್ವದ ಬದಲಾವಣೆಗಳು ಕಾಣುವುದಿಲ್ಲ. ಇದು ನೋಡಲು ಹಳೆಯ ವ್ಯಾಗನಾರಿನ ಹಿಂಭಾಗದಂತೆಯೇ ಇದೆ. ಆದರೆ ಬದಲಾಗಿರುವುದು ಕಾರಿನ ಒಳಭಾಗ. ಮುಂದಿನ ಪುಟ ನೋಡಿ.

ಇಂಟಿರಿಯರ್ ಸೂಪರ್

ಇಂಟಿರಿಯರ್ ಸೂಪರ್

ಹೊಸ ವ್ಯಾಗನಾರ್ ಕಾರಿನ ಇಂಟಿರಿಯರ್ ಆಕರ್ಷಕವಾಗಿದೆ. ವ್ಯಾಗನಾರ್ ಕಾರಿನೊಳಗಿನ ಬಣ್ಣ, ವಿನ್ಯಾಸಗಳಿಂದಾಗಿ ಇದರ ಲುಕ್ ಹೆಚ್ಚಾಗಿದೆ. ನೋಡಲು ಲಗ್ಷುರಿ ಕಾರಿನಂತೆ ಭಾಸವಾಗುತ್ತದೆ.

ಸ್ಟಾರ್ಟ್ ಆಂಡ್ ಸ್ಟಾಪ್

ಸ್ಟಾರ್ಟ್ ಆಂಡ್ ಸ್ಟಾಪ್

ನೂತನ ವ್ಯಾಗನಾರ್ ಕಾರಲ್ಲಿ ಸ್ಟಾರ್ಟ್ ಸ್ಟಾಪ್ ಬಟನ್ ಇದೆ. ನಿಸ್ಸಾನ್ ಸನ್ನಿ ಮುಂತಾದ ಕಾರುಗಳಲ್ಲಿರುವ ಇಂತಹ ಫೀಚರ್ ಹಳೆಯ ವ್ಯಾಗನಾರ್ ಕಾರಲ್ಲಿ ಇರಲಿಲ್ಲ. ಈ ಕಾರಲ್ಲಿ ಒಂದು ವಿಶೇಷ ಆಕರ್ಷಣೆಯಿದೆ. ಮುಂದಿನ ಪುಟ ನೋಡಿ.

ಗೇರ್ ಎಲ್ಲಿದೆ ನೋಡಿ?

ಗೇರ್ ಎಲ್ಲಿದೆ ನೋಡಿ?

ನೂತನ ವ್ಯಾಗನಾರ್ ಕಾರಿನ ಗೇರ್ ಸೆಂಟ್ರಲ್ ಕನ್ಸೋಲಿನಲ್ಲಿ ಫಿಟ್ ಮಾಡಲಾಗಿದೆ. ಇದು ಆಟೋಮ್ಯಾಟಿಕ್ ಗೇರ್ ಕಾರಾಗಿರುವುದರಿಂದ ಇಂತಹ ವಿಶೇಷತೆಯಿದೆ. ಮೂರು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಟಿಲ್ಟ್ ಸ್ಟಿಯರಿಂಗ್ ಇದರ ಇನ್ನೊಂದು ವಿಶೇಷತೆ. ಇಷ್ಟೇ ಅಲ್ಲ. ಮುಂದಿನ ಪುಟ ನೋಡಿ.

ಮ್ಯೂಸಿಕ್ ಮಸ್ತಿ

ಮ್ಯೂಸಿಕ್ ಮಸ್ತಿ

ನೂತನ ವ್ಯಾಗನಾರ್ ಕಾರಲ್ಲಿ ಮನರಂಜನೆಗೆ ಅತ್ಯುತ್ತಮವಾದ ಆಡಿಯೋ ಸಿಸ್ಟಮ್ಸ್ ಇದೆ. ತಣ್ಣನೆಯ ಗಾಳಿ ಬೀಸಲು ಏಸಿ ವೆಂಟುಗಳಿವೆ. ಮುಂದಿನ ಚಿತ್ರಕ್ಕೆ ಸುಸ್ವಾಗತ.

ಸ್ಥಳಾವಕಾಶ ಬೊಂಬಾಟ್

ಸ್ಥಳಾವಕಾಶ ಬೊಂಬಾಟ್

ನೂತನ ವ್ಯಾಗನಾರ್ ಕಾರಿನಲ್ಲಿ ಸಾಕಷ್ಟು ಸ್ಗಳಾವಕಾಶವಿದೆ. ಲೆಗ್ ರೂಂ, ಹೆಡ್ ರೂಂ, ಲಗೇಜ್ ಸ್ಥಳಾವಕಾಶ ವಿಶಾಲವಾಗಿದೆ. ಇದರ ಸೀಟುಗಳನ್ನು ಮಡುಚಿ ಬೆಡ್ ತರಹ ಬಳಸಬಹುದು. ಅಥವಾ ಲಗೇಜ್ ಸ್ಥಳಾವಕಾಶ ಹೆಚ್ಚಿಸಿಕೊಳ್ಳಬಹುದು. ಹೊಸ ವ್ಯಾಗನಾರ್ ನಿಮ್ಗೆ ಇಷ್ಟವಾಯಿತಾ?

English summary
Japanese car major Suzuki Motor Co has recently launched the 2012 Wagon R hatchback in Japan. The second generation 2013 Suzuki Wagon R is powered by 660cc 3 cylinder, petrol engine and boost so many unique features in its segment. Have a detailed look it here.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more