ಪೊಲರಿಸ್‌ನಿಂದ ವಾಯುರಹಿತ ಟೈರ್ ತಂತ್ರಜ್ಞಾನ
ಎಲ್ಲ ಭೂಪ್ರದೇಶಕ್ಕೆ ಹೊಂದಿಕೆಯಾಗುವ ವಾಹನಗಳನ್ನು (ಎಟಿವಿ) ತಯಾರಿಸುವುದರಲ್ಲಿ ನಿಸ್ಸೀಮವಾಗಿರುವ ಪೊಲರಿಸ್, ಇದೀಗ ನೂತನ ವಾಯುರಹಿತ ತಂತ್ರಗಾರಿಕೆಯ ಚಕ್ರಗಳನ್ನು ಅಭಿವೃದ್ಧಿಗೊಳಿಸಿದೆ.
ಜಗತ್ತಿನ ಅತಿದೊಡ್ಡ ಆಲ್ ಟರೈನ್ ವೆಹಿಕಲ್ ಉತ್ಪಾದಕರಾದ ಪೊಲರಿಸ್ ತನ್ನ ನೂತನ ಮಿಲಿಟರಿ ವಾಹನವಾದ ಡಬ್ಲ್ಯುವಿ850 ಎಚ್.ಒ ಎಟಿವಿಯಲ್ಲಿ ಈ ನೂತನ ಚಕ್ರಗಳನ್ನು ಆಳವಡಿಸಿದೆ. ಘನ ವಸ್ತುಗಳನ್ನು ಹೊತ್ಯೊಯ್ಯುವುದಕ್ಕೆ ಪೊಲರಿಸ್‌ನ ಈ ವಾಹನಗಳನ್ನು ಬಳಕೆ ಮಾಡಬಹುದಾಗಿದೆ.

ಆಧುನಿಕತೆಯ ಭಾಗವಾಗಿ ಚಕ್ರಗಳ ವಿನ್ಯಾಸದಲ್ಲೂ ಕ್ರಾಂತಿಕಾರಿ ಬದಲಾವಣೆ ಕಂಡುಬರುತ್ತಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ವಾಯುರಹಿತ ಚಕ್ರ ಇದಾಗಿದೆ.

ಸಹಜವಾಗಿಯೇ ವಾಯು ರಹಿತ ಚಕ್ರವು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರಲಿದೆ. ಅಲ್ಲದೆ ಆಫ್ ರೋಡ್‌ನಲ್ಲಿ ಎದುರಾಗಬಹುದಾದ ಪಂಚರ್ ಇತ್ಯಾದಿ ತೊಂದರಿಗಳನ್ನು ತಪ್ಪಿಸಬಹುದಾಗಿದೆ.

ಪ್ರಸ್ತುತ ಕಂಪನಿಯು ಇದಕ್ಕೆ ಸಂಬಂಧಪಟ್ಟಂತೆ ಎರಡು ವೀಡಿಯೋ ಚಿತ್ರಣಗಳನ್ನು ಬಿಡುಗಡೆಗೊಳಿಸಿದೆ. ಇದಕ್ಕಾಗಿ ಮುಂದಿನ ಪುಟದತ್ತ ಮುಂದುವರಿಯಿರಿ...
ವೀಡಿಯೋ ವೀಕ್ಷಿಸಿ
ವೀಡಿಯೋ ವೀಕ್ಷಿಸಿ


Click it and Unblock the Notifications








