ಇದೀಗ ಅಧಿಕೃತ; ಜುಲೈನಲ್ಲಿ ಮೊಬಿಲಿಯೊ ಲಾಂಚ್

By Nagaraja

ಅಂತೂ ಇಂತೂ ಇದೀಗ ಎಲ್ಲವೂ ಅಂತಿಮವಾಗಿದ್ದು, ಬಹುನಿರೀಕ್ಷಿತ ಹೋಂಡಾ ಮೊಬಿಲಿಯೊ, ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಇದೇ ಬರುವ ಜುಲೈ ತಿಂಗಳಲ್ಲಿ ಲಾಂಚ್ ಆಗಲಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟಿರುವ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ದೇಶದ ವಾಹನ ಪ್ರೇಮಿಗಳ ಕಾಯುವಿಕೆಗೆ ಕೊನೆಗೂ ಅಂತ್ಯ ಹಾಡಿದೆ.

ಮೊಬಿಲಿಯೊ ಪ್ರಸಕ್ತ ಸಾಲಿನಲ್ಲಿ ಹೋಂಡಾದಿಂದ ಬಿಡುಗಡೆಯಾಗಲಿರುವ ಎರಡನೇ ಕಾರಾಗಿರಲಿದೆ. ಈ ಹಿಂದೆ ಜನವರಿ ತಿಂಗಳಲ್ಲಿ 2014 ಸಿಟಿ ಸೆಡಾನ್ ಕಾರನ್ನು ಲಾಂಚ್ ಮಾಡಿತ್ತಲ್ಲದೆ ಭರ್ಜರಿ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

Honda Mobilio

ದೇಶದ ಎಂಪಿವಿ ಸೆಗ್ಮೆಂಟ್‌ನಲ್ಲಿ ಹೊಸ ನಿರೀಕ್ಷೆಗಳಿಗೆ ಕಾರಣವಾಗಿರುವ ಮೊಬಿಲಿಯೊ, ಆಕರ್ಷಕ ಶೈಲಿ ಹಾಗೂ ವಿಶಾಲವಾದ ಒಳಮೈ ಪಡೆದುಕೊಂಡಿದೆ. ಇದು ಗಾತ್ರದಲ್ಲಿ ಟೊಯೊಟಾದಷ್ಟು ದೊಡ್ಡದಾಗಿಲ್ಲವಾದರೂ ಮಾರುತಿ ಎರ್ಟಿಗಾ ಹಾಗೂ ಷೆವರ್ಲೆ ಎಂಜಾಯ್‌ಗಿಂತಲೂ ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿರಲಿದೆ.

ಹೋಂಡಾ ಪ್ರಕಾರ, ಈ ಏಳು ಸೀಟುಗಳ ಎಂಪಿವಿ ಕಾರು, ದೊಡ್ಡ ಕುಟುಂಬಗಳಿಗೆ ಹೆಚ್ಚು ಯೋಗ್ಯವೆನಿಸಲಿದೆ. ಅಲ್ಲದೆ ದೊಡ್ಡ ಸೆಡಾನ್ ಅಥವಾ ಎಸ್‌ಯುವಿ ಖರೀದಿಸುವುದನ್ನು ತಪ್ಪಿಸಬಹುದಾಗಿದೆ. ಇದು ಸಿಟಿ ಜೊತೆ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ ಹಂಚಿಕೊಳ್ಳಲಿದೆ. ಆದರೆ ಆಟೋಮ್ಯಾಟಿಕ್ ವೆರಿಯಂಟ್ ಕೊರತೆ ಕಾಡಲಿದೆ.

ಇನ್ನು ದರದ ಬಗ್ಗೆ ಬಿಡುಗಡೆ ವೇಳೆಯಷ್ಟೇ ಮಾಹಿತಿ ಹೊರಬೀಳಲಿದೆ. ಈ ಮೂಲಕ ದೇಶದ ವಾಹನ ಮಾರುಕಟ್ಟೆಯಲ್ಲಿ ಅಮೇಜ್, ಸಿಟಿ ಬಳಿಕ ಹೋಂಡಾ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Honda has officially confirmed that it will launch the Mobilio MPV in India during the month of July.
Story first published: Friday, May 23, 2014, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X