ಬೆಂಗಳೂರು ರಸ್ತೆಯಲ್ಲಿ ವಿಂಟೇಜ್ ಕಾರುಗಳ ಮೋಡಿ

ಸದಾ ಸಂಚಾರ ದಟ್ಟಣೆಯಿಂದ ಬೇಸೆತ್ತು ದುರುಗಟ್ಟಿ ನೋಡುತ್ತಿದ್ದ ಜನ ಭಾನುವಾರ ರಸ್ತೆಯನ್ನು ಕಣ್ಣರಳಿಸಿ ನೋಡುತ್ತಿದ್ದರು. ಸೌಂದರ್ಯದಲ್ಲಿ, ವಿನ್ಯಾಸದಲ್ಲಿ ಒಂದಕ್ಕೊಂದು ಪೈಪೋಟಿ ನೀಡುತ್ತಿದ್ದ ಐವತ್ತಕ್ಕೂ ಹೆಚ್ಚು ಕಾರುಗಳು ರಸ್ತೆಯಲ್ಲಿ ಚಲಿಸುತ್ತಿದ್ದವು.

ಆಸ್ಟಿನ್, ಫೋರ್ಡ್ ಎ, ಮೋರಿಸ್, ಫೋರ್ಡ್ ಜೀಪ್ಸ್, ಡಾಡ್ಜಿ, ಬೀಟಲ್ ಸೇರಿದಂತೆ ಲೆಕ್ಕವಿಡಲು ಕಷ್ಟವಾಗುವಷ್ಟು ವಿಂಟೇಜ್ ಕಾರುಗಳು ರಸ್ತೆಯಲ್ಲಿ ಸರತಿ ಸಾಲಿನಲ್ಲಿ ಹೋಗುತ್ತಿದ್ದವು. ತಾಜ್ ವೆಸ್ಟ್ ಹೋಟೆಲಿನಿಂದ ಆರಂಭವಾದ ವಿಂಟೇಜ್ ವಾಹನಗಳ ಸವಾರಿ ಎಂಜಿ ರೋಡ್, ಬ್ರಿಗೇಡ್ ರೋಡ್, ಯುಬಿಸಿಟಿ, ಸ್ಯಾಂಕಿ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸುತ್ತಾಡಿದವು.

ಎಲ್ಲಿಂದ ಬಂತು? ಏನು ವಿಶೇಷ? ಎಷ್ಟು ಚೆನ್ನಾಗಿದೆಯಲ್ವ? ಎಂಬೆಲ್ಲ ಪ್ರಶ್ನೆಗಳನ್ನು ಕಣ್ಣಲ್ಲಿ ತುಂಬಿಕೊಂಡು ಜನರು ಬೆರಗಿನಿಂದ ನೋಡುತ್ತಿದ್ದರು. ತಾಜ್ ವೆಸ್ಟ್ ಎಂಡ್ ಹೋಟೆಲಿಗೆ 125 ವರ್ಷವಾದ ಪ್ರಯುಕ್ತ ಈ ವಿಂಟೇಜ್ ಪ್ರದರ್ಶನ ಆಯೋಜಿಸಲಾಗಿತ್ತು. ಇದಕ್ಕೆ ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರು ಕ್ಲಬ್ ಸಾಥ್ ನೀಡಿತ್ತು.

ಸುಮಾರು 50ಕ್ಕೂ ಹೆಚ್ಚು ಹಳೆಯ ಕಾರುಗಳು ಪ್ರದರ್ಶನದಲ್ಲಿ ಭಾಗಿಯಾದವು. ವೆಸ್ಪಾ, ಲ್ಯಾಂಬ್ರೆಟಾ ಸೇರಿದಂತೆ 17 ದ್ವಿಚಕ್ರವಾಹನಗಳೂ ಹಳೆಯ ವಾಹನಗಳ ಜಾಥಾದಲ್ಲಿ ಭಾಗಿಯಾಗಿದ್ದವು. "ನಾನ್ಯಾವತು ಬಿಸಿಲಿಗೆ ಕಾರನ್ನು ಹೊರತರುವುದಿಲ್ಲ. ರಾತ್ರಿ ಅಥವಾ ಮುಂಜಾನೆ ಈ ಕಾರನ್ನು ಡ್ರೈವ್ ಮಾಡುತ್ತೇನೆ" ಎಂದು ತನ್ನ ಪ್ರೀತಿಯ 1939ರ ಮಾಡೆಲಿನ ಫೋರ್ಡ್ ವಿ 8 ಕಾರಿನ ಬಗ್ಗೆ ಎಡ್ವರ್ಡ್ ರೊಡ್ರಿಕ್ಸ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ ವಿಂಟೇಜ್ ಮತ್ತು ಕ್ಲಾಸಿಕ್ ಕಾರು ಕ್ಲಬ್ 1979ರಲ್ಲಿ ಆರಂಭವಾಯಿತು. ಈ ಕ್ಲಬಿನಲ್ಲಿ ಸುಮಾರು 600ಕ್ಕೂ ಹೆಚ್ಚು ಕಾರುಗಳು ರಿಜಿಸ್ಟರ್ ಆಗಿವೆ. ಸುಮಾರು 270 ಜನರು ಸದಸ್ಯರಾಗಿದ್ದಾರೆ. ಸದಸ್ಯರಲ್ಲಿ ರಾಜಮನೆತನದ ವ್ಯಕ್ತಿಗಳು, ಉದ್ಯಮಿಗಳು, ರಾಜಕಾರಣಿಗಳು, ಮೆಕಾನಿಕ್ ಗಳು ಸೇರಿದಂತೆ ಹಲವು ಕ್ಷೇತ್ರಗಳ ವ್ಯಕ್ತಿಗಳಿದ್ದಾರೆ.

Most Read Articles

Kannada
English summary
The Karnataka Vintage & Classic Car Club Taj west End host the Karnataka Vintage Car Rally in Bangalore Roads on Sunday April 29.
Story first published: Monday, April 30, 2012, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X