ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರಲ್ಲಿ 'ಗೊರಿಲ್ಲಾ ಗ್ಲಾಸ್'

Written By:

ಐ3 ವಿದ್ಯುತ್ ಚಾಲಿತ ಕಾರು ವಿಭಾಗಕ್ಕೆ ಸೇರಿದ ಇತ್ತೊಂದು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ಸದ್ಯದಲ್ಲೇ ಜರ್ಮನಿ ಮೂಲದ ಪ್ರಮುಖ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು, ಅನಾವರಣಗೊಳಿಸುವುದಾಗಿ ನಾವು ಕೆಲವು ದಿನಗಳ ಹಿಂದೆಯಷ್ಟೇ ಮಾಹಿತಿ ಕೊಟ್ಟಿದ್ದೆವು. ಇದರ ಅಂಗವಾಗಿ ಈ ಬಹುನಿರೀಕ್ಷಿತ ಕಾರು ಪ್ರಾಖ್ಯಾತ ಫ್ರಾಂಕ್‌ಫರ್ಟ್ ಮೋಟಾರ್ ಶೋದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ನಿಮ್ಮ ಮಾಹಿತಿಗಾಗಿ 2009ರ ಫ್ರಾಂಕ್‌ಫರ್ಟ್ ಆಟೋ ಶೋದಲ್ಲೇ ಮೊದಲ ಬಾರಿಗೆ ಅನಾವರಣಗೊಂಡಿದ್ದ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು, ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಹಂತದಲ್ಲಿತ್ತು. ಅಲ್ಲದೆ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿತ್ತು. ಕೋಟಿ ಬೆಲೆ ಬಾಳುವ ಐ8 ಎಲೆಕ್ಟ್ರಿಕ್ ಕಾರು ಬಿಎಂಡಬ್ಲ್ಯುನಿಂದ ಆಗಮನವಾಗಲಿರುವ ಬಹುನಿರೀಕ್ಷಿತ ಕಾರಾಗಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಈ 'ಐ' ಫ್ಯಾಮಿಲಿ ಕಾರು ಮುಂದಿನ ವರ್ಷ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

To Follow DriveSpark On Facebook, Click The Like Button

ಹಾಗಿದ್ದರೂ ಆಟೋ ಮೂಲಗಳ ಪ್ರಕಾರ ಬಿಎಂಡಬ್ಲ್ಯು ಐ3ಯಲ್ಲಿ ಕಾಣಸಿಗದ ವಿಶೇಷ ಪರಿಕರವೊಂದನ್ನು ಐ8 ಕಾರಿನಲ್ಲಿ ಆಳವಡಿಸಲಾಗುತ್ತಿದೆ. ಅದುವೇ 'ಗೊರಿಲ್ಲಾ ಗ್ಲಾಸ್' ವಿಂಡೋ. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಹಾಗೂ ಲ್ಯಾಪ್‌ಲಾಪ್‌ಗಳಲ್ಲಿ ಬಳಸಲಾಗುವ ಈ ಗೊರಿಲ್ಲಾ ಗ್ಲಾಸ್, ಅತ್ಯಂತ ಹೆಚ್ಚು ಬಾಳ್ವಿಕೆಯುಳ್ಳ, ಗೀಚು ನಿರೋಧಕ ತಂತ್ರಜ್ಞಾನವನ್ನು ಹೊಂದಿರಲಿದೆ.

2013 ಫ್ರಾಂಕ್‌ಫರ್ಟ್ ಆಟೋ ಶೋದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಪ್ರದರ್ಶನಗೊಳ್ಳುವುದರೊಂದಿಗೆ ಗೊರಿಲ್ಲಾ ಗ್ಲಾಸ್ ವಿಂಡೋ ತಂತ್ರಜ್ಞಾನ ಹೊಂದಿದ ಮೊದಲ ಕಾರೆಂಬ ಖ್ಯಾತಿಗೆ ಪಾತ್ರವಾಗಲಿದೆ.

English summary
BMW i8 is a hybrid sports car which belongs to the same family as the recently launched i3 compact car. Revealed first as a concept car at the 2009 Frankfurt Auto Show, the i8 hybrid vehicle has gone through extensive development and testing during the last four years.
Story first published: Monday, August 12, 2013, 15:35 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark