ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

Written By:

ಇತ್ತೀಚೆಗಷ್ಟೇ ಅನಾವರಣಗೊಂಡಿರುವ 2014 ಹೋಂಡಾ ಸಿಟಿ ಡೀಸೆಲ್ ಕಾರಿಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರಕುತ್ತಿದ್ದು, ನಿಜಕ್ಕೂ ಮಿಡ್ ಸೈಜ್ ಸೆಗ್ಮೆಂಟ್‌ನಲ್ಲಿ ಗೇಮ್ ಚೇಂಜರ್ ಎನಿಸಿಕೊಳ್ಳುತ್ತಿದೆ.

ಭಾರತದತ್ತ ಹೆಜ್ಜೆಯನ್ನಿಟ್ಟ ಹೋಂಡಾ ಜಾಝ್

ಇದೇ ವರ್ಷದಲ್ಲಿ ಲಾಂಚ್ ಕಂಡಿದ್ದ ಅಮೇಜ್ ಇಂಧನ ಕ್ಷಮತೆಯನ್ನು ಮೀರಿಸಿರುವ ಹೋಂಡಾ ಸಿಟಿ ಡೀಸೆಲ್ ಪ್ರತಿ ಲೀಟರ್‌ಗೆ 26 ಕೀ.ಮೀ. ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಿರುವುದು ಪ್ರಸ್ತುತ ಕಾರಿನ ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರ ವಹಿಸಲಿದೆ. ಸದ್ಯ ದೇಶದ ರಸ್ತೆಯಲ್ಲಿ ಓಡಾಡುವ ಕಾರುಗಳ ಪೈಕಿ ಅತಿ ಹೆಚ್ಚು ಇಂಧನ ಕ್ಷಮತೆಯುಳ್ಳ ಕಾರೆಂಬ ಹಿರಿಮೆಯನ್ನು ಸಿಟಿ ಗಿಟ್ಟಿಸಿಕೊಂಡಿದೆ. ಈ ನಾಲ್ಕನೇ ತಲೆಮಾರಿನ ಕಾರು 2014 ಜನವರಿ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಹೆಚ್ಚಿನ ಆಸಕ್ತಿದಾಯಕ ಮಾಹಿತಿಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಲ್ಲಿ 2014 ಹೋಂಡಾ ಸಿಟಿ ಲಭ್ಯವಿರಲಿದೆ. ಅಂದರೆ 1.5 ಲೀಟರ್ ಐ-ವಿಟೆಕ್ ಎಂಜಿನ್ 119 ಪಿಎಸ್ ಪವರ್ (145 ಎನ್‌ಎಂ ಟಾರ್ಕ್) ಮತ್ತು 1.5 ಲೀಟರ್ ಐಡಿಟೆಕ್ ಡೀಸೆಲ್ ಎಂಜಿನ್‌ 100 ಪಿಎಸ್ ಪವರ್ (200 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಹಾಗಿದ್ದರೂ ಹೆಚ್ಚು ಗುಣಮಟ್ಟದ ಕಾರು ಪ್ರದಾನ ಮಾಡುವುದರಲ್ಲಿ ಹೋಂಡಾ ಎಂಜಿನಿಯರುಗಳು ಯಶಸ್ವಿಯಾಗಿದ್ದಾರೆ. ಪ್ರಮುಖವಾಗಿಯೂ ಎಂಜಿನ್ ಶಬ್ದದಲ್ಲಿ ಗಣನೀಯವಾದ ಇಳಿಕೆ ಕಂಡಿದ್ದು, ಗರಿಷ್ಠ ಗಂಟೆಗೆ 190 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇದು ಅಮೇಜ್‌ಗೆ ಹೋಲಿಸಿದರೆ 45 ಕೀ.ಮೀ.ಗಳಷ್ಟು ಹೆಚ್ಚಾಗಿದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಇನ್ನು ಗೇರ್ ಬಾಕ್ಸ್ ಪರಿಗಣಿಸಿದರೆ ಸಿಟಿ ಡೀಸೆಲ್ ಮ್ಯಾನುವಲ್ 6 ಸ್ಪೀಡ್ ಗೇರ್ ಬಾಕ್ಸ್ ಹಾಗೆಯೇ ಪೆಟ್ರೋಲ್ ಆವೃತ್ತಿ 5 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನಿಂದ ಲಭ್ಯವಾಗಲಿದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಇಲ್ಲಿ ಕುತೂಹಲಕಾರಿ ಅಂಶವೆಂದರೆ 2014 ಹೋಂಡಾ ಸಿಟಿಯ ಪೆಟ್ರೋಲ್ ಆಟೋಮ್ಯಾಟಿಕ್ ಸಿವಿಟಿ, ಸಿಟಿ ಪೆಟ್ರೋಲ್ ಮ್ಯಾನುವಲ್ 5 ಸ್ಪೀಡ್ ಗೇರ್ ಬಾಕ್ಸ್‌ಗಿಂತಲೂ ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಲಿದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಒಟ್ಟಿನಲ್ಲಿ ದೇಶದ ರಸ್ತೆ ಪರಿಸ್ಥಿತಿಯಲ್ಲಿ ಅತ್ಯಂತ ಇಂಧನ ಕ್ಷಮತೆಯುಳ್ಳ ಕಾರೆಂಬ ಖ್ಯಾತಿಗೆ ಹೋಂಡಾ ಪಾತ್ರವಾಗಿದೆ. ಇದರೊಂದಿಗೆ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರು ಎರಡನೇ ಸ್ಥಾನಕ್ಕೆ ತಳ್ಳಲ್ಪಡಲಿದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ನಿಮ್ಮ ಮಾಹಿತಿಗಾಗಿ, ಸಿವಿಕ್ ಫೆರಿಯೊ ತಲಹದಿಯಲ್ಲಿ ನಿರ್ಮಾಣವಾಗಿದ್ದ ಮೊದಲ ತಲೆಮಾರಿನ ಹೋಂಡಾ ಸಿಟಿ (ವಿಟೆಕ್ ಎಂಜಿನ್) ಪ್ರಮುಖವಾಗಿಯೂ ದಕ್ಷಿಣಪೂರ್ವ ಏಷ್ಯಾ ಪ್ರದೇಶಗಳನ್ನು ಗುರಿ ಮಾಡಲಾಗಿತ್ತು.