ದೇಶದ ಆಟೋ ಮಾರುಕಟ್ಟೆ ಭಾರಿ ಕುಸಿತ

Written By:
Domestic sales in India decline Feb 2013
ದೇಶದ ಆಟೋಮೊಬೈಲ್ ಜಗತ್ತು ಫೆಬ್ರವರಿ ತಿಂಗಳಲ್ಲಿ ಒಟ್ಟಾರೆಯಾಗಿ ಶೇಕಡಾ 5.45ರಷ್ಟು ಕುಸಿತವನ್ನು ಕಂಡಿದೆ. ಪ್ರಾಯಾಣಿಕ ಕಾರು ಮಾರುಕಟ್ಟೆ ಭಾರಿ ಕುಸಿತ ಕಂಡಿರುವುದು ಭಾರಿ ಹಿನ್ನಡೆಗೆ ಕಾರಣವಾಗಿದೆ.

ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿ ನೋಡಿದಾಗ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆ ಶೇಕಡಾ 26ರಷ್ಟು ಕುಸಿತ ಅನುಭವಿಸಿದೆ. ಹಾಗೆಯೇ ರಫ್ತು ಕೂಡಾ ಶೇಕಡಾ 1.66ರ ಕುಸಿತ ದಾಖಲಿಸಿದೆ.

ಕಾಂಪಾಕ್ಟ್ ಹ್ಯಾಚ್‌ಬ್ಯಾಕ್, ಸೆಡಾನ್ ಸೇರಿದಂತೆ ಯುಟಿಲಿಟಿ ವೆಹಿಕಲ್‌ಗಳು ಸಹ ಭಾರಿ ಆಘಾತ ಅನುಭವಿಸಿದೆ. ದೇಶದ ಮುಂಚೂಣಿಯ ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಟೊಯೊಟಾ ಕಿರ್ಲೋಸ್ಕರ್ ಹಾಗೂ ಹೋಂಡಾ ಕಂಪನಿಗಳು ಕುಸಿತದತ್ತ ಮುಖ ಮಾಡಿವೆ. ಹಾಗಿದ್ದರೂ ದ್ವಿಚಕ್ರ ಹಾಗೂ ತ್ರಿಚಕ್ರ ಸೆಗ್ಮೆಂಟ್‌ನ ವಾಹನಗಳು ಸ್ವಲ್ಪ ಪ್ರಗತಿಯನ್ನು ದಾಖಲಿಸಿವೆ.

ಆಟೋ ಜಗತ್ತಿಗೆ ಪೂರಕವಾದ ವಾತಾವರಣ ನಿರ್ಮಾಣವಾಗದಿರುವುದು ಇಷ್ಟೊಂದು ದೊಡ್ಡ ಮಟ್ಟದ ಕುಸಿತಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಹಾಗಿದ್ದರೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆ ಕಾಣುವ ಭರವಸೆಯನ್ನು ಆಟೋ ಉದ್ಯಮ ಹೊಂದಿದೆ.

English summary
The Indian automobile sector suffered a 5.45 per cent decline in the overall domestic sales volume during February 2013. During the period, passenger car market dropped drastically by 26 per cent.
Story first published: Monday, March 18, 2013, 18:17 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark