ಹಬ್ಬದ ಆವೃತ್ತಿಗೆ ತಾಜಾ ಲುಕ್ ಪಡೆದ ಫಿಗೊ ಎಂಟ್ರಿ

Written By:

ಮುಂಬರುವ ಹಬ್ಬದ ಆವೃತ್ತಿಗೆ ಇನ್ನಷ್ಟು ಮೆರಗು ನೀಡುತ್ತಿರುವ ಅಮೆರಿಕ ಮೂಲಕ ಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಡ್ ಇಂಡಿಯಾ ಸಂಸ್ಥೆಯು ದೇಶದ ಮಾರುಕಟ್ಟೆಗೆ ತಾಜಾ ವಿನ್ಯಾಸದ ಫಿಗೊ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿದೆ.

ನೂತನ ಫಿಗೊ ಹೊರಗಡೆ 14 ಇಂಚುಗಳ ಅಲಾಯ್ ವೀಲ್, ಫಾಗ್ ಲ್ಯಾಂಪ್ ಬಿಜಲ್, ರಿಯರ್ ಬಂಪರ್, ಕ್ರೋಮ್ ಸಿಗ್ನೇಚರ್ ಫೆಂಡರ್ ಬ್ಯಾಡ್ಜ್ ಮತ್ತು ಪವರ್ ಮಿರರ್‌ನಲ್ಲಿ ಟರ್ನ್ ಇಂಡಿಕೇಟರ್ ಮುಂತಾದ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಇದು ಕಾರಿಗೆ ಇನ್ನಷ್ಟು ಪ್ರೀಮಿಯಂ ಲುಕ್ ನೀಡಲಿದೆ.

ಮುಖ್ಯಾಂಶಗಳು

ಪರಿಷ್ಕೃತ ವಿನ್ಯಾಸ,

ತಾಜಾ ಕ್ರೀಡಾ ಹೊರಮೈ,

ನ್ಯೂ ಇಂಟಿರಿಯರ್,

ಸೈಬರ್ ಬ್ಲೂ ಟ್ರಿಮ್

2014 ford figo

ಕಾರಿನೊಳಗೂ ಫೋರ್ಡ್ ರೋಮಾಂಚಕ ವಿಶಿಷ್ಟತೆಗಳನ್ನು ಆಳವಡಿಸಿದ್ದು, ಇದರಲ್ಲಿ ವಿಶೇಷ ಸೈಬರ್ ಬ್ಲೂ ಟ್ರಿಮ್ ಪ್ರಜ್ವಲಿಸುವ ಡ್ಯುಯಲ್ ಟೋನ್ ಸೀಟ್ ಫ್ಯಾಬ್ರಿಕ್ಸ್, ಸೆಂಟರ್ ಸ್ಟಾಕ್ ಮತ್ತು ಕೈನಾಟಿಕ್ ಬ್ಲೂ ವೆರಿಯಂಟ್‌ನಲ್ಲಿ ಡೋಲ್ ಪುಲ್ ಹ್ಯಾಂಡಲ್ ಸೇರಿದೆ.

ಒಟ್ಟಿನಲ್ಲಿ ಪರಿಷ್ಕೃತ ಫೋರ್ಡ್ ಉತ್ತಮ ನಿರ್ವಹಣೆ ನೀಡಲಿದ್ದು, ಸ್ಮಾರ್ಟ್ ತಂತ್ರಜ್ಞಾನ ಮತ್ತು ಇಂಧನ ಕ್ಷಮತೆಯ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ. ಒಟ್ಟಿನಲ್ಲಿ ಗ್ರಾಹಕರಿಗೆ ಹಣಕ್ಕೆ ತಕ್ಕ ಮೌಲ್ಯ ನೀಡಲಿದೆ.

ಅಂದ ಹಾಗೆ ಪರಿಷ್ಕೃತ ಫೋರ್ಡ್ ಫಿಗೊ ಪೆಟ್ರೋಲ್ ವೆರಿಯಂಟ್ ಪ್ರಾರಂಭಿಕ ದರ 3.87 ಲಕ್ಷ ರು. ಅಂತೆಯೇ ಡೀಸೆಲ್ ಪ್ರಾರಂಭಿಕ ಬೆಲೆ 4.83 ಲಕ್ಷ ರು.ಗಳಾಗಿರಲಿದೆ (ದೆಹಲಿ ಎಕ್ಸ್ ಶೋ ರೂ). ಅಂತೆಯೇ ಎರಡು ವರ್ಷಗಳ ಅಥವಾ ಒಂದು ಲಕ್ಷ ಕೀ.ಮೀ. ವಾರಂಟಿ ಸೌಲಭ್ಯಗಳು ಲಭ್ಯವಾಗಲಿದೆ. ಇದೇ ಸಂದರ್ಭದಲ್ಲಿ ಹ್ಯಾಪಿ ಪಾಕೆಟ್ ಸರ್ವೀಸ್ ಸೇವೆಯನ್ನು (ರು. 2199) ಫೋರ್ಡ್ ಆರಂಭಿಸಿರುತ್ತದೆ.

ಬಣ್ಣಗಳು

ಕೈನಾಟಿಕ್ ಬ್ಲೂ, ಮಾರ್ಸ್ ರೆಡ್, ಡೈಮಂಡ್ ವೈಟ್, ಮೂನ್‌ಡಸ್ಟ್ ಸಿಲ್ವರ್, ಚಿಲ್ ಮೆಟ್ಯಾಲಿಕ್, ಪ್ಯಾಂಥರ್ ಬ್ಲ್ಯಾಕ್, ಸ್ಪೋಕ್ ಗ್ರೇ ಮತ್ತು ಪಪ್ರಿಕಾ ರೆಡ್.

English summary
Ford India Introduce​s Figo with a Refreshing New Look Ahead of the Festive Season

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark