ಫೋರ್ ವೀಲ್ ಡ್ರೈವ್‌ನಲ್ಲಿ ಫೋರ್ಸ್ ಒನ್ ಎಸ್‌ಯುವಿ

By Nagaraja

ಪುಣೆ ತಲಹದಿಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಸ್ ಒನ್, 2011ನೇ ಸಾಲಿನಲ್ಲಿ ಅತ್ಯಂತ ಸ್ಮರ್ಧಾತ್ಮಕ ಎಸ್‌ಯುವಿ ಸೆಗ್ಮೆಂಟ್‌ಗೆ ಮೊದಲ ಬಾರಿಗೆ ಕಾಲಿರಿಸಿತ್ತು. ಬಾಲಿವುಡ್ ಬಾದ್‌ಷಾ ಅಮಿತಾಬ್ ಬಚ್ಚನ್ ಸಾನಿಧ್ಯದಲ್ಲಿ ಈ ಟು ವೀಲ್ ಡ್ರೈವ್ ವ್ಯವಸ್ಥೆಯನ್ನು ಹೊಂದಿರುವ ಕಾರು ರಸ್ತೆ ಪ್ರವೇಶಿಸಿತ್ತು.

ಇದೀಗ ಫೋರ್ಸ್ ಒನ್ ಸಂಸ್ಥೆಯು ನೂತನ 4x4 ವೀಲ್ ಡ್ರೈವ್ ಸಿಸ್ಟಂ ಲಾಂಚ್ ಮಾಡಿದೆ. ಇದರ ಪ್ರಾರಂಭಿಕ ದರ 13.98 ಲಕ್ಷ ರು.ಗಳಾಗಿವೆ.

Force One

ಫೋರ್ಸ್ ಒನ್ ಎಲ್‌ಎಕ್ಸ್ 4x4 ಟಾಪ್ ಎಂಡ್ ವೆರಿಯಂಟ್ 2.2 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಡೈಮ್ಲರ್ ಪರವಾನಗಿಯಲ್ಲಿ ತಯಾರಿಸಲಾಗಿರುವ ಈ ಎಂಜಿನ್ 141 ಪಿಎಸ್ ಪವರ್ (321 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ಭಾರತ್ ಸ್ಟೇಜ್ IV ಎಂಜಿನ್ ಮಾನದಂಡಗಳನ್ನು ಅನುಸರಿಸಿರುವ ಫೋರ್ಸ್ ಎಂಜಿನ್, ಕಡಿಮೆ ಕಾರ್ಬನ್ ಡೈ ಓಕ್ಸೈಡ್ ಹೊರಸೂಸಲಿದೆ. ಹೆಚ್ಚು ಸುರಕ್ಷಿತ, ಆರಾಮದಾಯಕ ಹಾಗೂ ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರುವ ಎಲ್‌ಎಕ್ಸ್ ವೆರಿಯಂಟ್, ಇಕ್ಸ್ ಹಾಗೂ ಎಸ್‌ಎಕ್ಸ್ ವೆರಿಯಂಟ್ ನಡುವೆ ಗುರುತಿಸಿಕೊಳ್ಳಲಿದೆ.

ಇದು 16 ಇಂಚಿನ ಅಲಾಯ್ ವೀಲ್, ಒಆರ್‌ವಿಎಂ, ಕ್ರೋಮ್ ರೇಡಿಯೇಟರ್ ಗ್ರೀಲ್, ಪ್ರೊಜೆಕ್ಟರ್ ಹೆಡ್ ಲೈಟ್, ಡೈಟೈಮ್ ಹೆಡ್‌ಲೈಟ್, ರೂಫ್ ಸ್ಪಾಯ್ಲರ್ ಹಾಗೂ ಫೋರ್ಸ್ ಒನ್ ಲೊಗೊ ಪಡೆಯಲಿದೆ. ಈ ಏಳು ಸೀಟಿನ ಎಲ್‌ಎಕ್ಸ್ ವೆರಿಯಂಟ್ ಹೆಚ್ಚು ಸ್ಥಳಾವಕಾಶವನ್ನು ಪಡೆದುಕೊಂಡಿದೆ. ಹಾಗೆಯೇ ಪ್ರೀಮಿಯಂ ಗುಣ್ಣಮಟ್ಟದ ಲೆಥರ್, ವುಡನ್ ಡ್ಯಾಶ್‌ಬೋರ್ಡ್‌ ಫಿನಿಶ್, ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್ ಮತ್ತು ಕ್ರೋಮ್ ಸ್ಪರ್ಶ ಪಡೆಯಲಿದೆ.

Most Read Articles

Kannada
English summary
While Force Motors brought out the new Force One SUV in July last year, the top-of-the-line, Now released Force One 4x4 LX variant in the market.
Story first published: Monday, June 2, 2014, 18:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X