Just In
- 9 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
- 12 hrs ago
ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
Don't Miss!
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ವಿಫ್ಟ್ ಕಾರಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿರುವ ಫೋರ್ಡ್ ಫಿಗೊ ಫೇಸ್‍ಲಿಫ್ಟ್
ಫೋರ್ಡ್ ಇಂಡಿಯಾ ಸಂಸ್ಥೆಯು ತಮ್ಮ ಜನಪ್ರಿಯ ಫಿಗೊ ಹ್ಯಾಚ್‍ಬ್ಯಾಕ್ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಇದೇ ತಿಂಗಳ 15ರಂದು ಬಿಡುಗಡೆಗೊಳಿಸಲಿದ್ದು, ಈ ಕಾರಿನ ಖರೀದಿಗಾಗಿ ಡೀಲರ್‍ಗಳು ಬುಕ್ಕಿಂಗ್ ಅನ್ನು ಸಹ ಸ್ವೀಕರಿಸುತ್ತಿದ್ದಾರೆ. 2015ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡ ಫೋರ್ಡ್ ಫಿಗೊ ಕಾರುಗಳು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳಿಗೆ ಟಕ್ಕರ್ ನೀಡಲು ಸಿದ್ಧವಾಗಿದೆ.

ಇನ್ನು ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಬದಲಾವಣೆಗೆ ಸಂಬಂಧಿಸಿದಂತೆ ಫಿಗೊ ಮಾದರಿಯು ದೊಡ್ಡದಾದ ಹೆಡ್‌ಲ್ಯಾಂಪ್‌ಗಳು, ಹೊಸ ನಮೂನೆ ಗ್ರಿಲ್, ಹೊಸ ಬಂಪರ್ ವಿನ್ಯಾಸ, ಫಾಗ್ ಲ್ಯಾಂಪ್ಸ್ ಮತ್ತು 15 ಇಂಚಿನ ಅಲಾಯ್ ವ್ಹೀಲ್ಸ್ ಗಳನ್ನು ಅಳವಡಿಸಲಾಗಿದ್ದು, ಈ ಉಪಕರಣಗಳನ್ನು ಕಳೆದ ವರ್ಷ ಫೋರ್ಡ್ ಸಂಸ್ಥೆಯು ಬಿಡುಗಡೆಗೊಳಿಸಿದ ಆಸ್‍ಫೈರ್ ಫೇಸ್‍ಲಿಫ್ಟ್ ಸೆಡಾನ್ ಕಾರಿನಲ್ಲಿ ಕಾಣಬಹುದಾಗಿದೆ.
|
ಯುವ ಸಮುದಾಯವನ್ನು ಸೆಳೆಯಲು ಹೊಸ ಪ್ಲಾನ್
ಫೋರ್ಡ್ ಇಂಡಿಯಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಫಿಗೋ ಫೇಸ್‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲು, ಟಿಂಡರ್ ಡೇಟಿಂಗ್ ಆಪ್‍ನಲ್ಲಿ ಜಾಹಿರಾತನ್ನು ನೀಡಲಿದೆ. ಇದರಿಂದ ಹಲವಾರು ಯುವ ಸಮುದಾಯವು ಬಳಸುವ ಈ ಆಪ್ ಅನ್ನು ಬಳಸಿಕೊಂಡು, ಅವರನ್ನು ಸೆಳೆಯುವ ತವಕದಲ್ಲಿ ಈ ಪ್ಲಾನ್ ಮಾಡಲಾಗಿದೆ.
ಕಾರಿನ ಒಳ ವಿನ್ಯಾಸ
ಫಿಗೊ ಫೇಸ್‌ಲಿಫ್ಟ್ ಮಾದರಿಯು 6.5 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದ್ದು, ಇದು ಇತ್ತೀಚೆಗೆ ಅನಾವರಣಗೊಂಡ ಫ್ರೀ ಸ್ಟೈಲ್ ಕ್ರಾಸ್ ಓವರ್‌ನಲ್ಲೂ ಅವಳವಡಿಸಲಾಗಿದೆ. ಇದರ ಜೊತೆಗೆ ಫೋರ್ಡ್ ಸಿಂಕ್ 3 ತಂತ್ರಜ್ಞಾನ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸಂಪರ್ಕದ ವೈಶಿಷ್ಟ್ಯತೆಯನ್ನು ಪಡೆದಿದೆ.

ಎಂಜಿನ್ ಸಾಮರ್ಥ್ಯ
ಬಿಡುಗಡೆಗೊಳ್ಳಲಿರುವ ಹೊಸ ಫೋರ್ಡ್ ಫಿಗೊ ಫೇಸ್‍ಲಿಫ್ಟ್ ಕಾರುಗಳು 1.2 ಲೀಟರ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಹಾಗು 1.5 ಲೀಟರ್ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿರ್ರುಮ್ 1.2 ಲೀಟರ್ ಡ್ರಾಗನ್ ಸಿರೀಸ್ ಪೆಟ್ರೋಲ್ ಎಂಜಿನ್ 95ಬಿಹೆಚ್‍ಪಿ ಮತ್ತು 120ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂದಿದೆ.
ಇನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ 121ಬಿಹೆಚ್‍ಪಿ ಮತ್ತು 150ಎನ್ಎಮ್ ಟಾರ್ಕ್ ಅನ್ನು ಉತ್ಪದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಹಾಗೆಯೆ 1.5 ಲೀಟರ್ ಡೀಸೆಲ್ ಎಂಜಿನ್ 99ಬಿಹೆಚ್‍ಪಿ ಮತ್ತು 215ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಫೋರ್ಡ್ ಫಿಗೊ ಕಾರಿನ 1.2 ಲೀಟರ್ ಪೆಟ್ರೋಲ್ ಹಾಗು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಿದರೆ ಇನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮ್ಯಾನುವಲ್ ಹಾಗು ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.
ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ಯುಯಲ್ ಏರ್‍ಭ್ಯಾಗ್ಸ್, ಎಬಿಎಸ್, ಇಬಿಡಿ ಮತ್ತು ಐಎಸ್‍ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಕಾರಿನ ಟಾಪ್ ವೇರಿಯಂಟ್‍ಗಳಲ್ಲಿ ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್ಸ್, ರೈನ್ ಸೆಂಸಿಂಗ್ ವೈಪರ್ಸ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍ಗಳನ್ನು ಒದಗಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಫೋರ್ಡ್ ಸಂಸ್ಥೆಯು ತಮ್ಮ ಅಪ್ಡೇಟೆಡ್ ಫಿಗೊ ಫೇಸ್‍ಲಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ 2019ರ ಮಾರ್ಚ್ 15ರಂದು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 5.50 ಲಕ್ಷದ ಪ್ರಾರಂಭಿಕ ಬಲೆಯನ್ನು ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಒಮ್ಮೆ ಮಾರುಕಟ್ಟೆಗೆ ಈ ಕಾರು ಲಗ್ಗೆಯಿಟ್ಟಲ್ಲಿ ಮಾರುತಿ ಸ್ವಿಫ್ಟ್, ಹ್ಯುಂಡೈ ಗ್ರ್ಯಾಂಡ್ ಐ10 ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.