ನಿರೀಕ್ಷಿಸಿ: ಮಹೀಂದ್ರ ಪುಟ್ಟ ಅಚ್ಚರಿ ಮಿನಿ ಕ್ಷೈಲೊ

Posted By:
ಈಗಾಗಲೇ ದೇಶದ ರಸ್ತೆಯಲ್ಲಿ ಕ್ಷೈಲೊ ಕಾರು ಮೋಡಿ ಮಾಡುತ್ತಿದೆ. ಆದರೆ ಪ್ರಸಕ್ತ ವರ್ಷ ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ಮಿನಿ ಕ್ಷೈಲೊ ಕಾರೊಂದು ಆಗಮಿಸಲಿದೆ. ಈ ಕಾರಿನ ದರ ಸುಮಾರು 4-5 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ.

ಸರಕಾರವು ಸಣ್ಣಕಾರುಗಳಿಗೆ ಕಡಿಮೆ ಅಬಕಾರಿ ಸುಂಕ ವಿಧಿಸುತ್ತಿದೆ. ಇದರ ಲಾಭ ಪಡೆಯಲು ಕಾರು ಕಂಪನಿಗಳು ತಮ್ಮ ವಿವಿಧ ಆವೃತ್ತಿಗಳ ಗಾತ್ರ ಕಿರಿದಾಗಿಸುತ್ತಿವೆ. ಮಹೀಂದ್ರ ಕಂಪನಿಯು ತನ್ನ ಕ್ಷೈಲೊ ಆವೃತ್ತಿಯನ್ನು ಪ್ರಸಕ್ತ ವರ್ಷ ಪರಿಚಯಿಸಲಿದೆ.

ಕಂಪನಿಯು ಕ್ಷೈಲೊ ಆವೃತ್ತಿಯ ನೂತನ ಸಂಕುಚಿತ ಚಾಸೀಸ್ ಬಳಸಿ ಮಿನಿ ಕ್ಷೈಲೊ ಅಭಿವೃದ್ಧಿಪಡಿಸಲಿದೆ. ಸ್ಟಾಂಡರ್ಡ್ ಕ್ಷೈಲೊ ಆವೃತ್ತಿಯ ಡ್ಯಾಷ್ ಬೋರ್ಡ್ ವಿನ್ಯಾಸ ಪುಟ್ಟ ಮಿನಿ ಕ್ಷೈಲೊದಲ್ಲಿರಲಿದೆ. ನೂತನ ಮಿನಿ ಕ್ಷೈಲೊ ಕಾರು 1.5 ಲೀಟರಿನ ಡೀಸೆಲ್ ಎಂಜಿನ್ ಹೊಂದಿರಲಿದೆ.

ಮಹೀಂದ್ರ ಮಿನಿ ಕ್ಷೈಲೊ ಸಿಟಿ ರಸ್ತೆಯಲ್ಲಿ ಲೀಟರಿಗೆ ಸುಮಾರು 10 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಪ್ರತಿಲೀಟರಿಗೆ 15 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ.

ನೂತನ ಮಿನಿ ಕ್ಷೈಲೊ ದರ ಸುಮಾರು 4.5 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ. ಹ್ಯಾಚ್ ಬ್ಯಾಕ್ ಕಾರುಗಳ ದರದಲ್ಲಿ ದೊರಕುವ ಮಹೀಂದ್ರ ಕಂಪನಿಯ ಮಿನಿ ಕ್ಷೈಲೊ ವಾಹನ ಪ್ರಿಯರಿಗೆ ಮೋಡಿ ಮಾಡುವ ನಿರೀಕ್ಷೆಯಿದೆ.

English summary
2012 Upcoming Cars- Mahindra Mini Xylo: Mahindra & Mahindra, will enter in 4-meter cars segment with its grand hatchback Mini Xylo.
Story first published: Thursday, May 10, 2012, 11:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark