ಮೋಜು ಹಾಗೂ ಆನಂದದಾಯಕ ಹೆದ್ದಾರಿ ನಿರ್ಮಾಣಕ್ಕೆ ಮೋದಿ ಆದ್ಯತೆ

Written By:

ದೇಶದ ಹೆದ್ದಾರಿಗಳು ಮೋಜು ಹಾಗೂ ಆನಂದದಾಯಕವಾಗಿ ಮಾರ್ಪಾಡುಗೊಳ್ಳಬೇಕಾದ ಅಗತ್ಯವಿದೆ ಎಂದು ಜಪಾನ್ ಪ್ರವಾಸದಲ್ಲಿರುವ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖವಾಗಿಯೂ ದೂರ ಪ್ರಯಾಣ ಕೈಗೊಳ್ಳುವ ಯಾತ್ರಿಕರ ಸುಗಮ ಸಂಚಾರದ ಗಮನಲ್ಲಿಟ್ಟುಕೊಂಡು ಮೋದಿ ಇಂತಹದೊಂದು ಅಭಿಪ್ರಾಯ ಮಂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ರಸ್ತೆಬದಿಯ ಸೌಲಭ್ಯಗಳನ್ನು ಒದಗಿಸುವಂತೆಯೇ ಹೈವೇ ಅಧಿಕಾರಿಗಳಿಗೆ ಪ್ರಧಾನ ಮಂತ್ರಿ ಮೋದಿ ಸೂಚನೆ ನೀಡಿದ್ದಾರೆ.

narendra modi

ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿಗೆ ತಯಾರಾಗದ ಮೋದಿ ದೇಶದ ಹೆದ್ದಾರಿಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದ್ದಾರೆ. ಅಲ್ಲದೆ ಗುಣಮಟ್ಟದ ತಂಗುದಾಣ, ಭೋಜನಾಲಯ ಮತ್ತು ದಣಿವು ರಹಿತ ಪಯಣಕ್ಕಾಗಿ ಹೆಚ್ಚಿನ ಆದ್ಯತೆ ಕೊಡುವಂತೆ ತಿಳಿಸಿದ್ದಾರೆ.

ಏತನ್ಮಧ್ಯೆ ಹೆದ್ದಾರಿ ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದಂತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿರುವುದನ್ನು ನೀವಿಲ್ಲಿ ಗಮನಿಸಬಹುದಾಗಿದೆ. ಇದು ದೇಶದ ಒಟ್ಟಾರೆ ಜಿಡಿಪಿ ವೃದ್ಧಿಗೆ ನೆರವಾಗಲಿದೆ.

ಪ್ರಸಕ್ತ ಸಾಲಿನಲ್ಲಿ 6,5000 ರಸ್ತೆ ನಿರ್ಮಾಣ ಗುರಿಯನ್ನು ಹೆದ್ದಾರಿ ಸಚಿವಾಲಯವು ಹೊಂದಿದೆ. ಈ ಮೂಲಕ 500 ಕೋಟಿ ರು.ಗಿಂತಲೂ ಹೆಚ್ಚಿನ ಹೂಡಿಕಾ ಯೋಜನೆಗೆ ಅನುಮೋದನೆ ನೀಡಲಾಗುವುದು.

English summary
Indian Prime Minister Narendra Modi has announced that the Indian highways need to be more fun and pleasurable to drive on for those who drive long distances. He has asked the highway officials to provide more roadside facilities.
Story first published: Monday, September 1, 2014, 14:31 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark