ಮಹೀಂದ್ರ ತಯಾರಿಸಲಿದೆ ಎಲೆಕ್ಟ್ರಿಕ್ ಎಸ್‌ಯುವಿ ಕಾರು!

Written By:
ದಕ್ಷಿಣ ಕೊರಿಯಾದ ತನ್ನ ಪಾಲುದಾರ ಸ್ಯಾಂಗ್ಯೊಂಗ್ ಜತೆ ಕೈಜೋಡಿಸಿಕೊಳ್ಳಲಿರುವ ದೇಶದ ಪ್ರಖ್ಯಾತ ವಾಹನ ತಯಾರಕ ಕಂಪನಿ ಮಹೀಂದ್ರ ಆಂಡ್ ಮಹೀಂದ್ರ, ನಿಕಟ ಭವಿಷ್ಯದಲ್ಲಿ ವಿದ್ಯುತ್ ಚಾಲಿತ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ತಯಾರಿಸಲಿದೆ.

ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಮಹೀಂದ್ರ ಸ್ಯಾಂಗ್ಯೊಂಗ್ ಎಲೆಕ್ಟ್ರಿಕ್ ಎಸ್‌ಯುವಿ ವಾಹನ ನಿರ್ಮಾಣವಾಗಲಿದೆ. ಮಹೀಂದ್ರ ಇತ್ತೀಚೆಗಷ್ಟೇ ರೇವಾ ಇ2ಒ ಎಲೆಕ್ಟ್ರಿಕ್ ಕಾರನ್ನು ಲಾಂಚ್ ಮಾಡಿತ್ತು. ಇದು ಇನ್ನಷ್ಟು ಸ್ಪೂರ್ತಿ ತುಂಬುವ ಸಾಧ್ಯತೆಯಿದೆ.

ಹೈ ಎಂಡ್ ವಾಹನಗಳಲ್ಲಿ ಎಲೆಕ್ಟ್ರಿಕ್ ಪವರ್ ಟ್ರೈನ್ ಬಳಕೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎನ್‌ಎಕ್ಸ್‌ಆರ್ ಸಣ್ಣ ವಿದ್ಯುತ್ ಚಾಲಿತ ವಾಹನವಾಗಿತ್ತು. ಆದರೆ ದೊಡ್ಡ ವಾಹನಗಳಿಗೆ ಹೆಚ್ಚಿನ ಪವರ್ ಟ್ರೈನ್‌ಗಳ ಅಗತ್ಯವಿದೆ ಎಂದು ಮಹೀಂದ್ರ ಆಂಡ್ ಮಹೀಂದ್ರ ತಿಳಿಸಿದೆ.

ವರದಿಯ ಪ್ರಕಾರ ಹೆಚ್ಚು ಶಕ್ತಿಶಾಲಿ ಎಲೆಕ್ಟ್ರಿಕ್ ಪವರ್ ಟ್ರೈನ್ ರಚಿಸಲು ಮಹೀಂದ್ರದ ರೇವಾ ಎಲೆಕ್ಟ್ರಿಕ್ ಕಾರು ವಿಭಾಗ ನೆರವಾಗಲಿದೆ. ಸದ್ಯ ಮಹೀಂದ್ರ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

English summary
Mahindra & Mahindra, along with its South Korean brand SsangYong has plans to launch electric SUVs in the near future, according to some reports.
Story first published: Thursday, March 21, 2013, 15:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark