ಬೆಂಗಳೂರಿಗೆ ಕಾಲಿಟ್ಟ 2014 ಜಾಗ್ವಾರ್ ಎಕ್ಸ್‌ಜೆ

Written By:

ಪ್ರತಿಷ್ಠಿತ 2014 ಜಾಗ್ವಾರ್ ಎಕ್ಸ್‌ಜೆ ಮಾದರಿ ಬೆಂಗಳೂರು ಪ್ರವೇಶಿಸಿದೆ. ಕಳೆದ ತಿಂಗಳಷ್ಟೇ ಈ ಬಹುನಿರೀಕ್ಷಿತ ಕಾರು ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿತ್ತು. ಎಕ್ಸ್‌ಜೆ 3.0ಎಲ್ ಡೀಸೆಲ್ ಪ್ರೀಮಿಯಂ ಲಗ್ಷುರಿ ಮತ್ತು ಫೋಟ್‍ಫೋಲಿಯೊ ಎಂಬ 2 ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಇದನ್ನು ಸ್ಥಳೀಯ ಪುಣೆ ಘಟಕದಲ್ಲಿ ಉತ್ಪಾದಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಉಪಾಧ್ಯಕ್ಷ ರೋಹಿತ್ ಸೂರಿ, 'ನಾವು ಜಾಗ್ವಾರ್ ಎಕ್ಸ್‌ಜೆಯನ್ನು ಬೆಂಗಳೂರಿನ ಮಾರುಕಟ್ಟೆಗೆ ಪರಿಚಯಿಸಲು ಹೆಮ್ಮೆಪಡುತ್ತೇವೆ. ಹೊಸ 2014ರ ಎಕ್ಸ್‌ಜೆ ಅತ್ಯಾಧುನಿಕ ಆಯ್ಕೆಗಳನ್ನು ಹೊಂದಿದೆ. ಆಕರ್ಷಕ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಂಡಿದೆ. ಬ್ರಿಟಿಷ್ ಶೈಲಿಗೆ ಮರುವ್ಯಾಖ್ಯಾನ ನೀಡಿದ್ದು, ಐಷಾರಾಮಿ, ವಿನ್ಯಾಸ ಮತ್ತು ಸಂತೃಪ್ತಿಗಳು ಮತ್ತಷ್ಟು ಹೆಚ್ಚಿವೆ' ಎಂದಿದ್ದಾರೆ.

To Follow DriveSpark On Facebook, Click The Like Button
Jaguar XJ

ಹೊಸ ಜಾಗ್ವಾರ್ ಎಕ್ಸ್‌ಜೆ ರಿಯರ್ ಸೀಟ್ ಆರಾಮದಾಯಕತೆಯಿಂದ ಉತ್ಕೃಷ್ಟಗೊಂಡಿದೆ. ಇದರಲ್ಲಿ 3 ಮಸಾಜ್ ಸೀಟ್ ಕಾರ್ಯ ನಿರ್ವಹಣೆಯಿದ್ದು ರಿಯರ್ ಹೆಡ್‍ರೂಂ ಸಹ ಹೆಚ್ಚಿಸಲಾಗಿದೆ. ಎಲೆಕ್ಟ್ರಿಕ್ ರಿಯರ್ ಸೈಡ್ ವಿಂಡೊ, ಎಲ್‍ಇಡಿ ರೀಡಿಂಗ್ ಲೈಟ್ಸ್, 25.9 ಸಿಎಂ ರಿಯರ್ ಇನ್ಫೋಟೈನ್‍ಮೆಂಟ್ ಸ್ಕ್ರೀನ್ ಮತ್ತು ಹೊಸ ರಿಯರ್ ಬಿನಿನೆಸ್ ಟೇಬಲ್ ಇದರ ಪ್ರಮುಖ ಆಕರ್ಷಣೆ.

ಎಕ್ಸ್‌ಜೆ 3.0 ಡೀಸೆಲ್ ಪ್ರಿಮಿಯಂ ಲಗ್ಷುರಿ 93.74 ಲಕ್ಷ ರು. (ಎಕ್ಸ್ ಶೋ ಬೆಂಗಳೂರು) ಮತ್ತು ಜಾಗ್ವಾರ್ ಎಕ್ಸ್‌ಜೆ 3.0 ಡೀಸೆಲ್ ಫೋರ್ಟ್‍ಪೋಲಿಯೊ 1.45 ಕೋಟಿ ರು. (ಎಕ್ಸ್ ಶೋ ರೂಂ ಬೆಂಗಳೂರು)ನಲ್ಲಿ ಲಭ್ಯವಿದೆ.

English summary
2014 Jaguar XJ Drives Into Bengaluru
Story first published: Saturday, July 12, 2014, 12:55 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark