ಪಾರ್ಕಿಂಗ್ ಜಾಣ್ಮೆಯಲ್ಲಿ ಪುರುಷರನ್ನು ಹಿಂದಿಕ್ಕಿದ ಜಾಣೆಯರು

Posted By:
Women Better at Parking Vehicle than Men
ನಾವು ಅವತ್ತು "ಪಾರ್ಕಿಂಗ್ ವಿಷ್ಯದಲ್ಲಿ ಪುರುಷ ಮೇಲು, ಮಹಿಳೆ ಫೇಲು" ವರದಿ ಪ್ರಕಟಿಸಿದಾಗ ಸಾಕಷ್ಟು ಮಹಿಳೆಯರು ಕೋಪಗೊಂಡು ನಮಗೆ ಇಮೇಲ್ ಬರೆದಿದ್ದರು. ನಾವು ಅದಕ್ಕೆ ಮಾರುತ್ತರ ನೀಡುವ ಗೋಜಿಗೆ ಹೋಗಿರಲಿಲ್ಲ.

"ಬಂದೆ ಬರುತಾವ ಕಾಲ" ಎಂದು ಕಾದುಕುಳಿತಿದ್ದ ಮಹಿಳಾಮಣಿಗಳಿಗೆ ಈಗ ಸಿಹಿಸುದ್ದಿ ಬಂದಿದೆ. ಎಲ್ಲದರಲ್ಲೂ ಮೇಲುಗೈ ಸಾಧಿಸುವ ಮಹಿಳೆಯರು ವಾಹನ ಪಾರ್ಕಿಂಗ್ ವಿಷಯದಲ್ಲಿ ಮಾತ್ರ ಹಿಂದೆ ಬೀಳುತ್ತಾರೆ ಎಂಬ ಹಳೆಯ ಸಮೀಕ್ಷೆಯನ್ನು ನೂತನ ಅಧ್ಯಯನ ಪಲ್ಟಿ ಹೊಡೆಸಿದೆ.

ಪುರುಷರಿಗಿಂತ ಅಚ್ಚುಕಟ್ಟಾಗಿ, ಸುರಕ್ಷಿತವಾಗಿ ಮಹಿಳೆಯರೇ ವಾಹನವನ್ನು ಪಾರ್ಕಿಂಗ್ ಮಾಡುತ್ತಾರೆ ಎಂದು ನೂತನ ಸಮೀಕ್ಷೆ ಹೇಳಿದೆ. ಸುಮಾರು 2,500 ಚಾಲಕ ಚಾಲಕಿಯರನ್ನು ಪಾರ್ಕಿಂಗ್ ಮಾಡಿಸಿದ NCP ಕಂಪನಿಯು ನೂತನ Parking Reportನಲ್ಲಿ ಈ ಮಾಹಿತಿಯನ್ನು ಹೊರಗೆಡವಿದೆ.

ಈ ಅಧ್ಯಯನ 20 ಅಂಕಗಳಲ್ಲಿ ನಡೆದಿತ್ತು. ಇದರಲ್ಲಿ ಮಹಿಳೆಯರು 13.4 ಅಂಕ ಪಡೆದಿದ್ದರು. ಪಾರ್ಕಿಂಗ್ ಜಾಣ್ಮೆಯ ಎಂಟು ವಿಷಯಗಳಲ್ಲಿ ಈ ಸಮೀಕ್ಷೆ ನಡೆಸಿದೆ. ಎಲ್ಲದರಲ್ಲೂ ಹೆಚ್ಚು ಮಹಿಳೆಯರು ಪಾಸ್ ಆಗಿದ್ದಾರೆ. "ಈ ಫಲಿತಾಂಶ ಸರ್ ಪ್ರೈಸ್" ಎಂದು ನೀಲ್ ಬೆಸನ್ ಹೇಳಿದ್ದಾರೆ. ಅವರು ಲಂಡನಿನ ಚಾಲನಾ ತರಬೇತುದಾರರಾಗಿದ್ದಾರೆ.

"ನನ್ನ ಅನುಭವದ ಪ್ರಕಾರ ಪುರುಷರು ವಾಹನ ಚಾಲನೆಯನ್ನು ಸುಲಭವಾಗಿ ಕಲಿಯುತ್ತಾರೆ. ಆದರೆ ಈ ಅಧ್ಯಯನದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಜಾಣ್ಮೆ ಪ್ರದರ್ಶಿಸಿದ್ದಾರೆ. ಪಾರ್ಕಿಂಗ್ ವಿಷ್ಯದಲ್ಲಿ ಇನ್ನು ಮುಂದೆ ತಮ್ಮ ಜೊತೆಗಾತಿಯರಿಗೆ ಪುರುಷರು ಹೆಚ್ಚು ಗೌರವ ನೀಡಬೇಕು" ಎಂದು ಅವರು ಹೇಳಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
New Study says, Women Better at Parking Vehicle than Men. NCP Parking Study ranked 2,500 drivers on aspects of parking like Parking timing, locating a spot and positioning within a space.
Story first published: Tuesday, January 31, 2012, 13:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark