ಮಂಗಳೂರಿನಲ್ಲಿ ವಿಶ್ವ ದರ್ಜೆಯ ಆಡಿ ಶೋ ರೂಂ ಆರಂಭ

Posted By:

ಜರ್ಮನಿಯ ಐಷಾರಾಮಿ ಹಾಗೂ ಪ್ರಸಕ್ತ ಭಾರಿ ಬೇಡಿಕೆ ಹೊಂದಿರುವ ಲಗ್ಷುರಿ ಕಾರುಗಳಲ್ಲಿ ಒಂದಾಗಿರುವ ಆಡಿ ಇಂಡಿಯಾ, ಕರಾವಳಿ ನಗರ ಮಂಗಳೂರಿನಲ್ಲೂ ವಿಶ್ವದರ್ಜೆಯ ಶೋ ರೂಂ ಆರಂಭಿಸಿದೆ. ಇದು ದೇಶದಲ್ಲಿ ಆಡಿ ಇಂಡಿಯಾದಿಂದ ತೆರೆದುಕೊಂಡಿರುವ 30ನೇ ಹಾಗೂ ರಾಜ್ಯದಲ್ಲಿ ಎರಡನೇ ಶೋ ರೂಂ ಆಗಿದೆ. ಆಡಿ ಈಗಾಗಲೇ ಬೆಂಗಳೂರಿನಲ್ಲಿ ತನ್ನ ಸಾನಿಧ್ಯವನ್ನು ಹೊಂದಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

  • ಎಲ್ಲಿ ಸ್ಥಿತಗೊಂಡಿದೆ: ಎಂಎಕೆ ಮಾಲ್, ಮಂಗಳೂರು
  • ವಿಸ್ತೀರ್ಣ: 5500 ಚದರ ಅಡಿ
  • ಬೆಂಗಳೂರು ಬಳಿಕ ರಾಜ್ಯದ ಎರಡನೇ ಶೋ ರೂಂ
  • ಒಟ್ಟಾರೆಯಾಗಿ ದೇಶದ 30ನೇ ಶೋ ರೂಂ
Audi India mangalore showroom

ದೇಶದಲ್ಲಿ ಲಭ್ಯವಿರುವ ಎಲ್ಲ ಆಡಿ ಮಾದರಿಗಳು ಮಂಗಳೂರು ಶೋ ರೂಂನಲ್ಲಿ ಗ್ರಾಹಕರಿಗೆ ದೊರಕಲಿದೆ. ಈ ಮೂಲಕ 2013ರ ವೇಳೆಗೆ ದೇಶದಲ್ಲಿನ ಶೋ ರೂಂಗಳ ಸಂಖ್ಯೆಯನ್ನು 34ಕ್ಕೆ ಏರಿಸುವ ಯೋಜನೆಯನ್ನು ಕಂಪನಿ ಹೊಂದಿದೆ. ಇದಲ್ಲದೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 17ರ ಸಮೀಪದ ಕುಲೂರ್ ಜಂಕ್ಷನ್‌ನಲ್ಲಿ ಆಡಿ ಎಕ್ಸ್‌ಕ್ಲೂಸಿವ್ ಸರ್ವೀಸ್ ಸೆಂಟರ್ ತೆರೆಯಲಾಗಿದೆ. ಪ್ರಸ್ತುತ ಸೆಂಟರ್ 13,200 ಚದರ ಅಡಿ ವರೆಗೂ ವಿಸ್ತಾರವಾಗಿದೆ. ಇಲ್ಲಿ ದಿನಂಪ್ರತಿ 12 ಕಾರುಗಳನ್ನು ಸರ್ವೀಸ್ ಮಾಡಿಸುವ ಸಾಮರ್ಥ್ಯ ಹೊಂದಿದೆ.

ಏತನ್ಮಧ್ಯೆ ಅಕ್ಟೋಬರ್ ತಿಂಗಳಲ್ಲೂ 1002 ಯುನಿಟ್ ಮಾರಾಟ ಕಂಡುಕೊಂಡಿರುವ ಆಡಿ, ಕ್ಯಾಲೆಂಡರ್ ವರ್ಷದಲ್ಲಿ ದೇಶದಲ್ಲಿ 10,000ಕ್ಕೂ ಹೆಚ್ಚು ಲಗ್ಷುರಿ ಕಾರುಗಳನ್ನು ಮಾರಾಟ ಮಾಡಿದ ಮೊದಲ ಸಂಸ್ಥೆಯೆಂಬ ಖ್ಯಾತಿಗೆ ಪಾತ್ರವಾಗಲಿದೆ.

ನೀವು ಆಡಿ ಸುದ್ದಿಗಳನ್ನು ಮಿಸ್ ಮಾಡಿದ್ರಾ? ಇಲ್ಲಿದೆ ನೋಡಿ

  • 2013 ಅಕ್ಟೋಬರ್ ಮಾರಾಟ ಸಂಖ್ಯೆ: 1002,
  • ವೃದ್ಧಿ: ಶೇಕಡಾ 17.8 (2012ರಲ್ಲಿ 850)
  • ಜನವರಿ-ಅಕ್ಟೋಬರ್ ವರೆಗಿನ ಒಟ್ಟು ಮಾರಾಟ: 8393 ಯುನಿಟ್,
  • ವೃದ್ಧಿ: ಶೇಕಡಾ 15.4 (2012 ಜನವರಿ-ಅಕ್ಟೋಬರ್: 7267)

ದೇಶದಲ್ಲಿ ಲಭ್ಯವಿರುವ ಆಡಿ ಕಾರುಗಳ ಪಟ್ಟಿ:

ಆಡಿ ಎ4, ಆಡಿ ಎ6, ಆಡಿ ಎ7 ಸ್ಪೋರ್ಟ್‌ಬ್ಯಾಕ್, ಆಡಿ ಎ8ಎಲ್, ಆಡಿ ಕ್ಯೂ3, ಆಡಿ ಕ್ಯೂ3 ಎಡಿಷನ್, ಆಡಿ ಕ್ಯೂ5, ಆಡಿ ಕ್ಯೂ7, ಆಡಿ ಎಸ್4, ಆಡಿ ಎಸ್6, ಆಡಿ ಆರ್‌ಎಸ್ 5 ಕೂಪೆ, ಆಡಿ ಟಿಟಿ ಕೂಪೆ, ಸೂಪರ್ ಸ್ಪೋರ್ಟ್ಸ್ ಕಾರ್ ಆಡಿ ಆರ್8, ಆಡಿ ಆರ್8 ಸ್ಪೈಡರ್ ಮತ್ತು ಆಡಿ ಆರ್8 ವಿ10

ದೇಶದಲ್ಲಿರುವ ಆಡಿ ಶೋ ರೂಂಗಳು:

ಬೆಂಗಳೂರು, ಮಂಗಳೂರು, ಅಹಮಾದಾಬಾದ್, ಭೋಪಾಲ್, ಭುವನೇಶ್ವರ, ಚಂಡೀಗಡ, ಚೆನ್ನೈ, ಕೊಯಂಬತ್ತೂರು, ದೆಹಲಿ ಸೆಂಟ್ರಲ್, ದೆಹಲಿ ದಕ್ಷಿಣ, ದೆಹಲಿ ಪಶ್ಚಿಮ, ಗೋವಾ, ಗುರ್ಗಾಂವ್, ಹೈದರಾಬಾದ್, ಇಂಧೋರ್, ಜೈಪುರ, ಕಾನ್ಪುರ, ಕರ್ನಾಲ್, ಕೊಚ್ಚಿ, ಕೋಲ್ಕತ್ತಾ, ಲೂಧಿಯಾನಾ, ಲಕ್ನೋ, ಮುಂಬೈ ಪಶ್ಚಿಮ, ಮುಂಬೈ ದಕ್ಷಿಣ, ನಾಗ್ಪುರ, ನವಿ ಮುಂಬೈ, ಪುಣೆ, ರಾಯ್‌ಪುರ, ಸುರತ್ ಮತ್ತು ವಡೋದರಾ.

English summary
Audi, the German luxury car manufacturer, today inaugurated its 30th world-class showroom in India and its 2nd in the state of Karnataka in Mangalore after Audi Bengaluru.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark