ನಿಮ್ಮ ಕಾರಿಗೆ ಐದು ಅತ್ಯುತ್ತಮ ಆಕ್ಸೆಸರಿ

Posted By:

ಕಾರಿನೊಳಗೆ ಪ್ರವೇಶಿಸುವಾಗ ಮಧುರ ಅನುಭವವಾಗಬೇಕು. ಪ್ರಯಾಣ ಸುಖಕರವಾಗಿರಬೇಕು. ಕಾರಿನೊಳಗೆ ಅಹ್ಲಾದಕರ ವಾತಾವರಣವಿರಬೇಕು. ಆರಾಮದಾಯಕತೆ ಹೆಚ್ಚಿರಬೇಕು. ಪ್ರಯಾಣ ಅದ್ದೂರಿಯಾಗಿರಬೇಕು. ಅದಕ್ಕಾಗಿ ನಿಮ್ಮ ಕಾರಿಗೆ ಹೆಚ್ಚುವರಿ ಆಕ್ಸೆಸರಿಗಳನ್ನು ಅಳವಡಿಸಿಕೊಳ್ಳಲೇಬೇಕು. ಇಲ್ಲಿವೆ ಐದು ಕಾರು ಆಕ್ಸೆಸರಿ. ಇವೆಲ್ಲ ಅಗ್ಗದ ಆಕ್ಸೆಸರಿ. ನಾಟ್ ದುಬಾರಿ.

ರಿಯರ್ ವ್ಯೂ ಕ್ಯಾಮರಾ ಮತ್ತು ಸ್ಕೀನ್(Aashrit): ಈ ಆಕ್ಸೆಸರಿ ಇದ್ದರೆ ಹಿಂಭಾಗಕ್ಕೆ ಮುಖ ತಿರುಗಿಸಿ ಕಾರು ರಿವರ್ಸ್ ಮಾಡುವ ಕಷ್ಟವಿಲ್ಲ. ಕಾರಿನ ಹಿಂಭಾಗವನ್ನು ಸ್ಕೀನ್ ಮೂಲಕ ನೋಡಬಹುದು. ರಿಯರ್ ವ್ಯೂ ಕ್ಯಾಮರಾದ ಈ ಸಿಸ್ಟಮ್ ಬ್ಲೂಟೂಥ್ ಹ್ಯಾಂಡ್ಸ್ ಫ್ರೀ ತಂತ್ರಜ್ಞಾನ ಕೂಡ ಹೊಂದಿದೆ. ಯಾರಾದರೂ ಫೋನ್ ಮಾಡಿದರೆ ತೆಗೆಯಲು ಅಥವಾ ಫೋನ್ ಮಾಡಲು ಈ ಸ್ಕೀನನ್ನು ಬಳಸಬಹುದು. ಆದರೆ ಡ್ರೈವಿಂಗ್ ಮಾಡುವಾಗ ಮೊಬೈಲ್ ಫೋನ್ ಬಳಕೆ ಒಳ್ಳೆಯದಲ್ಲವೆಂದು ನೆನಪಿರಲಿ. ಇದೇ ಪರದೆಯಲ್ಲಿ ಮೆಮೊರಿ ಕಾರ್ಡ್ ಅಥವಾ ಯುಎಸ್ ಬಿ ಮೂಲಕ ಸಿನಿಮಾ ನೋಡಬಹುದು ಮತ್ತು ಹಾಡುಗಳನ್ನು ಕೇಳಬಹುದಾಗಿದೆ. ಇದರ ದರ ಸುಮಾರು 6 ಸಾವಿರ ರು. ಆಸುಪಾಸಿನಲ್ಲಿದೆ.

ಕಾರ್ ರೋಲರ್ ಸನ್ ಶೇಡ್: ದೇಶದಲ್ಲಿ ಕಾರುಗಳಿಗೆ ಈಗ ಟಿಂಟೆಡ್ ಗ್ಲಾಸ್ ಬಳಸುವ ಹಾಗಿಲ್ಲ. ಪರಿಣಾಮವಾಗಿ ಕಾರಿನೊಳಗೆ ಬಿಸಿಲು ಬರೋದು ಗ್ಯಾರಂಟಿ. ಇದು ಸರಾಗವಾಗಿ ಡ್ರೈವಿಂಗ್ ಮಾಡಲು ತೊಂದರೆ ನೀಡಬಹುದು. ಅದಕ್ಕಾಗಿ ಈ ರೋಲರ್ ಶೇಡ್ ಬಳಸಿ. ಇದು ನಿಮ್ಮ ಕಾರಿನೊಳಗಿನ ಬಿಸಿಯನ್ನು ಕಡಿಮೆ ಮಾಡಿ ಕೂಲ್ ಮಾಡುತ್ತದೆ. ಇದರ ಬಳಕೆ ಸಹ ಸುಲಭ. ಬೇಡವೆಂದಾಗ ಹಿಂದಕ್ಕೆ ಬಾಗಿಸಿ ಇಡಬಹುದಾಗಿದೆ. ಇದರ ದರ ಸುಮಾರು 300 ರುಪಾಯಿ ಆಸುಪಾಸಿನಲ್ಲಿದೆ.

