ಅಂಬುಲೆನ್ಸ್ ಸಂಚಾರಕ್ಕೆ ತಡೆ; ದೆಹಲಿ ನಿವಾಸಿಗೆ ದಂಡ

Written By:

ಕೆಲವು ದಿನಗಳ ಹಿಂದೆಯಷ್ಟೇ ನಾವೊಂದು ವರದಿಯನ್ನು ಪ್ರಕಟಿಸಿದ್ದೆವು. ಇದರ ಪ್ರಕಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ವಾಹನ ಸವಾರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದ್ದೆವು.

ಇನ್ನೇನು ಹೊಸ ನಿಯಮ ಜಾರಿಯಾದಂತೆ ದೆಹಲಿ ಮೂಲದವರೇ ಇಂತಹದೊಂದು ಎಡವಟ್ಟಿಗೆ ಸಿಲುಕಿದ್ದು, ದಂಡಕ್ಕೆ ಗುರಿಯಾಗಿದ್ದಾರೆ.

ambulance

ಅಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ತಡೆಯೊಡ್ಡಿದ್ದಲ್ಲಿ 2000 ರು. ದಂಡ ವಿಧಿಸಲಾಗುತ್ತಿದೆ. ಈಗ ಮೊತ್ತ ಮೊದಲ ಇಂತಹ ಪ್ರಕರಣ ದಾಖಲಾಗಿದ್ದು, ಬಿಳಿ ಮರ್ಸಿಡಿಸ್ ಕಾರಿನೊಂದಿಗೆ ವಿಐಪಿ ದಾಖಲಾತಿಯನ್ನು ಹೊಂತಿರುವ ದೆಹಲಿ ನಿವಾಸಿಯೊಬ್ಬರ ಮೇಲೆ 2000 ರು. ದಂಡ ಹೇರಲಾಗಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ದೆಹಲಿ ಪೊಲೀಸ್, ಪುರಾವೆಗಾಗಿ ಪ್ರಕರಣದ ವೀಡಿಯೋ ಕೂಡಾ ದಾಖಲಾಗಿಸಲಾಗಿದೆ ಎಂದಿದ್ದಾರೆ. ಬಳಿಕ ಕಾರು ನಂಬರ್ ಪತ್ತೆಹಚ್ಚುವ ಮೂಲಕ ಆರೋಪಿ ಮೇಲೆ ದಂಡ ವಿಧಿಸಲಾಗಿದೆ ಎಂದಿದ್ದಾರೆ.

English summary
According to the new rules passed by the government of India, an Ambulance has the right of way and anybody obstructing it will end up paying a fine, as well as face legal action.
Story first published: Saturday, January 17, 2015, 15:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark