ಪವರ್ ಸ್ಟೀರಿಂಗ್ ನ್ಯಾನೋ ಬಗ್ಗೆ ಹೆಚ್ಚಿನ ಮಾಹಿತಿ ಲೀಕ್
ಈ ವರೆಗೆ ನ್ಯಾನೋ ಪ್ರೇಮಿಗಳು ತಮ್ಮ ಕನಸಿನ ಕಾರಲ್ಲಿ ಪವರ್ ಸ್ಟೀರಿಂಗ್ ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಆನ್ ನ್ಯೂ ಪವರ್ ಸ್ಟೀರಿಂಗ್ ಹೊಂದಿರುವ ನ್ಯಾನೋ ಕಾರನ್ನು ಮುಂದಿನ ವರ್ಷಾರಂಭದಲ್ಲೇ ಲಾಂಚ್ ಮಾಡಲು ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಯೋಜನೆ ಹಾಕಿಕೊಂಡಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ
ಪ್ರಸ್ತುತ ನ್ಯಾನೋ ಪವರ್ ಸ್ಟೀರಿಂಗ್ ಬಗೆಗಿನ ಹೆಚ್ಚಿನ ಮಾಹಿತಿಗಳು ಹೊರಬಂದಿವೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ನ್ಯಾನೋ ಪವರ್ ಸ್ಟೀರಿಂಗ್ ಕಾರು 2014 ಜನವರಿ 15ರಂದು ರಸ್ತೆ ಸೇರಲಿದೆ.

ಪ್ರಮುಖ ಅಂಶಗಳು:
- ನೂತನ ಪವರ್ ಸ್ಟೀರಿಂಗ್ ಹೊಂದಿರುವ ನ್ಯಾನೋ ಟ್ವಿಸ್ಟ್ ಎಂದು ಹೆಸರಿಸಿಕೊಳ್ಳಲಿದೆ.
- ಹಾಗಿದ್ದರೂ ಪವರ್ ಸ್ಟೀರಿಂಗ್ ನ್ಯಾನೋ ತಮ್ಮದಾಗಿಸಲು ನೀವು ಸಾಮಾನ್ಯ ನ್ಯಾನೋ ಆವೃತ್ತಿಯ ದರಗಿಂತಲೂ 15,000 ರು.ಗಳಷ್ಟು ಹೆಚ್ಚು ಪಾವತಿಸಬೇಕಾಗಿದೆ.
- ಇದನ್ನು ಜರ್ಮನಿಯ ಪ್ರಖ್ಯಾತ ಟ್ರಾನ್ಸ್‌ಮಿಷನ್ ಸಂಸ್ಥೆ ಝಡ್‌ಎಫ್ ಅಭಿವೃದ್ಧಿಪಡಿಸುತ್ತಿದೆ.
- ನ್ಯಾನೋ ಪವರ್ ಸ್ಟೀರಿಂಗ್ ಎಲೆಕ್ಟ್ರಾನಿಕ್ ವಿಧಾನ ಹೊಂದಿರಲಿದೆ.
- ಟಾಟಾ ನ್ಯಾನೋ ಎಕ್ಸ್‌ಇ ಮತ್ತು ಎಕ್ಸ್‌ಟಿ ವೆರಿಯಂಟ್‌ಗಳಲ್ಲಿ ಈ ಸೌಲಭ್ಯವಿರಲಿದೆ.
- ಇದು ನೇರಳೆ ದೇಹ ಬಣ್ಣದಲ್ಲಿ ಲಭ್ಯವಿರಲಿದೆ.
ಒಟ್ಟಿನಲ್ಲಿ ಪವರ್ ಸ್ಟೀರಿಂಗ್ ನ್ಯಾನೋ ಎಷ್ಟರ ಮಟ್ಟಿಗೆ ಗ್ರಾಹಕರನ್ನು ಆಕರ್ಷಿಸಲುವಲ್ಲಿ ಯಶ ಕಾಣಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.


Click it and Unblock the Notifications








