ಫೋರ್ಡ್ ಇಕೊಸ್ಪೋರ್ಟ್‌ ಕಾಯುವಿಕೆ ಅವಧಿ ಕಡಿತ

By Nagaraja

ಮಾರುಕಟ್ಟೆಯ ಇತ್ತೀಚೆಗಿನ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಕಾರುಗಳ ಸ್ಥಾನಗಳಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಇದರಂತೆ ಬಹುತೇಕರು ತಮ್ಮ ನೆಚ್ಚಿನ ಕಾರಿಗಾಗಿ ಬುಕ್ಕಿಂಗ್ ಸಲ್ಲಿಸಿದ್ದರು. ಆದರೆ ಆರು ತಿಂಗಳುಗಳೇ ಕಳೆದರೂ ತಮ್ಮ ಕನಸಿನ ಕಾರು ಕೈ ಸೇರುತ್ತಿರಲಿಲ್ಲ. ಇನ್ನು ಕೆಲವು ಬಾರಿ ನಿರ್ದಿಷ್ಟ ವೆರಿಯಂಟ್‌ಗಳ ಬುಕ್ಕಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಿರುವಂತಹ ದುಸ್ಥಿತಿ ಎದುರಾಗಿತ್ತು.

Ford ecosport

ಈ ಎಲ್ಲದರಿಂದ ಗ್ರಾಹಕರು ತುಂಬಾ ನೊಂದಿದ್ದರು. ಆದರೆ ಅಮೆರಿಕ ಮೂಲಕ ಫೋರ್ಡ್ ಸಂಸ್ಥೆಯು ಗ್ರಾಹಕರ ವೇದನೆ ಅರಿತುಕೊಳ್ಳುವ ಪ್ರಯತ್ನ ಮಾಡಿದರೂ ಮಿತಿ ಮೀರಿದ ಬೇಡಿಕೆಯಿಂದಾಗಿ ಹಿನ್ನಡೆ ಅನುಭವಿಸಬೇಕಾಗಿ ಬಂದಿತ್ತು.

ತನ್ನ ನಿರಂತರ ಪ್ರಯತ್ನವನ್ನು ಮುಂದುವರಿಸಿರುವ ಫೋರ್ಡ್ ಸಂಸ್ಥೆಯು ಮಗದೊಮ್ಮೆ ಕಾಯುವಿಕೆ ಅವಧಿ ಕಡಿತಗೊಳಿಸುವ ಯತ್ನದಲ್ಲಿದೆ. ಇದರಂತೆ ತನ್ನ ನಿರ್ಮಾಣ ಘಟಕದಲ್ಲಿ ಮೂರನೇ ಶಿಫ್ಟ್ ಆರಂಭಿಸಲು ನಿರ್ಧರಿಸಿದೆ. ಇದು ಕಾಯುವಿಕೆ ಅವಧಿಯಲ್ಲಿ ಗಣನೀಯ ಕುಸಿತಕ್ಕೆ ಕಾರಣವಾಗುವ ನಿರೀಕ್ಷೆಯನ್ನು ಹೊಂದಿದೆ.

ಅಂದ ಹಾಗೆ ಜನಪ್ರಿಯ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌‍ಯುವಿ ಕಾರು ಸರಿ ಸುಮಾರು ಒಂದು ವರ್ಷದ ಹಿಂದೆ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಬಿಡುಗಡೆಗೊಂಡಿತ್ತು. ಇದರ 1.5 ಲೀಟರ್ ಡೀಸೆಲ್ ಎಂಜಿನ್ 89.7 ಅಶ್ವಶಕ್ತಿ (204 ಗರಿಷ್ಠ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಪ್ರತಿ ಲೀಟರ್‌ಗೆ 22.7 ಕೀ.ಮೀ. ಮೈಲೇಜ್ ನೀಡಲಿದೆ.

ಅದೇ ಹೊತ್ತಿಗೆ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಫೋರ್ಡ್ ಒದಗಿಸುತ್ತಿದೆ. ಇದರ 1.0 ಲೀಟರ್ ಪೆಟ್ರೋಲ್ ಎಂಜಿನ್ 123 ಅಶ್ವಶಕ್ತಿ (170 ಎನ್‌ಎಂ ಟಾರ್ಕ್) ಅಂತೆಯೇ 1.5 ಲೀಟರ್ ಪೆಟ್ರೋಲ್ ಎಂಜಿನ್ 110 ಅಶ್ವಶಕ್ತಿ (140 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಇವೆರಡು ಅನುಕ್ರಮವಾಗಿ ಪ್ರತಿ ಲೀಟರ್‌ಗೆ 18.9 ಹಾಗೂ 16.15 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ರೆನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊಗಳಂತಹ ಮಾದರಿಗಳಿಗೆ ಪೈಪೋಟಿ ಒಡ್ಡುತ್ತಿರುವ ಇಕೊಸ್ಪೋರ್ಟ್ ಸ್ಮರ್ಧಾತ್ಮಕ 5.59 ಲಕ್ಷ ರು.ಗಳ ದರಗಳಲ್ಲಿ ಬಿಡುಗಡೆಗೊಂಡಿತ್ತು. ಇದರ ಸ್ಮರ್ದಾತ್ಮಕ ದರ, ಆಕರ್ಷಕ ವಿನ್ಯಾಸ, ವೈಶಿಷ್ಟ್ಯ ಮತ್ತು ಎಂಜಿನ್ ಮಾನದಂಡಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ಕಾರಣವಾಗಿತ್ತು.

Most Read Articles

Kannada
English summary
The EcoSport by Ford is the most sought after vehicle among their offerings. The American based manufacturer has not been able to handle the booking and delivery ratio. There is a long waiting period before an individual can get his vehicle by Ford.
Story first published: Monday, August 11, 2014, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X