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಬಳಿಕ ಎರಡನೇ ತಲೆಮಾರಿನ ಹೋಂಡಾ ಸಿಟಿ (ಐಡಿಎಸ್‌ಐ) 2002ನೇ ಇಸವಿಯಲ್ಲಿ ಮಾರುಕಟ್ಟೆಗಿಳಿದಿತ್ತು. ಇದು ತನ್ನ ಮಾರಾಟವನ್ನು ಜಪಾನ್ ಹಾಗೂ ಚೀನಾ ದೇಶಗಳಿಗೂ ವಿಸ್ತರಿಸಿತ್ತು. ಒಂದು ಮಿಲಿಯನ್ ಯುನಿಟ್ ಮಾರಾಟ ಕಂಡುಕೊಂಡ ಹೋಂಡಾ ಸಿಟಿ 2008ರ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಗುರುತಿಸಿಕೊಂಡಿತ್ತು.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಇದಾದ ಬಳಿಕ ಮೂರನೇ ತಲೆಮಾರಿನ ಹೋಂಡಾ ಸಿಟಿ (ಐವಿಟೆಕ್ ಎಂಜಿನ್) 2008ರಲ್ಲಿ ಆಗಮನವಾಗಿತ್ತು. ಇದು ಏಷ್ಯಾದಲ್ಲಿ ಹೋಂಡಾ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಇದೀಗ ನಾಲ್ಕನೇ ತಲೆಮಾರಿನ 2014 ಹೋಂಡಾ ಸಿಟಿ ಮಿಡ್ ಸೈಜ್ ಕಾರಿನ ಅನಾವರಣವು ಭಾರತದಲ್ಲಿ 2013 ನವೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಸಾಗಿದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಈ ಮೂಲಕ 1996ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಹೋಂಡಾ ಸಿಟಿ ಇದುವರೆಗೆ 55 ರಾಷ್ಟ್ರಗಳಲ್ಲಾಗಿ 2.2 ಮಿನಿಯನ್ ಯಶಸ್ವಿ ಗ್ರಾಹಕರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಕೇವಲ ಮಾರಾಟ ಮಾತ್ರವಲ್ಲ. ಜಾಗತಿಕವಾಗಿ 100ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಸೊರೆಗೈಯುವಲ್ಲಿ ಈ ಮಿಡ್ ಸೈಜ್ ಸೆಡಾನ್ ಕಾರು ಯಶಸ್ವಿಯಾಗಿದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಹೋಂಡಾ ಸಿಟಿ ಅನಧಿಕೃತ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದ್ದು, ರು. 50000 ಪಾವತಿಸಬೇಕಾಗುತ್ತದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

ಒಟ್ಟಿನಲ್ಲಿ ಹೋಂಡಾ ಸಿಟಿ ಬೆಲೆ 8ರಿಂದ 9 ಲಕ್ಷ ರು.ಗಳ ಅಸುಪಾಸಿನಲ್ಲಿರುವ ನಿರೀಕ್ಷೆಯಿದೆ.

English summary
Ladies and gentlemen, meet India's new king of mileage, the 2014 Honda City sedan. Unveiled last month in Delhi and scheduled for launch in January, the new Honda City diesel has toppled the Honda Amaze diesel from its throne.
Story first published: Tuesday, December 17, 2013, 12:58 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark