ಹ್ಯುಂಡೈನಿಂದ 2015ರಲ್ಲಿ 2 ಮಿನಿ ಎಸ್‌ಯುವಿ, 2016ರಲ್ಲಿ ಎಂಪಿವಿ

Written By:

ದೇಶದ ಅತಿ ದೊಡ್ಡ ರಫ್ತುದಾರ ಹಾಗೂ ಎರಡನೇ ಅತಿ ದೊಡ್ಡ ವಾಹನ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆಯು ಮುಂದಿನೆರಡು ವರ್ಷಗಳಲ್ಲಿ ಮಹತ್ತರ ಯೋಜನೆಗಳನ್ನು ಹೊಂದಿದೆ.

ವರದಿಗಳ ಪ್ರಕಾರ ಹ್ಯುಂಡೈ ಸಂಸ್ಥೆಯು ಮುಂದಿನ ವರ್ಷ ಎರಡು ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳನ್ನು ಬಿಡುಗಡೆ ಮಾಡಲಿದೆ. ಇದನ್ನು 2016ರಲ್ಲಿ ಬಹು ಬಳಕೆಯ ವಾಹನ ಹಿಂಬಾಲಿಸಲಿದೆ.

To Follow DriveSpark On Facebook, Click The Like Button
hyundai

ಪ್ರಸಕ್ತ ಸಾಲಿನಲ್ಲಿ ನಾಲ್ಕು ಲಕ್ಷ ಮಾರಾಟವನ್ನು ತಲುಪಿರುವ ಹ್ಯುಂಡೈ ಹೊಸ ಮೈಲುಗಲ್ಲನ್ನು ತಲುಪಿದೆ. ಅಲ್ಲದೆ ಡಿಸೆಂಬರ್ ಅಂತ್ಯದ ವೇಳೆ ಈ ಸಂಖ್ಯೆ 4,11,000ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಈ ಬಹುನಿರೀಕ್ಷಿತ ಮಾದರಿಗಳು ಶೇ.90ರಷ್ಟು ಭಾರತದಲ್ಲೇ ನಿರ್ಮಾಣವಾಗಲಿರುವುದು ಮಾರುಕಟ್ಟೆಯಲ್ಲಿ ಸ್ಮರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಅಂತೆಯೇ ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಹೀಂದ್ರ ಸ್ಕಾರ್ಪಿಯೊ ಸವಾಲುಗಳನ್ನು ಎದುರಿಸಲಿದೆ.

ಹ್ಯುಂಡೈನ ಎರಡು ಕಾಂಪಾಕ್ಟ್ ಎಸ್‌ಯುವಿಗಳು 9ರಿಂದ 10 ಲಕ್ಷ ರು.ಗಳಷ್ಟು ಪ್ರಾರಂಭಿಕ ಬೆಲೆ ಹೊಂದಿರುವ ಸಾಧ್ಯತೆಯಿದೆ. ಅಂತೆಯೇ ಎಂಪಿವಿ ಮಾದರಿಯು ಟೊಯೊಟಾ ಇನ್ನೋವಾಗೆ ಸವಾಲಾಗಿರಲಿದೆ.

English summary
South- Korean car maker Hyundai motors is planning to launch two compact SUVs next year, New MPV India by 2016.
Story first published: Monday, December 29, 2014, 10:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark