ಕಾರು ಮಾರಾಟ ಕಳೆದೊಂದು ದಶಕದಲ್ಲೇ ದಾಖಲೆಯ ಕುಸಿತ

By Nagaraja

ಜಾಗತಿಕ ಕಾರು ಮಾರುಕಟ್ಟೆಯಲ್ಲಿ ಭಾರತವು ಕುಸಿಯುತ್ತಿದೆಯೇ? 2012-13ರ ಸಾಲಿನ ದೇಶದ ಕಾರು ಸೇಲ್ಸ್ ಕುಸಿದಿರುವುದರಿಂದ ವಿಶ್ಲೇಷಕರಲ್ಲಿ ಇಂತಹದೊಂದು ಆತಂಕ ಮನೆ ಮಾಡಿರುವುದಂತೂ ಅಷ್ಟೇ ಸತ್ಯ.

ಆರ್ಥಿಕ ಬೆಳವಣಿಗೆ ಕುಂಠಿತವಾಗಿರುವುದು ಹಾಗೂ ಬಡ್ಡಿದರ ಹೆಚ್ಚಳ ಎಲ್ಲವೂ ದೇಶದ ವಾಹನ ಮಾರುಕಟ್ಟೆಯನ್ನು ವ್ಯತಿರಿಕ್ತವಾಗಿ ಬಾಧಿಸ ತೊಡಗಿದೆ. ಇದರೊಂದಿಗೆ ವಿಶ್ವದಲ್ಲೇ ಏಳನೇ ಅತಿದೊಡ್ಡ ಕಾರು ಮಾರುಕಟ್ಟೆ ಹೊಂದಿರುವ ದೇಶದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಹಿಂಜರಿಯುವಂತಹ ಪರಿಸ್ಥಿತಿ ಎದುರಾಗಿದೆ.

ಕಳೆದ ಆರ್ಥಿಕ ಸಾಲಿನ ಎಲ್ಲ ನಾಲ್ಕು ತ್ರೈಮಾಸಿಕ ಅವಧಿಯಲ್ಲೂ ಹೊಸ ಕಾರಿನ ಮೇಲಿನ ಬೇಡಿಕೆ ಗಣನೀಯವಾಗಿ ಕುಸಿದಿದೆ. ಕಳೆದ ಮಾರ್ಚ್ ತಿಂಗಳು ಕೂಡಾ ಇದರಿಂದ ಹೊರತಾಗಿರಲಿಲ್ಲ. ಈ ಮೂಲಕ ಸತತವಾಗಿ ಐದನೇ ತಿಂಗಳಲ್ಲೂ ಕಾರು ಮಾರುಕಟ್ಟೆ ಹಿನ್ನಡೆ ಅನುಭವಿಸಿತ್ತು.

ಮಾರುತಿ ಸುಜುಕಿ, ಹ್ಯುಂಡೈ ಹಾಗೂ ಟಾಟಾ ಮೋಟಾರ್ಸ್ ಸೇರಿದಂತೆ ದೇಶದ ಮುಂಚೂಣಿಯ ಎಲ್ಲ ಕಾರು ಉತ್ಪಾದಕ ಸಂಸ್ಥೆಗಳು ಹಿನ್ನಡೆಯೊಂದಿಗೆ ಮಾರ್ಚ್ ತಿಂಗಳನ್ನು ಕೊನೆಗೊಳಿಸಿದೆ. ಪ್ರಸ್ತುತ ಇನ್ನಷ್ಟೇ ಬಿಡುಗಡೆಯಾಗಲಿರುವ ಹೋಂಡಾ ಅಮೇಜ್ ಸೆಡಾನ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ ಕಾರಿನ ಮೇಲೆ ನಿರೀಕ್ಷೆ ಮೂಡಿದೆ.

ಕೊನೆಯ ಬಾರಿ ಭಾರತೀಯ ಕಾರು ಮಾರುಕಟ್ಟೆ ಕುಸಿತ ಅನುಭವಿಸಿರುವುದು 2002-03ನೇ ಸಾಲಿನಲ್ಲಿ. ಅಂದು ದೇಶವು ಶೇಕಡಾ 2.1 ಕುಸಿತ ದಾಖಲಾಗಿತ್ತು. ಇದೀಗ ಒಂದು ದಶಕದ ಬಳಿಕ ಮತ್ತೆ ಹಿನ್ನಡೆ ಅನುಭವಿಸಿದೆ. ಅಂದ ಹಾಗೆ ಈ ಬಾರಿ ಪರಿಸ್ಥಿತಿ ತುಂಬಾನೇ ಹದೆಗೆಟ್ಟಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಬಲ್ಲ ಮೂಲಗಳ ಪ್ರಕಾರ ಸದ್ಯಕ್ಕಂತೂ ಕಾರು ಮಾರುಕಟ್ಟೆ ಚೇತರಿಸಿಕೊಳ್ಳುವ ಯಾವುದೇ ಲಕ್ಷ್ಮಣಗಳು ಗೋಚರಿಸುತ್ತಿಲ್ಲ. 2013-14ನೇ ಸಾಲಿನ ಕೇಂದ್ರ ಬಜೆಟ್ ಕೂಡಾ ಆಟೋ ಜಗತ್ತಿನ ವಿರುದ್ಧವಾಗಿತ್ತು. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದಿದೆ. ಮಾರುತಿಯು ಶೇಕಡಾ 4 ಹಾಗೂ ಹ್ಯುಂಡೈ 14ರಷ್ಟು ಕುಸಿತ ಅನುಭವಿಸಿದ್ದರೆ ಟಾಟಾ ಮೋಟಾರ್ಸ್ ಮಾರ್ಚ್ ತಿಂಗಳಲ್ಲಿ ಶೇಕಡಾ 67ರಷ್ಟು ಕುಸಿದಿರುವುದು ಭಾರಿ ಆತಂಕಕ್ಕೆ ಕಾರಣವಾಗಿತ್ತು.

ಸಮಕಾಲೀನ ಪರಿಸ್ಥಿತಿಯಲ್ಲಿ ಕಾರು ಮಾರುಕಟ್ಟೆ ಎಸ್‌ಯುವಿ ಮೇಲೆ ಹೆಚ್ಚು ನಿರ್ಭರವಾಗಿದೆ. ರೆನೊ ಡಸ್ಟರ್, ಮಾರುತಿ ಎರ್ಟಿಗಾ ಜತೆ ಮುಂಬರುವ ಫೋರ್ಡ್ ಇಕೊಸ್ಪೋರ್ಟ್ ಹೆಚ್ಚು ಉತ್ತೇಜನ ನೀಡುವ ನಿರೀಕ್ಷೆಯಲ್ಲಿದೆ.

Most Read Articles

Kannada
English summary
Demand for new cars has remained weak for most parts of the fiscal, and March did not prove to be any different. The fall in March will be the fifth straight month of decline for the car industry.
Story first published: Tuesday, April 2, 2013, 11:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X