ನೂತನ ಪೊಲೊ, ವೆಂಟೊ ಆಗಮನ, ದರವೂ ಅಗ್ಗ!

Posted By:
ಹಬ್ಬದ ಅವಧಿಯಲ್ಲಿ ಗ್ರಾಹಕರನ್ನು ಸೆಳೆಯಲು ಫೋಕ್ಸ್‌ವ್ಯಾಗನ್ ಕಂಪನಿಯು ಪರಿಷ್ಕೃತ ಪೊಲೊ ಮತ್ತು ವೆಂಟೊ ಕಾರುಗಳನ್ನು ಪರಿಚಯಿಸಿದೆ. ವಿಶೇಷವೆಂದರೆ ಹಳೆಯ ಆವೃತ್ತಿಗಳಿಗೆ ಹೋಲಿಸಿದರೆ ಇವುಗಳ ದರವೂ ಕೊಂಚ ಕಡಿಮೆಯಾಗಿದೆ.

ಪರಿಷ್ಕೃತ ಪೊಲೊ ಮತ್ತು ವೆಂಟೊ ಕಾರುಗಳ ಮಾರಾಟವನ್ನು ಪ್ರಸಕ್ತ ತಿಂಗಳ ಮಧ್ಯಾವಧಿಯಲ್ಲಿ ಆರಂಭಿಸುವುದಾಗಿ ಫೋಕ್ಸ್‌ವ್ಯಾಗನ್ ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಬಿ ಮತ್ತು ಸಿ ಸೆಗ್ಮೆಂಟಿನಲ್ಲಿ ವೆಂಟೊ ಮತ್ತು ಪೊಲೊ ಕಾರುಗಳ ಮಾರಾಟ ಗಣನೀಯವಾಗಿ ಇಳಿಕೆ ಕಂಡಿದೆ. ಹೀಗಾಗಿ ಕಂಪನಿಯು ಪರಿಷ್ಕೃತ ವೆಂಟೊ ಮತ್ತು ಪೊಲೊ ಆವೃತ್ತಿಗಳ ಮೂಲಕ ಗ್ರಾಹಕರನ್ನು ಸೆಳೆಯಲು ಉದ್ದೇಶಿಸಿದೆ.

ಪರಿಷ್ಕೃತ ಫೋಕ್ಸ್ ವ್ಯಾಗನ್ ಪೊಲೊ ಹೈಲೈನ್ ಡೀಸೆಲ್ ಕಾರಿನ ದರ 6.94 ಲಕ್ಷ ರು. ಆಗಿದೆ. ಹಳೆಯ ಪೊಲೊಗೆ ಹೋಲಿಸಿದರೆ ಇಲ್ಲಿ 42 ಸಾವಿರ ರು. ಕಡಿಮೆಯಾಗಿದೆ. ಹಳೆಯ ಪೊಲೊ ಹೈಲೈನ್ ದರ 7.36 ಲಕ್ಷ ರು. ಆಗಿತ್ತು.

ಪರಿಷ್ಕೃತ ವೆಂಟೊ ಹೈಲೈನ್ ಡೀಸೆಲ್ ದರ 9.89 ಲಕ್ಷ ರುಪಾಯಿ ಆಗಿದೆ. ಹಳೆಯ ವೆಂಟೊ ಹೈಲೈನ್ ಆವೃತ್ತಿ ದರ 10.20 ಲಕ್ಷ ರು. ಆಗಿತ್ತು. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರವಾಗಿದೆ.

ಹೊಸ ಪೊಲೊ ಫೀಚರ್ಸ್

* ಕಪ್ಪು ಹೆಡ್ ಲ್ಯಾಂಪ್

* ಹೊಸ ಅಲಾಯ್ ವೀಲ್

* ಆರ್ ಸಿಡಿ 310 ಮ್ಯೂಸಿಕ್ ಸಿಸ್ಟಮ್, ಬ್ಲೂಟೂಥ್ ಕನೆಕ್ಟಿವಿಟಿ

* ಮಲ್ಟಿ ಫಂಕ್ಷನ್ ಸ್ಟಿಯರಿಂಗ್ ವೀಲ್

* ಆಡಿಯೋ ಸಿಸ್ಟಮಿಗೆ ಸ್ಪೀಡ್ ಸೆನ್ಸಿಂಗ್ ವಾಲ್ಯೂಂ ಕಂಟ್ರೋಲ್

* ಬ್ಲೂಟೂಥ್ ಸಾಧನ

ಪರಿಷ್ಕೃತ ವೆಂಟೊ ಫೀಚರ್ಸ್

* ಕಪ್ಪು ಹೆಡ್ ಲ್ಯಾಂಪ್

* ಹೊಸ ಅಲಾಯ್ ವೀಲ್

* ನಾಲ್ಕು ಸ್ಪೀಕರ್

* ರಿಯರ್ ವ್ಯೂ ಕ್ಯಾಮರಾ, ನ್ಯಾವಿಗೇಷನ್ ಸಿಸ್ಟಮ್ ಮತ್ತು ಬ್ಲೂಟೂಥ್

English summary
Volkswagen launched updated Polo and Vento. New Volkswagen Polo Highline diesel is priced at Rs. 6.94 lakhs. Updated Vento Highline diesel is priced at Rs. 9.89 lakhs.
Story first published: Wednesday, September 5, 2012, 10:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark