ಸಿಟಿ ಸೆಡಾನ್ ಕಾಯುವಿಕೆ ಅವಧಿ ಇಳಿಕೆಗೆ ಹೋಂಡಾ ಕಸರತ್ತು

By Nagaraja

ವರ್ಷಾರಂಭದಲ್ಲಿ ಭಾರತ ವಾಹನ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಹೊಸ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಕಾರು 'ಹಾಟ್ ಕೇಕ್' ತರಹನೇ ಮಾರಾಟವಾಗುತ್ತಿದೆ. ಈಗ ಗ್ರಾಹಕರಿಂದ ಅತ್ಯಧಿಕ ಬೇಡಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಹೋಂಡಾ ಸಂಸ್ಥೆಯು ಈ ಬಹು ಬೇಡಿಕೆಯ ಮಧ್ಯಮ ಗಾತ್ರದ ಸೆಡಾನ್ ಕಾರಿನ ಕಾಯುವಿಕೆ ಅವಧಿ ಇಳಿಕೆ ಮಾಡಲು ಮುಂದಾಗಿದೆ.

ರಾಜಸ್ತಾನದಲ್ಲಿರುವ ತನ್ನ ತಪುಕರ ಘಟಕದಲ್ಲಿನ ನಿರ್ಮಾಣ ಸಾಮರ್ಥ್ಯವನ್ನು ದ್ವಿಗುಣ ಮಾಡುವ ಮೂಲಕ ಸಿಟಿ ವೇಟಿಂಗ್ ಪೀರೆಡ್ ಇಳಿಕೆ ಮಾಡುವುದು ಸಂಸ್ಥೆಯ ಗುರಿಯಾಗಿದೆ. ಎರಡನೇ ಶಿಫ್ಟ್ ಕೆಲಸ ಆರಂಭಿಸುವ ಮೂಲಕ 5,000 ಯುನಿಟ್‌ಗಳಿಷ್ಟಿದ್ದ ನಿರ್ಮಾಣ ಸಾಮರ್ಥ್ಯ 10,000ಕ್ಕೆ ಏರಿಕೆಯಾಗಲಿದೆ.


ಸದ್ಯ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಸಿಟಿ ಸೆಡಾನ್ ಲಭ್ಯವಿದೆ. ಇದು ಮ್ಯಾನುವಲ್ ಅಂತೆಯೇ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲೂ ಲಭ್ಯವಿರುತ್ತದೆ. ಇದರ ಆಟೋಮ್ಯಾಟಿಕ್ ವೆರಿಯಂಟ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಲಿದೆ.

ಕಾರ್ ಕೇರ್ ಸೆಟ್ - ಸೀಮಿತ ಆಫರ್ ತ್ವರೆ ಮಾಡಿ

ನೂತನ ಹೋಂಡಾ ಸಿಟಿ ಪೆಟ್ರೋಲ್ ಕಾರು 1497 ಸಿಸಿ ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತಿದ್ದು, 117 ಅಶ್ವಶಕ್ತಿ (145 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಪ್ರತಿ ಲೀಟರ್‌ಗೆ 17.8 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅದೇ ರೀತಿ 1498ಸಿಸಿ ಡೀಸೆಲ್ ಎಂಜಿನ್ ಗರಿಷ್ಠ 99 ಅಶ್ವಶಕ್ತಿ (200 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಪ್ರತಿ ಲೀಟರ್‌ಗೆ 26 ಕೀ.ಮೀ. ಮೈಲೇಜ್ ನೀಡಲಿದೆ.

honda city

ಬಲ್ಲ ಮೂಲಗಳ ಪ್ರಕಾರ ಸಿಟಿ ಕಾರನ್ನು ಹೊಸದಾಗಿ ಬುಕ್ಕಿಂಗ್ ಮಾಡಿದ ಗ್ರಾಹಕರು ಕನಿಷ್ಠ ಮೂರು ತಿಂಗಳು ತಮ್ಮ ಕನಸಿನ ಕಾರಿನ ಆಗಮನಕ್ಕಾಗಿ ಕಾಯಬೇಕಾಗಿದೆ. ಇನ್ನೊಂದೆಡೆ ಈಗಷ್ಟೇ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಸಿಯಾಝ್‌ನಿಂದಲೂ ಹೋಂಡಾಗೆ ನಿಕಟ ಪೈಪೋಟಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಬೇಡಿಕೆಗೆ ಪೂರಕವಾಗಿ ಸ್ಪಂದಿಸಬೇಕಾಗಿರುವುದು ಅನಿವಾರ್ಯವೆನಿಸಿದೆ.

ಅಂದ ಹಾಗೆ ಹೋಂಡಾ ಸಿಟಿ ದೆಹಲಿ ಎಕ್ಸ್ ಶೋ ರೂಂ ಬೆಲೆ 7.20 ಲಕ್ಷ ರು.ಗಳಿಂದ 11.06 ಲಕ್ಷ ರು.ಗಳ ವರೆಗಿದೆ. ವರ್ಷಾರಂಭದಲ್ಲಿ ಬಿಡುಗಡೆಗೊಂಡಿದ್ದ ಹೋಂಡಾ ಸಿಟಿ ದೇಶದಲ್ಲಿ ಇದುವರೆಗೆ 60,000ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿದೆ.

Most Read Articles

Kannada
English summary
Japanese automobile giant Honda has recently launched its City sedan and Mobilio MPV. The City has been the choice of many people in India. Since the launch of new generation City, the manufacturer has been struggling to keep up with huge demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X