ವೋಲ್ವೋ ಬಸ್ ನಿರ್ವಾಹಕರಿಂದ ಭದ್ರತಾ ಲೋಪ..?

By Nagaraja

ಬೆನ್ನು ಬೆನ್ನಿಗೆ ಸಂಭವಿಸಿದ ವೋಲ್ವೋ ಬಸ್ ದುರಂತ ಇಡೀ ದೇಶವನ್ನು ಬೆಚ್ಚಿಬೀಳಿಸುವಂತಾಗಿದೆ. ಹೈದಾರಾಬಾದ್‌ನ ಮೆಹಬೂಬ್‌ನಗರದಲ್ಲಿ ನಡೆದ ವೋಲ್ವೋ ಬಸ್ ಅಗ್ನಿ ಅನಾಹುತದಲ್ಲಿ 45 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರೆ ಹಾವೇರಿಯಲ್ಲಿ ನಡೆದ ದುರಂತದಲ್ಲಿ ಏಳು ಮಂದಿ ಅಸುನೀಗಿದ್ದರು.

ಈ ನಡುವೆ ಪ್ರಾಥಮಿಕ ತನಿಖಾ ವರದಿಯಲ್ಲಿ ಬಸ್ಸು ನಿರ್ವಾಹಕರ ಸುರಕ್ಷಾ ಲೋಪ ಕಂಡುಬಂದಿದೆ. ಬಸ್ ನಿರ್ವಾಹಕರು ಸರಿಯಾದ ಸುರಕ್ಷಾ ಕ್ರಮಗಳನ್ನು ಅನುಸರಿಸಲು ವಿಫಲವಾಗಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಬೆಳಗಾಂ ಐಜಿಪಿ ಬಾಸ್ಕರ್ ರಾವ್ ತಿಳಿಸಿದ್ದಾರೆ.
ಇವನ್ನೂ ಓದಿ: ವೋಲ್ವೋ ಇಂಧನ ಟ್ಯಾಂಕ್ ಸ್ಫೋಟಗೊಳ್ಳಲು ಸಾಧ್ಯವಿಲ್ಲ?

ಹಾವೇರಿಯಲ್ಲಿ ನಡೆದಿದ್ದೇನು?

ಹಾವೇರಿಯಲ್ಲಿ ನಡೆದಿದ್ದೇನು?

ಅಮಿತ ವೇಗದಲ್ಲಿ ಸಂಚರಿಸಿದ ಬಸ್ ಡಿವೈಡರ್‌ಗೆ ಢಿಕ್ಕಿಯಾಗಿ ಬಳಿಕವೂ 164 ಮೀಟರ್ ತನಕ ಮುಂದಕ್ಕೆ ಚಲಿಸಿತ್ತು. ಅಲ್ಲದೆ ಬಸ್ಸಿನಿಂದ ತುಂಡಾದ ಬಿಡಿಭಾಗ 200 ಮೀಟರ್ ದೂರದ ವರಗೆ ಹರಡಿರುವುದು ಕಂಡುಬಂದಿದೆ.

(ಸಾಂದರ್ಭಿಕ ಚಿತ್ರ ಬಳಕೆ- ಮೆಹಬೂಬ್‌ನಗರ ಬಸ್ ದುರಂತ)

ನಿದ್ರೆಗೆ ಜಾರಿದ್ದ ಸಹ ಚಾಲಕ...

ನಿದ್ರೆಗೆ ಜಾರಿದ್ದ ಸಹ ಚಾಲಕ...

ಪ್ರಾಥಮಿಕ ತನಿಖೆಯಲ್ಲಿ ಬಸ್ಸಿನ ಸಹ ಚಾಲಕ ಬಸ್ಸಿನ ಲಗ್ಗೇಜ್ ಸ್ಪೇಸ್‌ನಲ್ಲಿ ನಿದ್ರಿಸುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಬಹುಶ: ಸಾವಿಗೆ ಸುಟ್ಟ ಮೊದಲ ವ್ಯಕ್ತಿ ಅವರೇ ಆಗಿರಬಹುದು.

