ಹಗುರ ವಾಣಿಜ್ಯ ವಾಹನ ತಯಾರಿಸಲಿರುವ ಮಾರುತಿ

By Nagaraja

ದೇಶದ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಸದ್ಯದಲ್ಲೇ ವಾಣಿಜ್ಯ ವಾಹನ ಮಾರುಕಟ್ಟೆಗೂ ಎಂಟ್ರಿ ಕೊಡಲಿದೆ.

ಆರಂಭದಲ್ಲಿ ಹಗುರ ಭಾರದ ವಾಣಿಜ್ಯೋದ್ಯಮ ವಾಹನಗಳನ್ನು ತಯಾರಿಸುವುದು ಮಾರುತಿ ಇರಾದೆಯಾಗಿದೆ. ಇದಕ್ಕೆ ಪೂರಕವೆಂಬಂತೆ ಸುಜುಕಿ ಕ್ಯಾರಿ ತಲಹದಿಯಲ್ಲಿ ನಿರ್ಮಾಣವಾಗಲಿರುವ ಹಗುರ ಭಾರದ ವಾಣಿಜ್ಯ ವಾಹನವನ್ನು ದೇಶಕ್ಕೆ ಪರಿಚಯಿಸಲಿದೆ. ಮಾರುತಿ ಓಮ್ನಿ ಜತೆಗೂ ಫ್ಲಾಮ್ ಫಾರ್ಮ್ ಹಂಚಿಕೊಳ್ಳಲಿರುವ ನೂತನ ಹಗುರ ಭಾರದ ವಾಣಿಜ್ಯ ವಾಹನ ಡೀಸೆಲ್ ಹಾಗೂ ಸಿಎನ್ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ.

ಹಾಗಿದ್ದರೂ ವಾಣಿಜ್ಯ ಮಾರುಕಟ್ಟೆಗೆ ಮಾರುತಿ ಎಂಟ್ರಿಯು ಎರಡು ವರ್ಷಗಳಷ್ಟು ವಿಳಂಬವಾಗಲಿದೆ. ಕಂಪನಿಯ ಪ್ರಕಾರ ಎಂಜಿನಿಯರ್‌ಗಳು ನೂತನ ವಾಹನ ಉತ್ಪಾದಿಸುವುದರಲ್ಲಿ ಕಾರ್ಯಮಗ್ನವಾಗಿದ್ದಾರೆ.

ಕ್ವಾಡ್ರಾಸೈಕಲ್ ವಿಭಾಗಕ್ಕೆ ಎಂಟ್ರಿ..?
ಈ ನಡುವೆ ಕ್ವಾಡ್ರಾಸೈಕಲ್ ವಿಭಾಗಕ್ಕೂ ಎಂಟ್ರಿ ಕೊಡಲು ಮಾರುತಿ ಸುಜುಕಿ ಯೋಜನೆ ಹಮ್ಮಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಪ್ರಸ್ತುತ ಈ ನಾಲ್ಕು ಚಕ್ರದ ವಿಭಾಗದಲ್ಲಿ ಬಜಾಜ್‌ನ ಆರ್‌ಇ60 ಮಾತ್ರ ರಂಗಕ್ಕಿಳಿದಿದೆ. ಇತ್ತೀಚೆಗಷ್ಟೇ ಕ್ವಾಡ್ರಾಸೈಕಲ್ ವಿಭಾಗಕ್ಕೆ ಕೇಂದ್ರ ಸರಕಾರವು ಗ್ರೀನ್ ಸಿಗ್ನಲ್ ನೀಡಿತ್ತು. ಇದರಂತೆ ಸುಜುಕಿ ಕ್ಯಾರಿ ತಲಹದಿಯಲ್ಲಿ ನಿರ್ಮಾಣವಾಗಲಿರುವ ನೂತನ ಹಗುವ ವಾಣಿಜ್ಯ ವಾಹನ ಕ್ವಾಡ್ರಾಸೈಕಲ್ ವಿಭಾಗಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಚಿಂತನೆಯಲ್ಲಿದೆ.

Most Read Articles

Kannada
English summary
The automaker Maruti Suzuki has confirmed that it will enter the Light Commercial Vehicle segment with the introduction of a brand new model.
Story first published: Monday, July 29, 2013, 12:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X