ಹೋಂಡಾ ಅಮೇಜ್ ಅಮೇಜಿಂಗ್ ಇಂಡಿಯಾ ಪಯಣ ಆರಂಭ

Written By:

ಕಳೆದ ದಿನವಷ್ಟೇ ಯಮಹಾ 'ಮಿಷನ್ 10,000 ಕೀ.ಮೀ.' ಬೈಕ್ ಸವಾರಿಯ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೆವು [ಇಲ್ಲಿದೆ ಓದಿ]. ಇದೀಗ ಮಗದೊಂದು ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ತನ್ನ 'ಲಾಂಗೆಸ್ಟ್ ಡ್ರೈವ್ ಥ್ರೂ ಅಮೇಜಿಂಗ್ ಇಂಡಿಯಾ' ಪಯಣಕ್ಕೆ ಚಾಲನೆ ನೀಡಿದೆ.

ದೇಶದ 250ರಷ್ಟು ನಗರಗಳನ್ನು ಸುತ್ತಾಡಲಿರುವ ಹೋಂಡಾ ಅಮೇಜಿಂಗ್ ಇಂಡಿಯಾ ಪಯಣವು ಒಟ್ಟು 23,000 ಕೀ.ಮೀ.ಗಳನ್ನು ಕ್ರಮಿಸಲಿದೆ. ಜೋಧಪುರದಿಂದ ಆರಂಭವಾಗಿರುವ ಈ ಅಮೇಜ್ ಪಯಣವು ಗ್ರೇಟರ್ ನೋಯ್ಡಾದಲ್ಲಿ ಕೊನೆಗೊಳ್ಳಲಿದೆ. ದೇಶದಲ್ಲಿ ಹೋಂಡಾ ಯಶಸ್ಸನ್ನು ಆಚರಿಸಿಕೊಳ್ಳಲು ಇದನ್ನು ಹಮ್ಮಿಕೊಳ್ಳಲಾಗಿದೆ.

amaze

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಮಾರ್ಕೆಟಿಂಗ್ ಮತ್ತು ಸೇಲ್ಸ್ ಹಿರಿಯ ಉಪಾಧ್ಯಕ್ಷರಾಗಿರುವ ಜ್ಞಾನೇಶ್ವರ ಸೆನ್, "ಭಾರತ ಮಾರುಕಟ್ಟೆಯಲ್ಲಿ ಹೋಂಡಾ ಅಮೇಜ್ ಅಮೋಘ ಯಶಸ್ಸು ಸಾಧfಸಿದ್ದು, ಗ್ರಾಹಕರ ಬೇಡಿಕೆಗಳನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೇವೆ"ಎಂದಿದ್ದಾರೆ.

ಹೋಂಡಾದ 'ಅಮೇಜಿಂಗ್ಲಿ ಇಂಡಿಯನ್' ಅಭಿಯಾನದ ಅಂಗವಾಗಿ 'ಲಾಂಗೆಸ್ಟ್ ಡ್ರೈವ್ ಥ್ರೂ ಅಮೇಜಿಂಕ್ ಇಂಡಿಯಾ' ಪಯಣ ಹಮ್ಮಿಕೊಳ್ಳಲಾಗುತ್ತದೆ. ಪ್ರಸ್ತುತ ಪ್ರಯಾಣವು ವಿವಿಧ ಭೂಪ್ರದೇಶಗಳಾದ ಪರ್ವತ, ಸಮುದ್ರ ತೀರ ಪ್ರದೇಶ, ಭೂತಲ ಮತ್ತು ಬಿಡುವಿಲ್ಲದ ಟ್ರಾಫಿಕ್ ಪ್ರದೇಶಗಳನ್ನು ಒಳಗೊಂಡಿರಲಿದೆ.

ವರ್ಷದ ಕಾರು ಮತ್ತು ವರ್ಷದ ಕಾಂಪಾಕ್ಟ್ ಸೆಡಾನ್ ಕಾರುಗಳಂತಹ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಹೋಂಡಾ ಅಮೇಜ್ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಿದೆ. ಇದರ ಪೆಟ್ರೋಲ್ ವೆರಿಯಂಟ್ ಪ್ರಾರಂಭಿಕ ದರ 5 ಲಕ್ಷ ಅಂತೆಯೇ ಡೀಸೆಲ್ ಎಂಜಿನ್ ಬೆಲೆ 5.98 ಲಕ್ಷ ರು.ಗಳಾಗಿವೆ (ಎಕ್ಸ್ ಶೋ ರೂಂ ದೆಹಲಿ).

English summary
Japanese automobile giant Honda has flagged off its 'Longest Drive Through Amazing India'. They plan to cover a distance in excess of 23,000 kilometres and will pass through almost 250 Indian towns.
Story first published: Tuesday, September 16, 2014, 12:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark