ಓವರ್‌ಟೇಕ್ ಗೊತ್ತಿದೆ; ಅಂಡರ್‌ಟೇಕ್ ಹೇಗೆ?

Written By:

ನಿಮ್ಮಗೆಲ್ಲರಿಗೂ ಓವರ್‌ಟೇಕ್ ಎಂಬ ಪದದ ಅರ್ಥ ಚೆನ್ನಾಗಿ ಗೊತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ವಾಹನಗಳು ಓವರ್‌ಟೇಕ್ ಮಾಡುತ್ತಿರುವ ದೃಶ್ಯಗಳು ಕಾಣಸಿಗುತ್ತಿರುವುದು ಸರ್ವೆ ಸಾಮಾನ್ಯ.

ಆದರೆ ನೀವು ಎಂದಾದರೂ ಅಂಡರ್‌ಟೇಕ್ ಬಗ್ಗೆ ಕೇಳಿದ್ದೀರಾ? ಅಂಡರ್‌ಟೇಕ್ ಎಂದಾಕ್ಷಣ ರೆಸ್ಲಿಂಗ್ ಚಾಂಪಿಯನ್‌ಶಿಪ್ ಅಂಡರ್‌ಟೇಕರ್ ಎಂದು ತಪ್ಪಾಗಿ ಗ್ರಹಿಸಬೇಡಿರಿ.

ಕೆಳಗಡೆ ಕೊಡಲಾಗಿರುವ ಚಿತ್ರದಲ್ಲಿ ತೋರಿಸಿರುವಂತೆಯೇ ಕಾರಿನಡಿಯಲ್ಲಿ ಬೈಕ್ ಸರಾಗವಾಗಿ ಸಾಗುತ್ತಿದೆ. ಹಾಗೆಯೇ ಕಾರು ಕೂಡಾ ಎರಡು ಟಯರ್‌ಗಳಲ್ಲಿ ಬಾಗಿಕೊಂಡು ಹಾದು ಹೋಗುವ ದೃಶ್ಯ ಎಂತವರನ್ನು ಮೈ ಜುಮ್ ಅನ್ನಿಸುತ್ತಿದೆ.

ಬ್ರಿಟನ್‌ನ ಪ್ರಖ್ಯಾತ ಕಾರು ಹಾಗೂ ಬೈಕ್ ಚಾಲಕರಿಬ್ಬರು ಈ ಸಾಹಸಿ ಸಂದರ್ಭದಲ್ಲಿ ಭಾಗಿಯಾಗಿದ್ದರೆ. ಹಾಗಿದ್ದರೆ ಫೋಟೊ ಫೀಚರ್ ಮೂಲಕ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸೋಣ.

Alfa Meets The Undertaker

Alfa Meets The Undertaker

ಅಲ್ಫಾ ರೊಮಿಯೊ ಮಿಟೊ ಕ್ವಾಡ್ರಿಫಾಗ್ಲಿಯೊ ವೆರ್ಡೆ ಎಸ್‌ಬಿಕೆ ಲಿಮಿಟೆಡ್ ಅಡಿಷನ್ ಕಾರನ್ನು ಬ್ರಿಟನ್ ಚಾಲಕ ಪಾಲ್ ಸ್ವಿಫ್ಟ್ ಚಲಾಯಿಸಿದ್ದಾರೆ. ಹಾಗೆಯೇ ಸೂಪರ್ ಬೈಕ್ ರೈಡರ್ ಕ್ರಿಸ್ ದಿ ಸ್ಟಾಲ್ಕರ್ ವಾಲ್ಕರ್ ಕಾಣಿಸಿಕೊಂಡಿದ್ದಾರೆ.

Alfa Meets The Undertaker

Alfa Meets The Undertaker

ಬ್ರಿಟನ್‌ನ ಸಿಲ್ವರ್ ಸ್ಟೋನ್ ಸರ್ಕ್ಯೂಟ್‌ನಲ್ಲಿ ಈ ರೋಮಾಂಚಕ ಡ್ರೈವಿಂಗ್ ಹಮ್ಮಿಕೊಳ್ಳಲಾಗಿದೆ. ನೀವೇ ಊಹಿಸಿ ನೋಡಿ ಕವಾಸಕಿ ನಿಂಜಾ ಝಡ್‌ಎಕ್ಸ್-10ಆರ್ ಬೈಕ್‌ ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಕ್ರಿಸ್ ಮನದಲ್ಲಿ ಏನು ಓಡಾಡುತ್ತಿರಬಹುದು?

Alfa Meets The Undertaker

Alfa Meets The Undertaker

ಪ್ಯಾರಿಸ್ ಮೋಟಾರ್ ಶೋದಲ್ಲಿ ಅಲ್ಫಾ ರೊಮಿಯೊ ಕ್ವಾಡ್ರಿಫಾಗ್ಲಿಯೊ ವೆರ್ಡೆ ಎಸ್‌ಬಿಕೆ ಲಿಮಿಟೆಡ್ ಅಡಿಷನ್ ಕಾರನ್ನು ಅನಾವರಣಗೊಳಿಸಲಾಗಿತ್ತು. ಬ್ರಿಟನ್‌ಗಾಗಿ 28 ಲಿಮಿಟೆಡ್ ಅಡಿಷನ್ ಕಾರುಗಳನ್ನು ಉತ್ಪಾದಿಸಿವೆ.

Alfa Meets The Undertaker

Alfa Meets The Undertaker

ಈ ಲಿಮಿಟೆಡ್ ಅಡಿಷನ್ ಕಾರು ಟು ಟೋನ್‌ ಲೈವರಿಯಿಂದ ಆಗಮನವಾಗಿದ್ದು, 18 ಅಲಾಯ್ ವೀಲ್‌ಗಳಿವೆ. ಹಾಗೆಯೇ ಬ್ರೆಂಮ್ಬೊ ಬ್ರೇಕ್, ಆಲ್ಪಾ ಆಕ್ಟಿವ್ ಸಸ್ಷೆಷನ್‌ಗಳಂತಹ ಫೀಚರ್‌ಗಳಿವೆ.

Alfa Meets The Undertaker

Alfa Meets The Undertaker

ಯಶಸ್ವಿ ಸಾಹಸಿ ದೃಶ್ಯದ ಬಳಿಕ ಗೆಲುವಿನ ಸಂಭ್ರಮಚಾರಿಸುತ್ತಿರುವ ಪಾಲ್ ಹಾಗೂ ಕ್ರಿಸ್

Alfa Meets The Undertaker

ವಿಡಿಯೋ

ಈ ಲಿಮಿಟೆಡ್ ಅಡಿಷನ್ ಕಾರು 1.4 ಮಲ್ಟಿ ಏರ್ ಪೆಟ್ರೋಲ್ (170 ಎಚ್‌ಪಿ) ಜತೆ ಆಗಮನವಾಗಿದ್ದು, ಕೇವಲ ಏಳು ಸೆಕೆಂಡುಗಳಲ್ಲೇ 0-100 ಕೀ.ಮೀ. ತನಕ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

English summary
We all know how to overtake on a motorcycle, however do you know how to undertake on a motorcycle? Alfa Romeo, the Italian car manufacturer has coordinated a thrilling world first ‘four wheels meets two wheels' driving dare experience.
Story first published: Friday, February 8, 2013, 12:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark