ಎಟಿಯೋಸ್, ಲಿವಾ ಸಕ್ಸಸ್: ಟೊಯೊಟಾದಿಂದ ಇನ್ನೆಂಟು ಕಾರು

Posted By:
To Follow DriveSpark On Facebook, Click The Like Button
ದೇಶದ ರಸ್ತೆಯಲ್ಲಿ ಎಟಿಯೋಸ್ ಮತ್ತು ಲಿವಾ ಯಶಸ್ವಿಯಿಂದ ಪ್ರೇರಿತಗೊಂಡಿರುವ ಟೊಯೊಟಾ ಕಿರ್ಲೊಸ್ಕರ್ ಕಂಪನಿಯು ದೇಶದ ರಸ್ತೆಗೆ ಇನ್ನೂ 8 ನೂತನ ಕಾರುಗಳನ್ನು ಪರಿಚಯಿಸಲು ಯೋಜಿಸಿದೆ. ಈಗಾಗಲೇ ಲಿವಾ ಮತ್ತು ಎಟಿಯೋಸ್ ಕಾರುಗಳು ಒಂದು ಲಕ್ಷ ಯುನಿಟ್‌ಗಿಂತ ಹೆಚ್ಚು ಮಾರಾಟವಾಗಿವೆ.

ಲಿವಾ, ಎಟಿಯೋಸ್‌ ಜನಪ್ರಿಯತೆಯಿಂದಾಗಿ ಜಾಗತಿಕವಾಗಿ ಅಭಿವೃದ್ಧಿಹೊಂದುತ್ತಿರುವ ಮಾರುಕಟ್ಟೆಗಳಿಗೆ 8ಕ್ಕಿಂತ ಕಡಿಮೆಯಿಲ್ಲದಂತೆ ನೂತನ ಎಂಟ್ರಿ ಲೆವೆಲ್ ಕಾರುಗಳನ್ನು ಪರಿಚಯಿಸಲು ಯೋಜಿಸಿದೆ. ನೂತನ ಕಾರುಗಳ ದರ ಲಿವಾ ಹ್ಯಾಚ್‌ಬ್ಯಾಕಿಗಿಂತ ಕಡಿಮೆ ಇರಲಿವೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ನೂತನ ಎಂಟು ಕಾರುಗಳು ಕಂಪನಿಯ ಬ್ರಾಂಡಿನಲ್ಲೇ ಹೊರಬರಲಿದ್ದು, ಯಾವುದೇ ಸಹ ಬ್ರಾಂಡ್ ಮೂಲಕ ಹೊರತರದಿರಲು ಕಂಪನಿ ನಿರ್ಧರಿಸಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈಗಷ್ಟೇ ಅಪ್ ಎಂಬ ಸಣ್ಣಕಾರು ಮಾರಾಟಮಾಡಲು ಆರಂಭಿಸುತ್ತಿರುವಾಗಲೇ ಹೊಸ ಕಾರು ಪರಿಚಯಿಸುವ ಯೋಜನೆಯ ಪ್ರಕಟಿಸುವ ಮೂಲಕ ಟೊಯೊಟಾ ಟಾಂಗ್ ನೀಡಿದೆ.

2015ರ ವೇಳೆಗೆ ಟೊಯೊಟಾ ಫ್ಯಾಕ್ಟರಿಯಿಂದ ಎಂಟು ಹೊಸ ಕಾರುಗಳು ಆಗಮಿಸಲಿವೆ. ಈ ಸಮಯಕ್ಕೆ ಕಂಪನಿಯು ಸುಮಾರು ಒಂದು ದಶಲಕ್ಷ ಕಾರುಗಳನ್ನು ಮಾರಾಟ ಮಾಡುವ ಯೋಜನೆ ಹೊಂದಿದೆ. ಆದರೆ ನೂತನ ಕಾರುಗಳ ವಿಶೇಷತೆಗಳು, ಟೆಕ್ ಮಾಹಿತಿ ಯಾವುದನ್ನೂ ಕಂಪನಿ ಸದ್ಯಕ್ಕೆ ಬಹಿರಂಗಪಡಿಸಿಲ್ಲ.

ಇಟಿಯೋಸ್ ಡೀಸೆಲ್ ಆವೃತ್ತಿಯ ಎಕ್ಸ್ ಶೋರೂಂ ದರ ಸುಮಾರು 6.44 ಲಕ್ಷ ರು. ಮತ್ತು 7.87 ಲಕ್ಷ ರು.ವರೆಗಿರಲಿದೆ. ಇದಕ್ಕಿಂತ ಎಟಿಯೋಸ್ ಪೆಟ್ರೊಲ್ ಆವೃತ್ತಿಯ ದರ ದರ ಸುಮಾರು 90 ಸಾವಿರ ರು.ನಷ್ಟು ಕಡಿಮೆಯಿದೆ.

ಎಟಿಯೋಸ್ ಲಿವಾ ಡೀಸೆಲ್ ಆವೃತ್ತಿಯ ದರ ಸುಮಾರು 5.54 ಲಕ್ಷ ರು.ನಿಂದ 5.89 ಲಕ್ಷ ರು.ವರೆಗಿರಲಿದೆ. ಪೆಟ್ರೊಲ್ ಆವೃತ್ತಿ ಎಟಿಯೋಸ್ ಲಿವಾಗೆ ಹೋಲಿಸಿದರೆ 95 ಸಾವಿರ ರು. ದುಬಾರಿಯಾಗಿದೆ.

English summary
Toyota Motor Corp plans to introduce 8 compact cars for emerging markets by 2015. The upcoming cars will be priced bellow Etios and Liva and produced in local markets such as India, Brazil and China. 
Story first published: Monday, May 28, 2012, 9:23 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark