ಯಾತ್ರಿಕರೇ, ಫ್ಲೈ ಬಸ್ ಸಮಯ ಪರಿಷ್ಕರಣೆ

Posted By:

ಯಾತ್ರಿಕರ ಗಮನಕ್ಕೆ, ಮೈಸೂರು ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಫ್ಲೈ ಬಸ್ ಸಂಚರಿಸುವ ಸಮಯದಲ್ಲಿ ಬದಲಾವಣೆ ಕಂಡುಬಂದಿದೆ.

ವಿಮಾನ ಹತ್ತುವ ಮೊದಲೇ ವಿಮಾನಯಾನದ ಅನುಭವ

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಫೇಸ್‌ಬುಕ್ ಅಧಿಕೃತ ಪೇಜ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಫ್ಲೈ ಬಸ್ ಸೇವೆ ಆರಂಭಿಸಲಾಗಿತ್ತು. ಇದೀಗ ಪ್ರಯಾಣಿಕರ ಬೇಡಿಕೆಯ ಅನುಸಾರವಾಗಿ ಸಮಯ ಬದಲಾವಣೆ ಮಾಡಲಾಗಿದೆ.

FLYBUS Timings Revised

ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಐರಾವತ್ ಕ್ಲಬ್ ಕ್ಲಾಸ್ (ವೋಲ್ವೋ ಮಲ್ಟಿ ಎಕ್ಸೆಲ್) ಬಸ್ಸುಗಳು ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದೆ. ಇದರಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಎಸಿ ಸುಖಾಸೀನ ಆಸನಗಳನ್ನು ಆಳಡಡಿಸಲಾಗಿದೆ.

ಫ್ಲೈ ಬಸ್ ಪರಿಷ್ಕೃತ ಸಮಯಗಳ ವಿವರ ಇಂತಿದೆ:

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರು ಕಡೆಗೆ ಹೊರಡುವ ಸಮಯ ಬೆಳಗ್ಗೆ ಗಂಟೆ 10.30 ಹಾಗೂ ರಾತ್ರಿ 9.00ಕ್ಕೆ

ತಲುಪುವ ಸಮಯ ಮಧ್ಯಾಹ್ನ ಗಂಟೆ 2.30 ಹಾಗೂ ಮಧ್ಯರಾತ್ರಿ 12.45ಕ್ಕೆ.

ಮೈಸೂರಿನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಹೊರಡುವ ಸಮಯ ಸಂಜೆ 3.00 ಹಾಗೂ ಮಧ್ಯರಾತ್ರಿ 1.00ಕ್ಕೆ

ತಲುಪುವ ಸಮಯ ಸಂಜೆ 7.00 ಹಾಗೂ ಬೆಳಗ್ಗೆ 4.45ಕ್ಕೆ ಸರಿಯಾಗಿ

ಅನುಷ್ಠಾನಗೊಳ್ಳುವ ದಿನಾಂಕ: ಡಿಸೆಂಬರ್ 22 ಹಾಗೂ 23

English summary
FLYBUS timings are revised as suggested by the commuters.
Please Wait while comments are loading...

Latest Photos