2015 ಫೋಕ್ಸ್‌ವ್ಯಾಗನ್ ಪಸ್ಸಾಟ್ ಮೊದಲ ರೇಖಾಚಿತ್ರ ಬಿಡುಗಡೆ

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ 2015 ಪಸ್ಸಾಟ್ ಸೆಡಾನ್ ಕಾರಿನ ರೇಖಾಚಿತ್ರ ಹಾಗೂ ಇದಕ್ಕೆ ಸಂಬಂಧಿಸಿದ ಗಮನಾರ್ಹ ಮಾಹಿತಿಗಳನ್ನು ಹೊರಗೆಡವಿದೆ.

ಹಿಂದಿನ ಆವೃತ್ತಿಯನ್ನು ಗಮನಿಸಿದರೆ ಫೋಕ್ಸ್‌ವ್ಯಾಗನ್ ಪಸ್ಸಾಟ್ ಉತ್ತರಾಧಿಕಾರಿಯು ಹೆಚ್ಚು ಕ್ರೀಡಾತ್ಮಕ ಮೈಬಣ್ಣವನ್ನು ಪಡೆದುಕೊಳ್ಳಲಿದೆ. ಎಂಕ್ಯೂಬಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ಮಾದರಿಯು ತನ್ನದೇ ಆದ ವಿಶಿಷ್ಟ ನೋಟ, ಫ್ರಂಟ್ ಗ್ರಿಲ್, ಮೊನಾಚಾದ ಹೆಡ್‌ಲ್ಯಾಂಪ್ ಪಡೆದುಕೊಳ್ಳಲಿದೆ.

ಹಾಗೆಯೇ ಸ್ಪೋರ್ಟಿ ವೀಲ್ ಆರ್ಚ್ ಜೊತೆಗೆ ಟ್ವಿನ್ ಎಕ್ಸಾಸ್ಟ್ ಪಡೆದುಕೊಳ್ಳಲಿದೆ. ಮೇಲಿನ ರೇಖಾ ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಫೋಕ್ಸ್‌ವ್ಯಾಗನ್ ಪಸ್ಸಾಟ್ ಹೆಚ್ಚು ಆಕರ್ಷಣೀಯವಾಗಿರಲಿದೆ.

ನೂತನ ಪಸ್ಸಾಟ್, 12.3 ಇಂಚಿನ ಡಿಜಿಟಲ್ ಇನ್ಸ್ಟ್ರಮೆಂಟ್ ಕ್ಲಸ್ಟರ್ ಹಾಗೂ ಮಾಹಿತಿ ಮನರಂಜನಾ ಸಿಸ್ಟಂ ಪಡೆದುಕೊಳ್ಳಲಿದೆ. ಇನ್ನುಳಿದಂತೆ ಅನೇಕ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇವುಗಳಲ್ಲಿ ಹೊಸತಾದ 2.0 ಲೀಟರ್, 4 ಸಿಲಿಂಡರ್ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಪ್ರಮುಖವಾಗಿರಲಿದೆ.

ಇದರಲ್ಲಿರುವ ಹೊಸ ಎಂಜಿನ್ 240 ಅಶ್ವಶಕ್ತಿ (500 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇವೆಲ್ಲದರ ಜೊತೆಗೆ ಲೀಟರ್‌ಗೆ 20 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಸೆವೆನ್ ಸ್ಪೀಡ್ ಡಿಎಸ್‌ಜಿ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಇದೇ ಸಂದರ್ಭದಲ್ಲಿ ಹೈಬ್ರಿಡ್ ವರ್ಷನ್ ಪಸ್ಸಾಟ್ ಕೂಡಾ ಬಿಡುಗಡೆಯಾಗಲಿದೆ. ಇದು 1.4 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ (102 ಅಶ್ವಶಕ್ತಿ) ಹಾಗೂ ಎಲೆಕ್ಟ್ರಿಕ್ ಮೋಟಾರು ಪಡೆದುಕೊಳ್ಳಲಿದೆ. ಇವೆರಡು ಜತೆಯಾಗಿ 204 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಎಲೆಕ್ಟ್ರಿಕ್ ಮೋಡ್‌ನಲ್ಲಿ 50 ಕೀ.ಮೀ. ವರೆಗೂ ರೇಂಜ್ ನೀಡಲಿದೆ. 2015 ಪಸ್ಸಾಟ್ ವರ್ಷಾಂತ್ಯದಲ್ಲಿ ಯುರೋಪ್ ಮಾರುಕಟ್ಟೆ ಪ್ರವೇಶಿಸಲಿದೆ. ಹಾಗೆಯೇ ಮುಂದಿನ ಸಾಲಿನಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

2015 Volkswagen Passat

English summary
2015 Volkswagen Passat: First Sketches & Details Emerge
Story first published: Friday, May 23, 2014, 16:02 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark