ಪೊಲೀಸರನ್ನು ವಂಚಿಸುವ ಅಂಬುಲೆನ್ಸ್ ಟ್ಯಾಕ್ಸಿಗಳು

ಸಾಮಾನ್ಯವಾಗಿ ಜೀವನ್ಮರಣದಲ್ಲಿ ಹೋರಾಡುತ್ತಿರುವ ರೋಗಿಗಳನ್ನು ಅಥವಾ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ಯುವ ಕೆಲಸವನ್ನು ಅಂಬುಲೆನ್ಸ್‌ಗಳು ಮಾಡುತ್ತಿರುತ್ತವೆ.

ಆದರೆ ರಷ್ಯಾದಲ್ಲೊಂದು ಪ್ರಕರಣ ದಾಖಲಾಗಿದ್ದು, ಅಂಬುಲೆನ್ಸ್ ರೂಪವನ್ನು ಹೊಂದಿರುವ ಟ್ಯಾಕ್ಸಿ ವಾಹನವನ್ನು ಶ್ರೀಮಂತರು ವಿಪರೀತ ವಾಹನ ದಟ್ಟಣೆಯಿಂದ ಪಾರಾಗಲು ಬಳಕೆ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿವೆ.

ಪ್ರಮುಖವಾಗಿಯೂ ಉದ್ಯಮಿಗಳು 10,500 ರುಪಾಯಿಗಳಷ್ಟು ಖರ್ಚು ಮಾಡಿ ಇಂತಹ ಅಂಬುಲೆನ್ಸ್ ಟ್ಯಾಕ್ಸಿಗಳನ್ನು ಬಳಕೆ ಮಾಡುತ್ತಿದ್ದಾರೆ. ಹೊರಗಿನಿಂದ ನೋಡುವಾಗ ನೈಜ ಅಂಬುಲೆನ್ಸ್ ವಿನ್ಯಾಸ ಹೊಂದಿದ್ದು, ಟ್ರಾಫಿಕ್ ಪೊಲೀಸರು ಮೋಸ ಹೋಗುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಂಬುಲೆನ್ಸ್ ತುರ್ತು ಲೈಟ್‌ಗಳನ್ನು ಇದೇ ಮೊದಲ ಬಾರಿಯೇನಲ್ಲ ನಕಲಿ ಮಾಡುತ್ತಿರುವುದು. ಆದರೆ ತುರ್ತು ಸೇವೆಯಲ್ಲಿರುವ ಅಂಬುಲೆನ್ಸ್‌ಗಳನ್ನೇ ನಕಲು ಮಾಡಲು ಆರಂಭಿಸಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Most Read Articles

Kannada
English summary
Recently news about a new and wrongful business practice has emerged from Russia. Certain enterprising businesses on the Internet have been offering ‘Ambulance Taxis' for hire. The name says it all. These are not ambulances for the sick and unhealthy, but for the wealthy to get past rush hour traffic in Moscow by blazing emergency lights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X