2015ರಲ್ಲಿ ಹೊಸ ಫೋರ್ಡ್ ಫಿಗೊ ಭಾರತ ಪ್ರವೇಶ

Written By:

ಈಗಾಗಲೇ ಜಾಗತಿಕ ಅನಾವರಣಗೊಂಡಿರುವ ಫೋರ್ಡ್ ಫಿಗೊ ಮುಂದಿನ ವರ್ಷದಲ್ಲಷ್ಟೇ ಭಾರತ ಪ್ರವೇಶ ಪಡೆಯಲಿದೆ. ಇದಕ್ಕೂ ಪರಿಷ್ಕೃತ ಫಿಗೊ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡುವ ಕುರಿತಂತೆ ಮಾಹಿತಿಗಳು ಬಂದಿದ್ದವು.

ಇದೇ ಸಂದರ್ಭದಲ್ಲಿ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ಫಿಗೊ ಕೆಎ ಹ್ಯಾಚ್‌ಬ್ಯಾಕ್ ಕಾರನ್ನು ಹಲವಾರು ಮಾರುಕಟ್ಟೆಗೆ ಪರಿಚಯಿಸಿದೆ.

To Follow DriveSpark On Facebook, Click The Like Button

ಬಲ್ಲ ಮೂಲಗಳ ಪ್ರಕಾರ ಫೋರ್ಡ್ ಫಿಗೊ ಪರಿಷ್ಕೃತ ಆವೃತ್ತಿ ಬ್ರೆಜಿಲ್ ಮಾರುಕಟ್ಟೆಯನ್ನು ತಲುಪಿದೆ. ಬ್ರೆಜಿಲ್‌ನಲ್ಲಿ ಕೆಎ ಎಂದರಿಯಲ್ಪಡುವ ಈ ಹ್ಯಾಚ್‌ಬ್ಯಾಕ್ ಕಾರು ಎಸ್‌ಇ ಮತ್ತು ಎಸ್‌ಇಎಲ್‌ಗಳೆಂಬ ಎರಡು ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಫಿಗೊ ಮಾದರಿಗೆ ಬದಲಿಯಾಗಲಿರುವ ಹೊಸ ಕಾರು ಭಾರತಕ್ಕೆ 2015 ವರ್ಷಾರಂಭದಲ್ಲಿ ಪರಿಚಯವಾಗುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಫಿಗೊ ಸೆಡಾನ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

Ford figo

ಅಂದ ಹಾಗೆ 2014 ಕೆಎ, 1.0 ಲೀಟರ್ 3 ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 85 ಅಶ್ವಶಕ್ತಿ (107 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಇರಲಿದೆ. ಹಾಗಿದ್ದರೂ ಭಾರತ ವೆರಿಯಂಟ್ ಫಿಗೊದಲ್ಲಿ ಕಾಸ್ಮೆಟಿಕ್ ಬದಲಾವಣೆ ಮಾತ್ರ ನಿರೀಕ್ಷಿಸಲಾಗುತ್ತದೆ.

2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿದ್ದ ಫಿಗೊದಿಂದ ಹಲವಾರು ವಿನ್ಯಾಸ ಘಟಕಗಳನ್ನು ಹೊಸ ಮಾದರಿಯಲ್ಲಿ ಆಳವಡಿಸಲಾಗಿದೆ. ಅಲ್ಲದೆ ಬ್ರೆಜಿಲ್ ಮಾದರಿಗೆ ಹೋಲಿಸಿದರೆ ಭಾರತ ಆವೃತ್ತಿಯು ಹೆಚ್ಚು ಕ್ರೋಮ್ ಸ್ಪರ್ಶ ಪಡೆಯಲಿದೆ.

ಇನ್ನು 2015 ಫೋರ್ಡ್ ಫಿಗೊ ಭಾರತದಲ್ಲಿ ಬಿಡುಗಡೆಯಾದ ಬೆನ್ನಲ್ಲೇ, ಫಿಯೆಟ್ ಪುಂಟೊ ಇವೊ, ಫೋಕ್ಸ್‌ವ್ಯಾಗನ್ ಪೊಲೊ, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹೋಂಡಾ ಜಾಝ್ ಸ್ಪರ್ಧೆಯನ್ನು ಎದುರಿಸಲಿದೆ. ಅಲ್ಲದೆ ಭಾರತ ಮಾದರಿಯು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಎಸ್‌ಸಿ ಮತ್ತು ಇನ್ನಿತರ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯಲಿದೆ.

Read in English: Ford Launches Its New Figo!
English summary
Ford had earlier in the year revealed their plans of launching a refreshed version of its Figo hatchback. The American based manufacturer had also showcased its Figo KA hatchback in several markets.
Story first published: Monday, August 18, 2014, 7:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark