ದೇಶದ 1 ಲಕ್ಷ ಕಾರುಗಳಿಗೆ ಹೋಂಡಾ ಐ-ಡಿಟೆಕ್ ಎಂಜಿನ್ ಬಲ

Written By:

ಜಪಾನ್‌ನ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ಭಾರತದಲ್ಲೂ ಮುಂಚೂಣಿಯ ಆಟೋಮೊಬೈಲ್ ತಯಾರಕರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಜನಪ್ರಿಯ ಅಮೇಜ್ ಹಾಗೂ ಸಿಟಿ ಹಾಗೂ ಮೊಬಿಲಿಯೊದಲ್ಲಿ 1.5 ಲೀಟರ್ ಐ-ಡಿಟೆಕ್ (ಐ-ಡಿಟೆಕ್) ಎಂಜಿನ್ ಪರಿಚಯಪಡಿಸಿದ್ದ ಹೋಂಡಾ, ಹೆಚ್ಚಿನ ಮಾರಾಟ ಗಿಟ್ಟಿಸಿಕೊಂಡಿತ್ತು. ಇದೀಗ ಒಂದು ಲಕ್ಷ ಯುನಿಟ್‌ಗಳ ಮಾರಾಟ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

To Follow DriveSpark On Facebook, Click The Like Button
Honda

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಮಾರ್ಕೆಟಿಂಗ್ ಮತ್ತು ಸೇಲ್ಸ್ ಹಿರಿಯ ಉಪಾಧ್ಯಕ್ಷರಾಗಿರುವ ಜ್ಞಾನೇಶ್ವರ್ ಸೆನ್, 1.5 ಲೀಟರ್ ಐ-ಡಿಟೆಕ್ ಎಂಜಿನ್ ಮೂಲಕ ಸಂಸ್ಥೆಯು ಇದೇ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಪರಿಚಯಿಸಿದ್ದು, ಇದಕ್ಕೆ ಗ್ರಾಹಕರಿಗಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿದ್ದಾರೆ.

ಹೋಂಡಾ ಇದಕ್ಕೆ 'ಅರ್ಥ್ ಡ್ರೀಮ್ ಟೆಕ್ನಾಲಜಿ' ಎಂದು ಹೆಸರನ್ನಿಟ್ಟಿದೆ. ಇದು ಈ ವಿಭಾಗದ ಅತ್ಯಂತ ಹಗುರ ಎಂಜಿನ್ ಆಗಿದೆ. ಇದು ಪ್ರತಿ ಲೀಟರ್‌ಗೆ 26 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದನ್ನು ಪ್ರಮುಖವಾಗಿಯೂ ಭಾರತದಂತಹ ಬೆಳೆದು ಬರುತ್ತಿರುವ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗಿತ್ತು.

English summary
Japanese automobile giant Honda is among the leading premium car manufacturers in India. They were known for their refined petrol engines, however, due to increasing demand of diesel powered vehicles, they launched their very first diesel mill for a few models.
Story first published: Monday, August 25, 2014, 12:44 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark