ಮಹೀಂದ್ರ ವೆರಿಟೊ ಎಲೆಕ್ಟ್ರಿಕ್ ಕಾರು ಆಗಮನ ಖಚಿತ!

Posted By:

ದೇಶದ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆಗಳಲ್ಲಿ ಅಗ್ರಗಣ್ಯ ಎನಿಸಿಕೊಂಡಿರುವ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು, ತನ್ನ ಜನಪ್ರಿಯ ಮಹೀಂದ್ರ ವೆರಿಟೊ ವಿದ್ಯುತ್ ಚಾಲಿತ ಕಾರು ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ.

ಇದಕ್ಕೆ ನೀವು ತುಂಬಾ ಸಮಯ ಕಾಯಬೇಕಾಗಿಲ್ಲ. ಇನ್ನೊಂದು ವರ್ಷದೊಳಗೆ ಎಂಟ್ರಿ ಲೆವೆಲ್ ವೆರಿಟೊ ಸೆಡಾನ್ ಎಲೆಕ್ಟ್ರಿಕ್ ಕಾರು ಪರಿಚಯಿಸುವುದಾಗಿ ಮಹೀಂದ್ರ ಘೋಷಿಸಿದೆ. ಕಂಪನಿಯು ಇದಕ್ಕಾಗಿ 150 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ.

ಒಟ್ಟು ಮೂರು ಮಾಡೆಲ್ ಎಲೆಕ್ಟ್ರಿಕ್ ಕಾರು ಆಗಮನವಾಗಲಿದೆ. ಅವುಗಳೆಂದರೆ

  • ಗಿಯೊ (gio)
  • ಮಾಕ್ಸಿಮೊ (maxximo)
  • ವೆರಿಟೊ (verito)

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂ ಆಂಡ್ ಎಂ ಕಂಪನಿ ಅಧ್ಯಕ್ಷ ಪವನ್ ಗೋನ್ಖಾ, ಸದ್ಯ ಚಾಲ್ತಿಯಲ್ಲಿರುವ ಕೆಲವು ಉತ್ಪನ್ನಗಳಿಗೆ ಎಲೆಕ್ಟಿಕ್ ವಾಹನ ತಂತ್ರಜ್ಞಾನ ಆಳವಡಿಸುವ ಯೋಜನೆಯಿದೆ. ಗಿಯೊ ಹಾಗೂ ಮಾಕ್ಸಿಮೊ ಆವೃತ್ತಿಗಳ ಆಳವಡಿಕೆ ಬಹುತೇಕ ಪೂರ್ಣಗೊಂಡಿದೆ. ಹಾಗೆಯೇ ವೆರಿಟೊ ಎಲೆಕ್ಟ್ರಿಕ್ ಕಾರಿನ ಮೊದಲ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.

50 ಮಾಕ್ಸಿಮೊ ವಿದ್ಯುತ್ ಚಾಲಿತ ವಾಹನಗಳು ಈಗಾಗಲೇ ತಯಾರುಗೊಂಡಿವೆ. ಇವುಗಳ ಬಿಡುಗಡೆ ಈಗಷ್ಟೇ ಮಾರುಕಟ್ಟೆಗೆ ಲಾಂಚ್ ಆಗಿರುವ ಇ2ಒ ಮಾರಾಟವನ್ನು ಅವಲಂಬಿಸಿರಲಿದೆ.

ದೇಶದಲ್ಲಿ ಪ್ರತಿ ತಿಂಗಳು 400ರಿಂದ 500 ಇ2ಒ ಸೇಲ್ ಆಗುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ. ಆದರೆ ದೆಹಲಿ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ದರ ಸ್ವಲ್ಪ ದುಬಾರಿಯಾಗಿರುವುದರಿಂದ ಈ ಸಂಖ್ಯೆ ತಲುಪುವುದು ಸ್ವಲ್ಪ ಕಷ್ಟಕರ. ಹಾಗಿದ್ದರೂ ಮುಂದಿನ 8-9 ತಿಂಗಳಲ್ಲಿ ಇ2ಒ ಯುರೋಪ್‌ಗೆ ರಫ್ತು ಮಾಡುವ ಕುರಿತಂತೆ ಯೋಜನೆಯಿದೆ. ಇದೇ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮಹೀಂದ್ರ ಹೊಂಚು ಹಾಕುತ್ತಿದೆ.

ಇವನ್ನೂ ಓದಿ: ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು

ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

English summary
Mahindra had confirmed during the launch event of e2o in New Delhi that electric sedans was something the company was considering and would launch based on user response. It now looks like an electric sedan from Mahindra's stable could be launched sooner than anyone expected.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more