21,000 ಮೈಲುಗಲ್ಲು ತಲುಪಿದ ಷೆವರ್ಲೆ ಎಂಜಾಯ್

By Nagaraja

ತನ್ನ ಅಧೀನತೆಯಲ್ಲಿ 10 ಬ್ರಾಂಡ್‌ಗಳನ್ನು ಹೊಂದಿರುವ ಜನರಲ್ ಮೋಟಾರ್ಸ್ 37ಕ್ಕೂ ಅಧಿಕ ದೇಶಗಳಲ್ಲಿ ಮಾರಾಟ ಜಾಲವನ್ನು ಹೊಂದಿದೆ. ಇವುಗಳಲ್ಲಿ ಜಿಎಂಸಿ, ಕ್ಯಾಡಿಲಕ್, ಒಪೆಲ್, ವಾಕ್ಸ್‌ಹಾಲ್, ಬ್ಯೂಕ್, ಹೋಲ್ಡನ್, ವುಲಿಂಗ್, ಬೌಜನ್, ಜಿಫಂಗ್, ಉಜ್‌ದೇವೂ ಮತ್ತು ಷೆವರ್ಲೆ ಬ್ರಾಂಡ್‌ಗಳು ಪ್ರಮುಖವಾಗಿದೆ.

ಇನ್ನು ಭಾರತದಲ್ಲಿ ಷೆವರ್ಲೆ ಬ್ರಾಂಡ್ ಮಾರಾಟದಲ್ಲಿದ್ದು, ಇತ್ತೀಚಿಗಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣವಾಗಿರುವುದು ಷೆವರ್ಲೆಯ ಬಹು ಬಳಕೆಯ ವಾಹನ (ಎಂಪಿವಿ) ಎಂಜಾಯ್.

Chevrolet Enjoy

2013 ಮೇ ತಿಂಗಳಲ್ಲಿ ಲಾಂಚ್ ಮಾಡಲಾಗಿದ್ದ ಎಂಜಾಯ್, ಒಂದು ವರ್ಷದ ಅವಧಿಯಲ್ಲಿ 21,000ಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟವನ್ನು ತಲುಪಿದೆ. ಅಲ್ಲದೆ ಸಂಸ್ಥೆಯು ಈಗಾಗಲೇ ಷೆವರ್ಲೆ ಆನಂದವನ್ನು ಸಂಭ್ರಮಿಸಲು ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

1,248 ಸಿಸಿ ಡೀಸೆಲ್ ಎಂಜಿನ್ ಹೊಂದಿರುವ ಷೆವರ್ಲೆ ಎಂಜಾಯ್, 74.8 ಪಿಎಸ್ ಪವರ್ (172.5 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಇರಲಿದೆ.

ಹಾಗೆಯೇ ಇದರ 1,399 ಸಿಸಿ ಪೆಟ್ರೋಲ್ ಎಂಜಿನ್ 100.2 ಪಿಎಸ್ ಪವರ್ (131 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಸಹ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ. ಅಂದ ಹಾಗೆ ಷೆವರ್ಲೆ ಎಂಜಾಯ್ ದೆಹಲಿ ಎಕ್ಸ್ ಶೋ ರೂಂ ದರ 5.74 ಲಕ್ಷ ರು.ಗಳಿಂದ 8.13 ಲಕ್ಷ ರು.ಗಳ ವರೆಗಿದೆ.

Most Read Articles

Kannada
English summary
General Motors has ten brands under its wing, which it sells to around 37 countries. The company has brands like GMC, Cadillac, Opel, Vauxhall, Buick, Holden, Wuling, Baojun, Jie Fang, UzDaewoo and Chevrolet. In India it sells the Chevrolet brand of vehicles.
Story first published: Thursday, June 19, 2014, 11:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X