ಬೃಹತ್ ರಿಕಾಲ್; 1 ಲಕ್ಷ ಷೆವರ್ಲೆ ತವೆರಾ ವಾಪಾಸ್

Written By:
To Follow DriveSpark On Facebook, Click The Like Button
Chevrolet Tavera
ದೇಶದ ವಾಹನ ಜಗತ್ತಿನ ಇತಿಹಾಸದಲ್ಲೇ ಅತಿ ದೊಡ್ಡ ರಿಕಾಲ್‌ ಎಂದೇ ವಿಶ್ಲೇಷಿಸಬಹುದಾದ ಪ್ರಕರಣದಲ್ಲಿ, ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಒಂದು ಲಕ್ಷದಷ್ಟು ಷೆವರ್ಲೆ ತವೆರಾ ಆವೃತ್ತಿಗಳನ್ನು ವಾಪಾಸ್ ಕರೆಯಿಸಿಕೊಳ್ಳುತ್ತಿದೆ.

ಮೂಲಗಳ ಪ್ರಕಾರ 1.4 ಷೆವರ್ಲೆ ಮಲ್ಟಿ ಪರ್ಪಸ್ ತವೆರಾ ವಾಹನಗಳನ್ನು ರಿಕಾಲ್ ಮಾಡಲಾಗುತ್ತಿದೆ. ಹೊಗೆ ಹೊರಸೂಸುವಿಕೆ ಹಾಗೂ ಕೆಲವು ನಿರ್ಧಿಷ್ಟ ಸಮಸ್ಯೆಗಳು ಕಾಣಿಸಿಕೊಂಡಿದ್ದರಿಂದ 2005ರಿಂದ 2013ರ ವರೆಗಿನ ಮಾಡೆಲ್‌ಗಳನ್ನು ಹಿಂಪಡೆಯಲಾಗುತ್ತಿದೆ.

ತವೆರಾ BSIII ಹಾಗೂ BSIV ವೆರಿಯಂಟ್‌ಗಳಲ್ಲಿ ಸಮಸ್ಯೆ ತಲೆದೋರಿರುವ ಬಗ್ಗೆ ಭಾರತ ಸರಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ ಷೆವರ್ಲೆ ತವೆರಾ ಬಿಎಸ್3 (2.5 ಲೀಟರ್ ವೆರಿಯಂಟ್) ಹಾಗೂ ಬಿಎಸ್4 (2.0ಲೀಟರ್ ವೆರಿಯಂಟ್) ವೆರಿಯಂಟ್‌ಗಳನ್ನು ತಾತ್ಕಾಲಿಕವಾಗಿ ವಾಪಾಸ್ ಪಡೆಯಲಾಗುತ್ತಿದೆ. ಈ ಎಲ್ಲ ಕಾರುಗಳನ್ನು ದೇಶದಲ್ಲಿ ವ್ಯಾಪಿಸಿರುವ 280 ಡೀಲರುಗಳ ಬಳಿ ಉಚಿತವಾಗಿ ಸರಿಪಡಿಸಿಕೊಡಲಾಗುವುದು ಎಂದು ಕಂಪನಿ ತಿಳಿಸಿದೆ.

ಅಂದ ಹಾಗೆ ತವೆರಾ ಬಿಎಸ್III ಹಾಗೂ ಬಿಎಸ್IV ವೆರಿಯಂಟ್‌ ಉತ್ಪಾದನೆಗಳನ್ನು ಅನುಕ್ರಮವಾಗಿ ಜೂನ್ 4 ಹಾಗೂ ಜುಲೈ 2ರಂದು ಸ್ಥಗಿತಗೊಳಿಸಲಾಗಿದೆ.

English summary
GM India has recalled 1.14 lakh Tavera units in India. GM India recalled Tavera BS-3 & Tavera BS-4 trims due to emission issues.
Story first published: Thursday, July 25, 2013, 11:48 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark