ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ಎಸಿ ರೈಲು; ಏನಿದೆ ವಿಶೇಷ?

ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಯೆಂಬಂತೆ ಬೆಂಗಳೂರು-ಚೆನ್ನೈ ಸಂಪೂರ್ಣ ಹವಾನಿಯಂತ್ರಿತ ಡಬಲ್ ಡೆಕ್ಕರ್ ರೈಲು ಗುರುವಾರದಿಂದ ಸಂಚಾರ ಆರಂಭಿಸಲಿದೆ. 2012-13ನೇ ಕೇಂದ್ರ ರೈಲ್ವೇ ಬಜೆಟ್‌ನಲ್ಲಿ ಈ ಬಹುನಿರೀಕ್ಷಿತ ಡಬಲ್ ಡೆಕ್ಕರ್ ರೈಲು ಘೋಷಿಸಲಾಗಿತ್ತು. ಅಲ್ಲದೆ ಈಗಾಗಲೇ ಪರೀಕ್ಷಾರ್ಥ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಪ್ರಮುಖವಾಗಿಯೂ ಬೆಂಗಳೂರು-ಚೆನ್ನೈ ನಗರಗಳ ಮಧ್ಯೆ ಅಧಿಕ ಸಂಚಾರ ದಟ್ಟಣೆಯನ್ನು ತಡೆಗಟ್ಟಲು ಡಬಲ್ ಡೆಕ್ಕರ್ ಎಸಿ ರೈಲು ಸೇವೆ ಒದಗಿಸಲಾಗಿದೆ.

ಏನಿದು ಡಬಲ್ ಡೆಕ್ಕರ್ ರೈಲು?

  • ಪಂಜಾಬ್‌ನ ಕಪುರ್ತಲಾ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿ.
  • 10 ಹವಾನಿಯಂತ್ರಿತ ಬೋಗಿ
  • ಪ್ರತಿಯೊಂದರಲ್ಲೂ 120 ಆಸನ
  • ಮೂರು ಹಂತದ ಆಸನ ವ್ಯವಸ್ಥೆ
  • ಲ್ಯಾಪ್‌ಟಾಪ್, ಮೊಬೈಲ್ ಚಾರ್ಜ್ ಮಾಡುವ ವ್ಯವಸ್ಥೆ
  • ರಿಯಲ್ ಟೈಮ್ ಮಾನಿಟರಿಂಗ್ ಸಿಸ್ಟಂ

ದರ ಎಷ್ಟು?
ಇನ್ನು ಸಾಮಾನ್ಯ ರೈಲು ಪಯಣಕ್ಕೆ ಹೋಲಿಸಿದರೆ ಡಬಲ್ ಡೆಕ್ಕರ್ ರೈಲುಗಳ ಪಯಣ ಸ್ಪಲ್ವ ದುಬಾರಿಯಾಗಿರುತ್ತದೆ. ಆದರೂ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಪಯಣವನ್ನು ಒದಗಿಸುತ್ತಿದೆ. ಇದು ಬೃಂದಾವನ, ಲಾಲ್ ಬಾಗ್ ಹಾಗೂ ಬೆಂಗಳೂರು ಎಕ್ಸ್‌ಪ್ರೆಸ್ ರೈಲುಗಳ ಎಸಿ ಕೋಚ್‌ಗಳ ಶುಲ್ಕಕ್ಕೆ ಸಮಾನವಾಗಿದೆ.

ಬೆಂಗಳೂರು-ಚೆನ್ನೈ

  • ಹಿರಿಯರಿಗೆ 470 ರು.
  • ಮಕ್ಕಳಿಗೆ 250 ರು.

ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ಎಸಿ ರೈಲು; ಏನಿದೆ ವಿಶೇಷ?

ಡಬಲ್ ಡೆಕ್ಕರ್ ಎಸಿ ರೈಲು, ಪ್ರತಿದಿನ ಬೆಳಗ್ಗೆ 7.25ಕ್ಕೆ ಚೆನ್ನೈನಿಂದ (ಸಂಖ್ಯೆ 22626) ಹೊರಟು ಮಧ್ಯಾಹ್ನ 1.20ಕ್ಕೆ ಬೆಂಗಳೂರು ತಲುಪಲಿದೆ. ಹಾಗೆಯೇ ಮಧ್ಯಾಹ್ನ ಬೆಂಗಳೂರಿನಿಂದ (ಸಂಖ್ಯೆ 22626) ಹೊರಟು ರಾತ್ರಿ 8.40ಕ್ಕೆ ಚೆನ್ನೈ ತಲುಪುತ್ತದೆ.

ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ಎಸಿ ರೈಲು; ಏನಿದೆ ವಿಶೇಷ?

ಪೆರಂಬೂರು, ಅರಕ್ಕೋಣಂ, ಕಟ್ಪಾಡಿ, ಅಂಬೂರ್, ಜೋಲಾರ್‌ಪೇಟೆ, ಬಂಗಾರಪೇಟೆ, ಕೃಷ್ಣರಾಜಪುರ ಮತ್ತು ಬೆಂಗಳೂರು ದಂಡು ನಿಲ್ದಾಣದಲ್ಲಿ ನಿಲುಗಡೆ ಇದೆ.

ಬೆಂಗಳೂರು-ಚೆನ್ನೈ ಟಿಕೆಟ್ ಬೆಲೆ

ಬೆಂಗಳೂರು-ಚೆನ್ನೈ ಟಿಕೆಟ್ ಬೆಲೆ

ಹಿರಿಯರಿಗೆ 470 ರು.

ಮಕ್ಕಳಿಗೆ 250 ರು.

ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ಎಸಿ ರೈಲು; ಏನಿದೆ ವಿಶೇಷ?

ಸಂಪೂರ್ಣ ಹವಾನಿಯಂತ್ರಿತ ಡಬಲ್ ಡೆಕ್ಕರ್ ರೈಲು 160 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದರೂ ಬೆಂಗಳೂರು-ಚೆನ್ನೈ 362 ಕೀ.ಮೀ. ದೂರವನ್ನು 110 ಕೀ.ಮೀ. ವೇಗದಲ್ಲಿ ಆರು ಗಂಟೆಯಲ್ಲಿ ಕ್ರಮಿಸಲಿದೆ.

ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ಎಸಿ ರೈಲು; ಏನಿದೆ ವಿಶೇಷ?

ಒಟ್ಟು ಮೂರು ಹಂತದ ಆಸನ ವ್ಯವಸ್ಥೆ ಹೊಂದಿರಲಿದೆ. ಪ್ಲಾಟ್‌ಫಾರ್ಮ್ ಹಂತದಲ್ಲಿ 22, ಮಧ್ಯದಲ್ಲಿ 48 ಮತ್ತು ಮೇಲ್ಮೈ ಹಂತದಲ್ಲಿ 50 ಸೆಮಿ ಕುಷನ್ ಆಸನಗಳನ್ನು ಲಗತ್ತಿಸಲಾಗಿದೆ.

ಜಿಪಿಎಸ್ ಪ್ಯಾಸೆಂಜರ್ ಮಾಹಿತಿ ಸಿಸ್ಟಂ

ಜಿಪಿಎಸ್ ಪ್ಯಾಸೆಂಜರ್ ಮಾಹಿತಿ ಸಿಸ್ಟಂ

-ರಿಯಲ್ ಟೈಮ್ ಪೊಸಿಶನ್

-ರೈಲು ವೇಗ, ದೂರ, ಮುಂದಿನ ಸ್ಟೇಷನ್ ಬಗ್ಗೆ ಮಾಹಿತಿ

-ಎಮರ್ಜನ್ಸಿ ವಿಂಡೋ

-ಏರ್ ಸಸ್ಫೆಷನ್ ಸಿಸ್ಟಂ

-ಮಲ್ಟಿಪಲ್ ಶಾಕ್ ಅಬ್ಸಾರ್ಬರ್

ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ಎಸಿ ರೈಲು; ಏನಿದೆ ವಿಶೇಷ?

ಒಟ್ಟಿನಲ್ಲಿ ಬೆಂಗಳೂರು-ಚೆನ್ನೈ ಆರಾಮದಾಯಕ ಸಂಚಾರಕ್ಕೆ ಈ ಡಬಲ್ ಡೆಕ್ಕರ್ ಎಸಿ ರೈಲು ನೆರವಾಗಲಿದೆ.

ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ಎಸಿ ರೈಲು; ಏನಿದೆ ವಿಶೇಷ?
ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ಎಸಿ ರೈಲು; ಏನಿದೆ ವಿಶೇಷ?
ಬೆಂಗಳೂರು-ಚೆನ್ನೈ ಡಬಲ್ ಡೆಕ್ಕರ್ ಎಸಿ ರೈಲು; ಏನಿದೆ ವಿಶೇಷ?

ಡಬಲ್ ಡೆಕ್ಕರ್ ಎಸಿ ರೈಲು ಸೇವೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
The much-anticipated AC Double Decker daily express train to Bangalore will commence operations on Thursday, bringing to fruition a proposal announced in the 2012-13 Railway Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X