ಟಾಟಾದಿಂದ ಜಗತ್ತಿನ ಅಗ್ಗದ ಎಲೆಕ್ಟ್ರಿಕ್ ಕಾರು- ಇಮೊ

ವಿಶ್ವಕ್ಕೆ ಅಗ್ಗದ ಸಣ್ಣಕಾರು ಪರಿಚಯಿಸಿದ ಖ್ಯಾತಿ ಪಡೆದ ಟಾಟಾ ಮೋಟರ್ಸ್ ಇದೀಗ ಜಗತ್ತಿನ ಅಗ್ಗದ ಎಲೆಕ್ಟ್ರಿಕ್ ಕಾರು ಅಭಿವೃದ್ಧಿಪಡಿಸಲು ಹೊರಟಿದೆ. ಕಂಪನಿಯು ಡೆಟ್ರೋಯಿಟ್ ವಾಹನ ಪ್ರದರ್ಶನದಲ್ಲಿ "ಇಮೊ" ಎಂಬ ವಿನೂತನ ಎಲೆಕ್ಟ್ರಿಕ್ ಕಾರನ್ನು ಅನಾವರಣ ಮಾಡಿದೆ.

ನಾಲ್ಕು ಜನರು ಕುಳಿತುಕೊಳ್ಳಬಹುದಾದ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಡಿ ಎಂಬ ಕಾರು ಎಲೆಕ್ಟ್ರಿಕ್ ಕಾರುಗಳಲ್ಲಿಯೇ ಅಗ್ಗದ ಕಾರಾಗಲಿದೆ. ಈ ಕಾರಿನ ದರ ಸುಮಾರು 20 ಸಾವಿರ ಡಾಲರ್. ಈ ಕಾರಿನ ಟೆಕ್ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

"ಕಂಪನಿಯ ದೇಶದ ಎಂಜಿನಿಯರುಗಳು eMO ಪ್ರಾಜೆಕ್ಟ್ ನ್ನು ಪರಿಚಯಿಸಿದ್ದಾರೆ. ಇದು ಟಾಟಾ ಮೋಟರ್ಸ್ ತಂತ್ರಜ್ಞಾನ ಸಾಧ್ಯತೆಗಳಿಗೆ ಒಂದು ಕನ್ನಡಿಯಾಗಿದೆ" ಎಂದು ಟಾಟಾ ಟೆಕ್ನಾಲಜಿಸ್ ಅಧ್ಯಕ್ಷರಾದ ವಾರೆನ್ ಹರೀಸ್ ಹೇಳಿದ್ದಾರೆ.

ಭವಿಷ್ಯದಲ್ಲಿ ಗ್ರಾಹಕರಿಗೆ ಅಗ್ಗದ ದರದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ನೀಡುವ ಗುರಿಯನ್ನು ಟಾಟಾ ಮೋಟರ್ಸ್ ಹೊಂದಿದೆ ಎಂದು ಟಾಟಾ ವಾಹನ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಕೆವಿನ್ ಫಿಷರ್ ಹೇಳಿದ್ದಾರೆ. ಕಂಪನಿಯು ಡೆಟ್ರೊಯಿಟ್ ವಾಹನ ಪ್ರದರ್ಶನದಲ್ಲಿ ನ್ಯಾನೊ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಪ್ರದರ್ಶಿಸಿದೆ.

ಕನ್ನಡ ಡ್ರೈವ್ ಸ್ಪಾರ್ಕ್

Most Read Articles

Kannada
English summary
Tata Motors introduced low cost electric car concept in Detroit Auto Show. Tata cheap electric car named electric MObility study (eMO).
Story first published: Thursday, January 12, 2012, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X