ಹೋಂಡಾ ಜಾಝ್ ಭಾರತ ಲಾಂಚ್ ಇನ್ನು ಮುಂದಕ್ಕೆ?

By Nagaraja

ನಾವು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಹೋಂಡಾ ಕಾರ್ಸ್ ಇಂಡಿಯಾ, ಮಾರ್ಕೆಟಿಂಗ್ ಆಂಡ್ ಸೇಲ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಜಾನೇಶ್ವರ ಸೆನ್ ಜೊತೆ ಮಾತುಕತೆ ನಡೆಸಿದ್ದೆವು. ಈ ಸಂದರ್ಭದಲ್ಲಿ ಹೋಂಡಾ ಜಾಝ್ ಸೇರಿದಂತೆ ಮುಂಬರುವ ಆವೃತ್ತಿಗಳ ಬಗ್ಗೆ ಮಾತುಕತೆ ನಡೆಸಿದ್ದೆವು.

ಈ ಸಂದರ್ಭದಲ್ಲಿ ಪ್ರತಿಸಿಸಿದ ಅವರು, ಜಾಝ್ ಭಾರತ ಪ್ರವೇಶ ಖಚಿತವಾಗಿದೆ. ಆದರೆ ಲಾಂಚ್ ದಿನಾಂಕ ಪ್ರಕಟವಾಗಿಲ್ಲ. ಬಹುತೇಕ ಇದೇ ಸಾಲಿನಲ್ಲಿ (2015 ಮಾರ್ಚ್‌ ಮುಂಚಿತವಾಗಿ) ಬಿಡುಗಡೆಯಾಗಲಿದೆ ಎಂದಿದ್ದಾರೆ.

Honda Jazz

ಹಾಗಿದ್ದರೂ ಜಾಝ್ ಯಾವ ಘಟಕದಲ್ಲಿ ನಿರ್ಮಾಣವಾಗಲಿದೆ ಎಂಬುದರ ಬಗ್ಗೆ ಗೊಂದಲಗಳು ಬಗೆಹರಿದಿಲ್ಲ. ಪ್ರಸ್ತುತ ರಾಜಸ್ತಾನದ ತಕಪುರ ಹಾಗೂ ಗ್ರೇಟರ್ ನೋಯ್ಡಾದ ಘಟಕಗಳು ಪಟ್ಟಿಯಲ್ಲಿವೆ.

ನೂತನ ಹೋಂಡಾ ಜಾಝ್ ಸ್ಪರ್ಧಾತ್ಮಕ ದರಗಳಲ್ಲಿ ಆಗಮಿಸಲಿದೆ. ಈ ನಿಟ್ಟಿನಲ್ಲಿ ಉತ್ಪಾದನೆಯನ್ನು ಸ್ಥಳೀಯಗೊಳಿಸಿರುವುದು ನೆರವಾಗಲಿದೆ.

ಅಂದ ಹಾಗೆ ಸಿಟಿ ಎಂಜಿನ್ ಜಾಝ್‌ನಲ್ಲಿ ಬಳಕೆಯಾಗುವ (ಇನ್ನು ಅಧಿಕೃತವಾಗಿಲ್ಲ) ಸಾಧ್ಯತೆಯಿದೆ. ಹಾಗೆಯೇ ಸಿವಿಟಿ ಆಟೋಮ್ಯಾಟಿಕ್ ವೆರಿಯಂಟ್ ಬಹುತೇಕ ಖಚಿತವಾಗಿದೆ.

Most Read Articles

Kannada
English summary
We recently interacted with Mr. Jnaneswar Sen, Senior Vice President Marketing and Sales, Honda Cars India during a round table conference held in Bangalore. Among various topics discussed were the upcoming Mobilio MPV and Jazz premium hatchback.
Story first published: Wednesday, May 7, 2014, 16:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X