ಆ್ಯಂಟಿ ಸ್ಲಿಪ್ ಡ್ಯಾಷ್ ಬೋರ್ಡ್ ಮ್ಯಾಟ್: ಡ್ಯಾಷ್ ಬೋರ್ಡ್ ಮೇಲೆ ನೀವು ಚಿಲ್ಲರೆ ಹಣಗಳನ್ನು, ಮೊಬೈಲ್ ಫೋನ್, ಕಾರು ಕೀಲಿಕೈ ಅಥವಾ ಇನ್ನಿತರ ಸಾಧನಗಳನ್ನು ಇಡಬಹುದು. ಕಾರು ಟರ್ನ್ ಮಾಡುವಾಗ ಅಥವಾ ಇತರ ಸಂದರ್ಭದಲ್ಲಿ ಡ್ಯಾಷ್ ಬೋರ್ಡ್ ನಲ್ಲಿದ್ದ ವಸ್ತುಗಳು ಕೆಳಗೆ ಬೀಳುವ ಅಪಾಯವಿದೆ. ಪಿವಿಸಿ ಫೋಮ್ ಬಳಕೆ ಮಾಡಿರುವ ಈ ಸಾಧನವು ಕೀಲಿಕೈ, ಮೊಬೈಲ್ ಫೋನ್, ಸನ್ ಶೇಡ್, ಚಿಲ್ಲರೆಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಸಾಧನದ ದರ ಸುಮಾರು 200 ರುಪಾಯಿಗೆ ದೊರಕುತ್ತದೆ.

ಕಾರು ಕಂಫರ್ಟ್ ಕಿಟ್: ಪುಟ್ಟ ಪುಟ್ಟ ದಿಂಬುಗಳ ಕಾರ್ ಕಂಫರ್ಟ್ ಕಿಟ್ ನಿಂದಾಗಿ ನಿಮ್ಮ ಕಾರಿನ ಇಂಟಿರಿಯರ್ ಅದ್ದೂರಿಯಾಗಿ ಅಥವಾ ಭರ್ಜರಿಯಾಗಿ ಕಾಣುತ್ತದೆ. ಇದು ಎರಡು ಪುಟ್ಟ ದಿಂಬುಗಳು, ಕತ್ತು ಒರೆಗಿಸುವಲ್ಲಿ ಇಡುವ ಮತ್ತೆರಡು ಪುಟ್ಟ ದಿಂಬು ಇತ್ಯಾದಿಗಳ ಕಿಟ್ ಆಗಿದೆ. ನಿಮ್ಮ ಕಾರಿನ ಇಂಟಿರಿಯರ್ ಇದರಿಂದ ಕ್ಲಾಸಿಕ್ ಆಗಿ ಕಾಣುತ್ತದೆ. ಜೊತೆಗೆ ನಿಮ್ಮ ಆರಾಮದಾಯಕ ಸವಾರಿಗೂ ಸಹಕರಿಸುತ್ತದೆ. ಇದರ ದರ ಸುಮಾರು 1 ಸಾವಿರ ರುಪಾಯಿ ಆಸುಪಾಸಿನಲ್ಲಿದೆ.

ಗ್ರಾಂಡಿ ಕಾರ್ ಪರ್ಫ್ಯೂಮ್: ಕಾರಿನ ಇಂಟಿರಿಯರ್ ಪರಿಮಳ ಹೆಚ್ಚಿಸಲು ಅಥವಾ ಸುಗಂಧಯುಕ್ತವಾಗಿಸಲು ಈ ಪರ್ಫ್ಯೂಮ್ ಬಳಕೆ ಮಾಡಬಹುದು. ಇದರಿಂದ ನಿಮ್ಮ ಡ್ರೈವಿಂಗ್ ಹೆಚ್ಚು ಫ್ರೆಷ್ ಆಗಿರುತ್ತದೆ. ಮಾರುಕಟ್ಟೆಯಲ್ಲಿ ಕಾರ್ ಪರ್ಫ್ಯೂಮ್ ದರ ಸುಮಾರು 350 ರುಪಾಯಿ ಆಸುಪಾಸಿನಲ್ಲಿ ದೊರಕುತ್ತದೆ.

ವಿ. ಸೂ: ಇಲ್ಲಿ ನೀಡಿರುವುದು ಅಂದಾಜು ದರ. ವಿವಿಧ ಬ್ರಾಂಡ್ ಗಳಿಗೆ ತಕ್ಕಂತೆ ದರದಲ್ಲಿ ವ್ಯತ್ಯಾಸವಿರಬಹುದು.

English summary
Top Five Highly Recommended Car Accessories. Aashrit Car Rear View camera and Screen. Car Roller Sun Shade. Anti-Slip Dash Board Mat. Car Comfort Kit - Beige. Grandy Car Perfume.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark