ಪೊಲೊ, ವೆಂಟೊ ಕಾರುಗಳಿಗೆ ಭರ್ಜರಿ ಡಿಸ್ಕೌಂಟು

Posted By:
ಪೆಟ್ರೋಲ್ ಕಾರುಗಳಿಗೆ ಇದು ಶುಭ ಸಮಯವಲ್ಲ. ಯಾಕೆಂದ್ರೆ ಡೀಸೆಲ್ ಕಾರುಗಳ ಬೇಡಿಕೆ ಗಗನಕ್ಕೇರಿದೆ. ಈ ನಡುವೆ ಪೆಟ್ರೋಲ್ ಕಾರುಗಳ ಮಾರಾಟ ಹೆಚ್ಚಿಸಲು ಕಾರು ಕಂಪನಿಗಳು ಶತಾಯಗತಾಯ ಪ್ರಯತ್ನಿಸುತ್ತಿವೆ.

ಇದೀಗ ಫೋಕ್ಸ್ ವ್ಯಾಗನ್ ಕಂಪನಿ ಕೂಡ ಗ್ರಾಹಕರಿಗೆ ಹೊಸ ಆಮೀಷ ಒಡ್ಡಿದೆ. ಕಂಪನಿಗೆ ತನ್ನ 2011ರ ಪೊಲೊ ಮತ್ತು ವೆಂಟೊ ಕಾರುಗಳ ಸ್ಟಾಕ್ ಕ್ಲೀಯರ್ ಮಾಡಲು ಯತ್ನಿಸುತ್ತಿದೆ. ಹೀಗಾಗಿ ಕಂಪನಿಯು ಈ ಎರಡು ಕಾರುಗಳಿಗೆ ಭಾರಿ ಪ್ರಮಾಣದ ವಿನಾಯಿತಿ ಘೋಷಿಸಿದೆ.

2011ರ 1.2 ಲೀಟರ್ ಮತ್ತು 1.6 ಲೀಟರ್ ಪೆಟ್ರೊಲ್ ಪೊಲಿ ಕಾರುಗಳಿಗೆ ಕಂಪನಿಯು ಸುಮಾರು 50 ಸಾವಿರ ರುಪಾಯಿ ವಿನಾಯಿತಿ ನೀಡಿದೆ. ಜೊತೆಗೆ ಉಚಿತ ವಿಮೆ ಮತ್ತು ಎರಡು ವರ್ಷದ ವಾರ್ಷಿಕ ನಿರ್ವಹಣಾ ಕಾಂಟ್ರಾಕ್ಟ್ ಸೌಲಭ್ಯವನ್ನೂ ನೀಡಿದೆ. ಇವೆರಡು ಸೇವೆಗಳ ವೆಚ್ಚ ಸುಮಾರು 60 ಸಾವಿರ ರುಪಾಯಿ. ಹೀಗಾಗಿ ಪೊಲೊ ಕಾರಿಗೆ ಸುಮಾರು 1.1 ಲಕ್ಷ ರುಪಾಯಿ ವಿನಾಯಿತಿ ಸಿಕ್ಕಂತೆ ಆಗಿದೆ.

ಇದರೊಂದಿಗೆ 2011ರ ಪೆಟ್ರೊಲ್ ವೆಂಟೊ ಕಾರಿಗೂ ಸುಮಾರು ಒಂದು ಲಕ್ಷ ರುಪಾಯಿ ಮೌಲ್ಯದ ವಿನಾಯಿತಿ ದೊರಕಿದೆ. ಜೊತೆಗೆ ಈ ವರ್ಷದ ಅಂದರೆ 2012ರ ವೆಂಟೊ ಕಾರಿನ ವೇಟಿಂಗ್ ಪಿರೆಯಿಡ್ ಕೇವಲ ಒಂದು ತಿಂಗಳು ಆಗಿದೆ. 2012ರ ಪೆಟ್ರೋಲ್ ವೆಂಟೊಗೆ 60 ಸಾವಿರ ಮೊತ್ತದ ಉಚಿತ ವಿಮೆ ಮತ್ತು ನಿರ್ವಹಣಾ ಸೌಲಭ್ಯ ನೀಡಲಾಗಿದೆ.

ಆದರೆ ಹಳೆಯ ದಿನಾಂಕದಲ್ಲಿ ನಿರ್ಮಿಸಿದ ಕಾರುಗಳನ್ನು ಖರೀದಿಸಿದರೆ ಕೆಲವು ತೊಂದರೆಗಳೂ ಇವೆ. ನೀವು 2011ರಲ್ಲಿ ನಿರ್ಮಿಸಿದ ಕಾರನ್ನು ಖರೀದಿಸಿದರೆ ಅದರ ಮರುಮಾರಾಟ ಮೌಲ್ಯ ಕಡಿಮೆಯಾಗುತ್ತದೆ. ಇದು ನಿಮಗೆ ಸಮಸ್ಯೆಯಾಗದೆ ಇದ್ದಲ್ಲಿ 2011ರ ಪೊಲೊ ಮತ್ತು ವೆಂಟೊ ಆವೃತ್ತಿಗಳನ್ನು ಖರೀದಿಸಬಹುದು.

English summary
VW Offering Massive Discounts On Polo, Vento. You can buy the 2011 1.2 and 1.6 petrol Polo with whopping cash discount of Rs 50,000 in addition to the free insurance and a two-year annual maintenance contract (AMC) worth Rs 60,000. 2011 petrol Vento will be available with a flat cash discount of Rs 1 lakh.
Story first published: Thursday, May 10, 2012, 14:49 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark