ಬಜೆಟ್ ಎಫೆಕ್ಟ್; ಕಾರು, ಬೈಕ್ ದರ ಇಳಿಕೆ ಸಾಧ್ಯತೆ

By Nagaraja

ದಾಖಲೆಯ ಒಂಬತ್ತನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿರುವ ವಿತ್ತ ಸಚಿವ ಪಿ. ಚಿದಂಬರಂ, ಮುಂಬರುವ ಲೋಕಸಭಾ ಚುನಾವಣಾ ಗಮನದಲ್ಲಿಟ್ಟುಕೊಂಡು ಜನಪರ ಮಧ್ಯಂತರ ಬಜೆಟ್ ಮಂಡಿಸಲು ಯಶಸ್ವಿಯಾಗಿದ್ದಾರೆ.

ಇದರಂತೆ ವಾಹನೋದ್ಯಮಕ್ಕೆ ಖುಷಿ ತರುವ ಸುದ್ದಿ ಎಂಬಂತೆ ಕಾರು ಹಾಗೂ ದ್ವಿಚಕ್ರ ವಾಹನಗಳ ದರಗಳಲ್ಲಿ ಇಳಿಕೆ ಕಂಡುಬರಲಿದೆ. ಕೇವಲ ಕಾರು, ಬೈಕ್ ಮಾತ್ರವಲ್ಲ. ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಹಾಗೂ ವಾಣಿಜ್ಯ ವಾಹನಗಳ ದರಗಳಲ್ಲೂ ಇಳಿಕೆ ಕಂಡುಬರಲಿದೆ.

budget

ಸಣ್ಣ ಕಾರು ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 12ರಿಂದ 8ಕ್ಕೂ ಅದೇ ರೀತಿ ಎಸ್‌ಯುವಿ ಕಾರುಗಳ ಮೇಲಿನ ಶುಲ್ಕವನ್ನು ಶೇಕಡಾ 30ರಿಂದ 24ಕ್ಕೆ ಇಳಿಕೆ ಮಾಡಲಾಗಿದೆ. ಅದೇ ರೀತಿ ಬೈಕ್ ಸುಂಕವನ್ನು ಶೇಕಡಾ 12ರಿಂದ 8ಕ್ಕೆ ಇಳಿಕೆ ಮಾಡಲಾಗಿದೆ.

ಪ್ರಸ್ತುತ ನೀತಿಯು ಸದ್ಯದಲ್ಲೇ ಚಾಲ್ತಿಗೆ ಬರುವ ನಿರೀಕ್ಷೆಯಿದ್ದು, ಕುಸಿದತ್ತ ಮುಖ ಮಾಡಿರುವ ಕಾರು ಮಾರುಕಟ್ಟೆಗೆ ಉತ್ತೇಜನ ತುಂಬುವ ನಿರೀಕ್ಷೆಯಿದೆ.

Most Read Articles

Kannada
English summary
Budget 2014: Excise duty for small cars Reduced
Story first published: Monday, February 17, 2014, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X