ದಟ್ಸನ್ ಗೊ ಬುಕ್ಕಿಂಗ್ ಆರಂಭ; ಮುಂದಿನ ತಿಂಗಳಲ್ಲಿ ವಿತರಣೆ

Written By:

ಬಹುನಿರೀಕ್ಷಿತ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ವಿತರಣೆ ಕಾರ್ಯವು ಮುಂದಿನ ತಿಂಗಳಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಈಗಾಗಲೇ ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ದಟ್ಸನ್ ಗೊ ಸಣ್ಣ ಕಾರು, ದೇಶದ ವಾಹನೋದ್ಯಮದಲ್ಲಿ ಹೊಸ ಕ್ರಾಂತಿಕಾರಿ ಅಲೆಯೆಬ್ಬಿಸಲಿದೆ ಎಂಬುದು ವಿಶ್ಲೇಷಕರ ಅಭಿಮತವಾಗಿದೆ. ಈ ನಿಟ್ಟಿನಲ್ಲಿ ವಿತರಕರ ಜಾಲ ವೃದ್ಧಿಸುವುದರಲ್ಲಿ ದಟ್ಸನ್ ಮಾತೃಸಂಸ್ಥೆ ನಿಸ್ಸಾನ್ ಮಗ್ನವಾಗಿದೆ.

ಪ್ರಸ್ತುತ ನಿಸ್ಸಾನ್ ಡೀಲರುಶಿಪ್‌ಗಳಲ್ಲಿ ರು. 11,000 ಪಾವತಿಸಿ ನಿಮ್ಮ ದಟ್ಸನ್ ಗೊ ಕಾರಿಗಾಗಿ ಬುಕ್ಕಿಂಗ್ ಮಾಡಬಹುದಾಗಿದೆ. ಈ ಹೊಸ ಕಾರಿಗೆ ಎರಡು ವರ್ಷಗಳ ಗಾರಂಟಿ ಸೌಲಭ್ಯ ಕೂಡಾ ಇರಲಿದೆ. ಮಾರುತಿ ಆಲ್ಟೊ ಹಾಗೂ ಹ್ಯುಂಡೈ ಇಯಾನ್ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿರುವ ಗೊ ಹ್ಯಾಚ್‌ಬ್ಯಾಕ್ ಕಾರಿನ ದರ ನಾಲ್ಕು ಲಕ್ಷ ರು.ಗಿಂತಲೂ ಕೆಳಗಿರಲಿದೆ. ಇದು ತ್ರಿ ಸಿಲಿಂಡರ್ 1.2 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 68 ಪಿಎಸ್ ಪವರ್‌ನಿಂದ (104 ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಕೂಡಾ ಹೊಂದಿರಲಿದೆ.

Datsun GO

ಸಂಸ್ಥೆಯ ಪ್ರಕಾರ ದಟ್ಸನ್ ಗೊ ಪ್ರತಿ ಲೀಟರ್‌ಗೆ 20.6 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ನೀಲಿ, ಬಿಳಿ ಹಾಗೂ ಬೂದುಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು 3785 ಎಂಎಂ ಉದ್ದ, 1635 ಎಂಎಂ ಅಗಲ, 1485 ಎಂಎಂ ಎತ್ತರ ಹಾಗೂ 2450 ಎಂಎಂ ವೀಲ್ ಬೇಸ್ ಹೊಂದಿರಲಿದೆ.

ತನ್ನ ನಿಕಟ ಪ್ರತಿಸ್ಪರ್ಧಿಗಳನ್ನು ಪರಿಗಣಿಸಿದರೆ ದಟ್ಸನ್ ಗೊ ಹೆಚ್ಚು ವೀಲ್ ಬೇಸ್ ಹಾಗೆಯೇ ಅಧಿಕ ಲೆಗ್ ರೂಂ ಕೂಡಾ ಹೊಂದಿರಲಿದೆ. ಅಷ್ಟೇ ಅಲ್ಲದೆ ಹಿಂದುಗಡೆ ಮೂರು ಪ್ರಯಾಣಿಕರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ನಿಸ್ಸಾನ್‌ನ ಚೆನ್ನೈ ಓರಗಡಂ ಘಟಕದಲ್ಲಿ ಉತ್ಪಾದನೆಯಾಗಲಿರುವ ದಟ್ಸನ್ ಗೊ ಮುಂದಿನ ತಿಂಗಳಿಂದ ವಿತರಣೆ ಕಾರ್ಯ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

English summary
Nissan's budget brand Datsun has opened bookings of the GO hatchback. The Maruti Alto and Hyundai Eon competitor can be booked by paying Rs 11,000. Interested buyers can reserve a Datsun GO hatchback at any Nissan dealership. The car is available with a two-year unlimited warranty.
Story first published: Monday, February 17, 2014, 15:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark