ಮೈಲೇಜ್ ಮಂತ್ರವ ಪಠಿಸುತ್ತಿದೆ ಟಿವಿಎಸ್ ಮೋಟರ್ಸ್
ಚೆನ್ನೈ ಮೂಲದ ದ್ವಿಚಕ್ರವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟರ್ಸ್ ನೂತನ ಎಂಜಿನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಮೈಲೇಜ್ ಹೆಚ್ಚಿಸಲು ಮತ್ತು ಬೈಕ್ ದರ ತಗ್ಗಿಸಲು ನೆರವಾಗಲಿದೆ ಎಂದು ಕಂಪನಿಯು ಪ್ರಕಟನೆಯಲ್ಲಿ ತಿಳಿಸಿದೆ.
ಟಿವಿಎಸ್ ಮೋಟರ್ಸ್ ಕಂಪನಿಯು ಎಂಜಿನ್ ಮತ್ತು ಟ್ರಾನ್ಸ್ ಮಿಷನ್ ಪರಿಷ್ಕರಿಸುವ ಮೂಲಕ ಮೈಲೇಜ್ ಹೆಚ್ಚಿಸಲಿದೆ. ಜೊತೆಗೆ ಕಂಪನಿಯು ಎನರ್ಜಿ ಮರುಬಳಕೆ ಮಾಡುವ ತಂತ್ರಜ್ಞಾನದ ಕುರಿತೂ ಆಲೋಚಿಸುತ್ತಿದೆ. ಹೆಚ್ಚು ಗ್ರಾಹಕರು ಮೈಲೇಜ್ ಬೈಕುಗಳಿಗೆ ಆದ್ಯತೆ ನೀಡುವ ಕಾರಣ ಕಂಪನಿಯು ಮೈಲೇಜ್ ಮಂತ್ರ ಪಠಿಸತೊಡಗಿದೆ.
ಸೆಪ್ಟಂಬರ್ ವೇಳೆಗೆ ನೂತನ ಎಂಜಿನ್ ತಂತ್ರಜ್ಞಾನವನ್ನು ಕಂಪನಿಯು ಟೆಸ್ಟ್ ಮಾಡಲಿದೆ. ದೀರ್ಘಕಾಲದ ಟೆಸ್ಟ್ ಹಂತ ದಾಟಿ ಮುಂದಿನ ವರ್ಷದಲ್ಲಿ ಈ ಎಂಜಿನನ್ನು ಬೈಕುಗಳಿಗೆ ಜೋಡಿಸುವ ನಿರೀಕ್ಷೆಯಿದೆ.. ಡಿಸೆಂಬರ್ 2013ರ ವೇಳೆಗೆ ಗ್ರಾಹಕರಿಗೆ ನೂತನ ತಂತ್ರಜ್ಞಾನದ ಬೈಕುಗಳು ದೊರಕಲಿದೆ.
ಕಂಪನಿಯು ತನ್ನ ವಾಹನಗಳಿಗೆ ಹೈಬ್ರಿಡ್ ತಂತ್ರಜ್ಞಾನ ಅಳವಡಿಸುವ ಕುರಿತು ಕಾರ್ಯನಿರತವಾಗಿದೆ. ಹೈಬ್ರಿಡ್ ತಂತ್ರಜ್ಞಾನವು ಬೈಕುಗಳ ಮೈಲೇಜನ್ನು ಗರಿಷ್ಠವಾಗಿ ಹೆಚ್ಚಿಸಲಿದೆ.
ಸತತವಾಗಿ ಗೇರ್ ಬದಲಾಯಿಸುವುದರಿಂದ ಎಂಜಿನ್ ದಕ್ಷತೆ ಮತ್ತು ಇಂಧನ ನಷ್ಟ ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಲು ಕಂಪನಿಯು ಟ್ರಾನ್ಸ್ ಮಿಷನ್ ತಂತ್ರಜ್ಞಾನವನ್ನೂ ಪರಿಷ್ಕರಿಸಲು ಯೋಜಿಸಿದೆ. ಜೊತೆಗೆ ಬೈಕಿನ ಏರೋ ಡೈನಾಮಿಕ್ ವಿನ್ಯಾಸವನ್ನೂ ಅಭಿವೃದ್ಧಿಪಡಿಸಲಿದೆ.


Click it and Unblock the Notifications
