ಬಜೆಟ್ ಎಫೆಕ್ಟ್; ಬ್ರಾಂಡೆಡ್ ಪೆಟ್ರೋಲ್ ದರ ರು. 5 ಅಗ್ಗ

Written By:

ಕಳೆದ ದಿನ ವಿತ್ತ ಸಿಚಿವ ಅರುಣ್ ಜೇಟ್ಲಿ ಮಂಡಿಸಿರುವ 2014-15ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಇಂಧನ ಮೇಲಿನ ಅಬಕಾರಿ ಸುಂಕವನ್ನು ಇಳಿಕೆಗೊಳಿಸಿರುವ ಬೆನ್ನಲ್ಲೇ ಬ್ರಾಂಡೆಡ್ (ಪ್ರೀಮಿಯಂ) ಪೆಟ್ರೋಲ್ ದರಗಳಲ್ಲಿ ಲೀಟರ್‌ಗೆ ಐದು ರು.ಗಳಷ್ಟು ಇಳಿಕೆ ಕಂಡುಬಂದಿದೆ.

ಬ್ರಾಂಡೆಡ್ ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು 7.50 ರು.ಗಳಿಂದ 2.35 ರು.ಗಳಿಗೆ ಇಳಿಕೆಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಬ್ರಾಂಡೆಡ್ ಪೆಟ್ರೋಲ್ ದರಗಳಲ್ಲಿ ಇಳಿಕೆ ಕಂಡುಬಂದಿದೆ.

ಇದುವರೆಗೆ ಸಾಮಾನ್ಯ ಪೆಟ್ರೋಲ್ ಇಂಧನಗಳಿಗೆ ಹೋಲಿಸಿದರೆ ಬ್ರಾಂಡೆಡ್ ಪೆಟ್ರೋಲ್‌ಗಳಿಗೆ ಭಾರಿ ಸುಂಕ ವಿಧಿಸಿದ್ದರಿಂದ ಖರೀದಿಗಾರರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿತ್ತು. ಈ ಹಿನ್ನಲೆಯಲ್ಲಿ ಬ್ರಾಂಡೆಡ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.

ಹಾಗಿದ್ದರೂ ಪ್ರೀಮಿಯಂ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡಬರುವುದಿಲ್ಲ. ದೆಹಲಿಯಲ್ಲಿ ಸದ್ಯ ಬ್ರಾಂಡೆಡ್ ಪೆಟ್ರೋಲ್ ದರ ರು. 83.08 ಹಾಗೂ ಸಾಮಾನ್ಯ ಪೆಟ್ರೋಲ್ ದರ ರು. 73.55ರಷ್ಟಿದೆ.

English summary
Branded petrol price slashed by Rs 5 per litre
Story first published: Friday, July 11, 2014, 12:33 [IST]
Please Wait while comments are loading...

Latest Photos