ಬಿಗ್ ಬಜಾರಲ್ಲಿ ಟಾಟಾ ಇಂಡಿಗೊ ಇಸಿಎಸ್ ಸಿಗುತ್ತಾ?

ಟಾಟಾ ಇಂಡಿಗೊ ಇಸಿಎಸ್ ಕಾರಿಗೆ ಬಿಗ್ ಬಜಾರಲ್ಲಿ ಜಾಹೀರಾತು ನೀಡುವುದು ಈ ಒಪ್ಪಂದದ ಪ್ರಮುಖ ಉದ್ದೇಶ. ಇಂಡಿಗೊ ಇಸಿಎಸ್ ಕಾರಿನ ಮೈಲೇಜ್ ಇತ್ಯಾದಿಗಳನ್ನು ಪ್ರಮುಖ ಘೋಷಣೆಯಾಗಿಟ್ಟುಕೊಂಡು ಈ ಜಾಹೀರಾತು ಅಭಿಯಾನ ಆರಂಭಿಸಲಾಗಿದೆ.
"ದೇಶದ ವಾಹನ ಮಾರುಕಟ್ಟೆ ಏರುಗತಿಯಲ್ಲಿದೆ. ಈಗ ಗ್ರಾಹಕರು ತಾವು ಏನು ಖರೀದಿಸದರೂ ದಕ್ಷತೆ ಹುಡುಕುತ್ತಾರೆ. ವಾಹನಗಳಲ್ಲಿ ಇಂಧನ ದಕ್ಷತೆ ಅತ್ಯಂತ ಪ್ರಮುಖ ಅಂಶ. ಬಿಗ್ ಬಜಾರ್ ಜೊತೆ ಮೈತ್ರಿ ಮಾಡಿಕೊಂಡು ಟಾಟಾ ಇಂಡಿಗೊ ಇಸಿಎಸ್ ಮೂಲಕ ಮೈಲೇಜ್ ಸಂದೇಶವನ್ನು ನೀಡುವುದು ಈ ಒಪ್ಪಂದದ ಉದ್ದೇಶವಾಗಿದೆ" ಎಂದು ಟಾಟಾ ಮೋಟರ್ಸ್ ಕಾರು ಪ್ರಾಡಕ್ಟ್ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ವಿರತ್ ಖುಲ್ಲಾರ್ ಹೇಳಿದ್ದಾರೆ.
ಕಂಪನಿಯು ಹೈಪರ್ ಮಾರ್ಕೆಟ್ ಬಿಗ್ ಬಜಾರಿನ 400 ಮಾಲ್ ಗಳಲ್ಲಿ ಈ ಜಾಹೀರಾತು ನೀಡಲಿದೆ. "ಟಾಟಾ ಮೋಟರ್ಸ್ ಜೊತೆ ಸವಿಯಾದ ಸಂಬಂಧ ಮುಂದುವರೆಸುವುದು ನಮಗೆ ಇನ್ನಷ್ಟು ಸಂತೋಷ, ಸಡಗರ ನೀಡಿದೆ. ಇಂತಹ ಪ್ರತಿಷ್ಠಿತ ಬ್ರಾಂಡ್ ಜೊತೆ ಕೆಲಸ ಮಾಡುವುದು ನಮಗೂ ಹೆಮ್ಮೆಯ ವಿಚಾರ. ಇಂಡಿಗೊ ಇಸಿಎಸ್ ಮೈಲೇಜ್ ಎಲ್ಲರೂ ಇಷ್ಟಪಡುವ ವಿಚಾರ" ಎಂದು ಫ್ಯೂಚರ್ ಮೀಡಿಯ ರಾಷ್ಟ್ರೀಯ ಮಾರಾಟ ವಿಭಾಗದ ಮುಖ್ಯಸ್ಥ ವಿಜಯ್ ಕೋಶಿ ಹೇಳಿದ್ದಾರೆ.


Click it and Unblock the Notifications