(ಸಾಂದರ್ಭಿಕ ಚಿತ್ರ ಬಳಕೆ- ಮೆಹಬೂಬ್‌ನಗರ ಬಸ್ ದುರಂತ)

ಅನಧಿಕೃತ ಸೀಟು...

ಅನಧಿಕೃತ ಸೀಟು...

ಬೆಳಕಿಗೆ ಬಂದ ಇನ್ನೊಂದು ಪ್ರಮುಖ ವಿಚಾರವೆಂದರೆ ಡ್ರೈವರ್ ಬದಿಯಲ್ಲಿ ಅನಧಿಕೃತ ಸೀಟುವೊಂದನ್ನು ಲಗತ್ತಿಸಲಾಗಿತ್ತು. ಈ ಸೀಟಿನಲ್ಲಿ ಕ್ಲೀನರ್ ಕುಳಿತುಕೊಂಡಿದ್ದರು. ಇದರಿಂದ ಬೆಂಕಿ ಅನಾಹುತ ಸಂಭವಿಸಿದಾಗ ವೇಳೆ ಪ್ರಯಾಣಿಕರಿಗೆ ಪಾರಾಗುವ ಅವಕಾಶಕ್ಕೆ ಅಡಚಣೆಯುಂಟಾಗಿತ್ತು. ಇದು ಕೂಡಾ ಸಾವಿನ ಸಂಖ್ಯೆ ಏರಲು ಕಾರಣವಾಗಿರಬಹುದು.

(ಸಾಂದರ್ಭಿಕ ಚಿತ್ರ ಬಳಕೆ- ಮೆಹಬೂಬ್‌ನಗರ ಬಸ್ ದುರಂತ)

ವೋಲ್ವೋ ಬಸ್ಸುಗಳಲ್ಲಿ ಸುರಕ್ಷಾ ಲೋಪ...

ವೋಲ್ವೋ ಬಸ್ಸುಗಳಲ್ಲಿ ಸುರಕ್ಷಾ ಲೋಪ...

ಈಗಾಗಲೇ ಆರರಷ್ಟು ಬಸ್ಸುಗಳನ್ನು ತನಿಖೆಗೊಳಪಡಿಸಿರುವ ತನಿಖಾ ತಂಡ, ಅನೇಕ ಬಸ್ಸುಗಳಲ್ಲಿ ಸುರಕ್ಷಾ ಲೋಪ ಕಂಡುಬಂದಿರುವುದಾಗಿ ತಿಳಿಸಿದೆ.

(ಸಾಂದರ್ಭಿಕ ಚಿತ್ರ ಬಳಕೆ- ಮೆಹಬೂಬ್‌ನಗರ ಬಸ್ ದುರಂತ)

ಸುತ್ತಿಗೆ ಇಲ್ಲ...

ಸುತ್ತಿಗೆ ಇಲ್ಲ...

ತುರ್ತು ಪರಿಸ್ಥಿತಿ ಎದುರಾದಾಗ ಬಸ್ಸಿನೊಳಗೆ ಗಾಜನ್ನು ಒಡೆಯಲು ಸುತ್ತಿಗೆಯನ್ನು ಲಗತ್ತಿಸಲಾಗಿರುತ್ತದೆ. ಆದರೆ ಬಹುತೇಕ ಎಲ್ಲ ಬಸ್ಸುಗಳಲ್ಲಿ ಇದರ ಅಭಾವ ಕಂಡುಬರುತ್ತಿದೆ ಎಂದು ತನಿಖಾ ತಂಡ ತಿಳಿಸಿದೆ.

(ಸಾಂದರ್ಭಿಕ ಚಿತ್ರ ಬಳಕೆ- ಮೆಹಬೂಬ್‌ನಗರ ಬಸ್ ದುರಂತ)

ಸೀಟು ಬೆಲ್ಟ್‌ಗಳ ಕೊರತೆ...

ಸೀಟು ಬೆಲ್ಟ್‌ಗಳ ಕೊರತೆ...

ಇನ್ನು ಚಾಲಕ ಸೇರಿದಂತೆ ಪ್ರಯಾಣಿಕರಿಗೂ ಸೀಟು ಬೆಲ್ಟ್ ಆಳವಡಿಸಲಾಗಿರಲಿಲ್ಲ ಎಂದು ತನಿಖಾ ತಂಡ ವಿವರಿಸಿದೆ. ಅಷ್ಟೇ ಯಾಕೆ ಅನೇಕ ಚಾಲಕರಿಗೆ ಸೀಟ್ ಬೆಲ್ಟ್ ಧರಿಸುವುದೇ ಹೇಗೆಂದು ಗೊತ್ತಿಲ್ಲ ಎಂದಿದೆ.

(ಸಾಂದರ್ಭಿಕ ಚಿತ್ರ ಬಳಕೆ- ಮೆಹಬೂಬ್‌ನಗರ ಬಸ್ ದುರಂತ)

ಸೇಫ್ಟಿ ವೀಡಿಯೋ...

ಸೇಫ್ಟಿ ವೀಡಿಯೋ...

ಹಾಗೆಯೇ ಬಸ್ ನಿರ್ವಾಹಕರು ಪಯಣದ ಮುನ್ನ ಪ್ರಯಾಣಿಕರಿಗೆ ತೋರಿಸಬೇಕಾದ ಸುರಕ್ಷಾ ವೀಡಿಯೋ ಬಗ್ಗೆ ಸ್ವಲ್ಪನೂ ಮಾಹಿತಿ ಹೊಂದಿರುವುದಿಲ್ಲ ಎಂಬುದು ಕೂಡಾ ತನಿಖೆಯಲ್ಲಿ ತಿಳಿದು ಬಂದಿದೆ.

(ಸಾಂದರ್ಭಿಕ ಚಿತ್ರ ಬಳಕೆ- ಮೆಹಬೂಬ್‌ನಗರ ಬಸ್ ದುರಂತ)

ಅಷ್ಟಕ್ಕೂ ಬಸ್ಸಿಗೆ ಹೇಗೆ ಅಗ್ನಿ ಸ್ಪರ್ಶವಾಗಿತ್ತು?

ಅಷ್ಟಕ್ಕೂ ಬಸ್ಸಿಗೆ ಹೇಗೆ ಅಗ್ನಿ ಸ್ಪರ್ಶವಾಗಿತ್ತು?

ಸಹಜವಾಗಿಯೇ ಇಂತಹದೊಂದು ಪ್ರಶ್ನೆ ಎದುರಾದಾಗ ತನಿಖೆ ತಂಡದ ಉತ್ತರ ಹೀಗಿತ್ತು- ಬಸ್ಸು ಢಿಕ್ಕಿ ಹೊಡೆದ ರಭಸದ ಪರಿಣಾಮ ವಿಪರೀತ ಶಾಖವುಂಟಾಗಿ ಅಗ್ನಿ ಅನಾಹುತ ಸಂಭವಿಸಿದೆ. ಬಸ್ ಢಿಕ್ಕಿಯಾದ ಪರಿಣಾಮ ಇಂಧನ ಟ್ಯಾಂಕ್ ಒಡೆದಿರಬಹುದು. ಇದರಿಂದ ತಕ್ಷಣ ಸಂಪೂರ್ಣ ಬಸ್ಸಿಗೆ ಬೆಂಕಿ ಆವರಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ವಿಧಿವಿಜ್ಞಾನ (ಫಾರೆನ್ಸಿಕ್) ಪ್ರಯೋಗಾಲಯದ ವರದಿಯ ಬಳಿಕವಷ್ಟೇ ತಿಳಿದು ಬರಲಿದೆ ಎಂದಿದೆ.

(ಸಾಂದರ್ಭಿಕ ಚಿತ್ರ ಬಳಕೆ- ಮೆಹಬೂಬ್‌ನಗರ ಬಸ್ ದುರಂತ)


Most Read Articles

Kannada
English summary
The Volvo bus inferno at Haveri that claimed seven lives happened because of serious violations of safety norms by the operator
Story first published: Saturday, November 16, 2013, 16:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X