ಜಗತ್ತಿನ ಪುಟ್ಟ ಕಾರು ಟಾಟಾ ನ್ಯಾನೊ ಅಲ್ಲ, ಪೀಲ್....

ಪೀಲ್ ಮೂರು ಚಕ್ರದ ಕಾರು. ಇದು 50 ಸಿಸಿ ಎಂಜಿನ್ ಹೊಂದಿದೆ. ಈ ಕಾರಿನ ಬಲಭಾಗದಲ್ಲಿ ಕೇವಲ ಒಂದೇ ಒಂದು ಡೋರ್ ಇದೆ. ಈ ಕಾರಿಗೆ ಕೇವಲ ಒಂದೇ ಒಂದು ಹೆಡ್ ಲೈಟ್ ಇದೆಯಷ್ಟೇ. ಪೀಲ್ ಕಾರಿನಲ್ಲಿ ಕೇವಲ ಓರ್ವ ಚಾಲಕ ಮಾತ್ರ ಪ್ರಯಾಣಿಸಬಹುದು. ಬೇಕಿದ್ರೆ ಒಂದು ಶಾಪಿಂಗ್ ಬ್ಯಾಗ್ ಜೊತೆಗಿಟ್ಟುಕೊಳ್ಳಬಹುದು. ಜಾಸ್ತಿ ಲೋಡ್ ಹಾಕೋ ಹಾಗಿಲ್ಲ.
ಪೀಲ್ ಕಾರು ಎಂಟ್ರಿ ಲೆವೆಲ್ ಮತ್ತು ಟಾಪ್ ಎಂಡ್ ಎಂಬ ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ಈ ಎರಡು ಆವೃತ್ತಿಗಳು ರಿವರ್ಸ್ ಗೇರ್ ಹೊಂದಿಲ್ಲ. ರಿವರ್ಸ್ ಹೋಗಬೇಕೆಂದಿದ್ದರೆ ಕಾರಿನಿಂದ ಇಳಿದು ಹಿಂದಕ್ಕೆ ದೂಡಿದರೆ ಸಾಕು..
ಈ ಕಾರು ರಿಕ್ಷಾದಂತೆ ಮೂರು ಚಕ್ರ ಹೊಂದಿದೆ. ಆದರೆ ಇದು ರಿಕ್ಷಕ್ಕಿಂತ ಉಲ್ಟಾ. ಅಂದ್ರೆ ಮುಂಭಾಗದಲ್ಲಿ ಎರಡು ಟೈರ್ ಮತ್ತು ಹಿಂಭಾಗದಲ್ಲಿ ಒಂದು ಟೈರ್ ಇದೆ.
ಪೀಲ್ ಕಾರಿನ 50 ಸಿಸಿ ಎಂಜಿನ್ 3.5 ಹಾರ್ಸ್ ಪವರ್ ನೀಡುತ್ತದೆ. ಈ ಕಾರಲ್ಲಿ ಪ್ರತಿಗಂಟೆಗೆ ಗರಿಷ್ಠ 24 ಕಿ.ಮೀ. ವೇಗದಲ್ಲಿ ಪ್ರಯಾಣಿಸಬಹುದು. ಈ ವೇಗ ಸಾಕಾಗುವುದಿಲ್ಲವೆಂದರೆ ಎಲೆಕ್ಟ್ರಿಕ್ ಚಾಲಿತ ಪೀಲ್ ಕಾರು ಖರೀದಿಸಬಹುದು. ಇದರ ಗರಿಷ್ಠ ವೇಗ ಗಂಟೆಗೆ 45 ಕಿ.ಮೀ.
ಪೀಲ್ ಎಂಜಿನಿಯರಿಂಗ್ ಎಂಬ ಕಂಪನಿಯು ಈ ಪುಟ್ಟ ಕಾರುಗಳನ್ನು ನಿರ್ಮಿಸುತ್ತಿದೆ. ಈ ಪುಟ್ಟ ಕಾರಿನ ದರ ಸುಮಾರು 12 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಈ ಪುಟ್ಟ ಕಾರಿಗೆ ಕಡಿಮೆಯೆಂದರೂ ಎಂಟು ಟಾಟಾ ನ್ಯಾನೊ ಖರೀದಿಸಬಹುದು ಅಲ್ವೆ? ಇದು ಸಂಗ್ರಹಕಾರರ ಕಾರಾಗಿದ್ದು, ಹಾಗಾಗಿ ದುಬಾರಿ ಎಂದು ಕಂಪನಿ ಹೇಳಿದೆ.


Click it and Unblock the Notifications








